(ಮೌಲ್ವಿಯೆಂದರೆ ಇಸ್ಲಾಂನ ಧಾರ್ಮಿಕ ಮುಖಂಡ)
ಭಾರತೀಯ ಸೇನೆಯ ಗೌಪ್ಯ ಮಾಹಿತಿಯನ್ನು ಜಿಹಾದಿ ಭಯೋತ್ಪಾದಕ ಸಂಘಟನೆಗೆ ಪೂರೈಸಿದರು !
ಕಿಶ್ತವಾಡ (ಜಮ್ಮೂ-ಕಾಶ್ಮೀರ) – ಇಲ್ಲಿಯ ಒಂದು ಮಸೀದಿಯ ೨೨ ವರ್ಷ ಮೌಲ್ವಿಗೆ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಗೌಪ್ಯ ಮಾಹಿತಿಯನ್ನು ಪೂರೈಸಿರುವ ಪ್ರಕರಣದಲ್ಲಿ ಬಂಧಿಸಲಾಯಿತು. ಅಬ್ದುಲ ವಾಹಿದ ಹೆಸರಿನ ಮೌಲ್ವಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗೆ ‘ಕಶ್ಮೀರಿ ಜಾಂಬಾಜ ಫೋರ್ಸ’ಗೆ ಭಾರತೀಯ ಸೈನ್ಯದ ಗೌಪ್ಯ ಮಾಹಿತಿಯನ್ನು ಪೂರೈಸುತ್ತಿದ್ದನು. ಭಾರತೀಯ ಸೇನೆಯ ಗೂಢಚಾರ ಇಲಾಖೆಗೆ ಅವನ ಮಾಹಿತಿ ಸಿಕ್ಕ ಬಳಿಕ ಅವರು ಪೊಲೀಸರಿಗೆ ತಿಳಿಸಿದ ಬಳಿಕ ವಾಹಿದನನ್ನು ಬಂಧಿಸಲಾಯಿತು. ವಾಹಿದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ವಾಹಿದ ಒಂದು ಮದರಸಾದಲ್ಲಿ ಕಲಿಸುವ ಕೆಲಸ ಮಾಡುತ್ತಿದ್ದನು. (ಇಲ್ಲಿಯ ಮಕ್ಕಳಿಗೆ ಅವನು ಏನು ಕಲಿಸಿದ್ದಾನೆ ಎನ್ನುವುದನ್ನು ಈಗ ಕಂಡು ಹಿಡಿಯುವ ಆವಶ್ಯಕತೆಯಿದೆ. ಇಂತಹ ಘಟನೆಯಿಂದ ದೇಶದಲ್ಲಿರುವ ಮದರಸಾಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !- ಸಂಪಾದಕರು) ವಿಶೇಷವೆಂದರೆ ಕಿಶ್ತವಾಡದಿಂದ ಜಿಹಾದಿ ಭಯೋತ್ಪಾದಕರು ಬೃಹತ ಪ್ರಮಾಣದಲ್ಲಿ ಕಾಶ್ಮೀರದಲ್ಲಿ ನುಸುಳುತ್ತಾರೆ.
ISI agent arrested from Jammu and Kashmir’s Kishtwarhttps://t.co/KQMbgnVGXj
— The Indian Express (@IndianExpress) September 3, 2022
ವಾಹಿದನ ವಿಚಾರಣೆಯಲ್ಲಿ, ಡಿಸೆಂಬರ ೨೦೨೦ ರಲ್ಲಿ ಅವನು ಫೇಸಬುಕ ಮೂಲಕ ತೈಯಬ ಫಾರೂಕಿ ಅಲಿಯಾಸ ಉಮರ ಖತಾಬ ಈ ಕಶ್ಮೀರಿ ಜಾಂಬಾಜ ಫೋರ್ಸನ ಕಮಾಂಡರನ ಸಂಪರ್ಕದಲ್ಲಿ ಬಂದಿದ್ದನು. ತದನಂತರ ಅವನು ಪಾಕಿಸ್ತಾನ ಗೂಢಚಾರ ಸಂಸ್ಥೆ ಐ.ಎಸ್.ಐ.ನೊಂದಿಗೆ ಸಂಪರ್ಕದಲ್ಲಿ ಬಂದನು. ತದನಂತರ ಅವನು ತನ್ನ ಸಂಪರ್ಕ ಸಂಖ್ಯೆಯನ್ನು ನೀಡಿದ್ದನು.
ಸಂಪಾದಕೀಯ ನಿಲುವು
|