ಭಕ್ತರಿಗೆ ವಸ್ತ್ರಾಲಂಕಾರದ ಪೂಜೆಗಾಗಿ ೧೪ ವರ್ಷಗಳ ವರೆಗೆ ಕಾಯಬೇಕಾಯಿತು !
ತಿರುಪತಿ (ಆಂಧ್ರಪ್ರದೇಶ) – ಓರ್ವ ಭಕ್ತನಿಗೆ ವಿಶೇಷ ಪೂಜೆಗಾಗಿ ೧೪ ವರ್ಷಗಳ ವರೆಗೆ ಕಾಯುವಂತೆ ಮಾಡಿರುವ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ತಿರುಮಲಾ ತಿರುಪತಿ ದೇವಸ್ಥಾನವು ಆ ಭಕ್ತನಿಗೆ ೫೦ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಹಾಗೇಯೇ ‘ಈ ಭಕ್ತನಿಗೆ ವಸ್ತ್ರಾಲಂಕಾರದ ಸೇವೆಗಾಗಿ ವರ್ಷದಲ್ಲಿ ಹೊಸ ದಿನಾಂಕವನ್ನು ನೀಡಬೇಕು’, ಎಂದು ಸಹ ನ್ಯಾಯಾಲಯವು ಈ ಆದೇಶದಲ್ಲಿ ಹೇಳಿದೆ.
ತಿರುಮಲಾ ತಿರುಪತಿ ದೇವಸ್ಥಾನದ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವ ಮೊಟ್ಟ ಮೊದಲ ಬಾರಿಯಾಗಿದೆ. ಕೆ.ಆರ್. ಹರಿ ಭಾಸ್ಕರ ಎಂದು ಈ ದೂರು ನೀಡಿರುವ ಭಕ್ತನ ಹೆಸರಾಗಿದೆ.
Tirupati told to pay devotee Rs 50 lakh for 14-year wait https://t.co/FAzv139myw
— TOI Vijaywada (@TOIVijaywada) September 4, 2022
೧. ಭಾಸ್ಕರರವರು ೨೦೦೬ರಲ್ಲಿ ೧೨ ಸಾವಿರದ ೨೫೦ ರೂಪಾಯಿಗಳನ್ನು ತುಂಬಿ ವಸ್ತ್ರಾಲಂಕಾರ ಪೂಜೆಗಾಗಿ ನೋಂದಣಿ ಮಾಡಿದ್ದರು. ಈ ಹಣವನ್ನು ಈಗ ಬಡ್ಡಿಯೊಂದಿಗೆ ಮರಳಿ ಹಿಂತಿರುಗಿಸುವಂತೆ ನ್ಯಾಯಾಲಯವು ಆದೇಶಿಸಿದೆ.
೨. ಕೊರೋನಾ ಮಹಾಮಾರಿಯ ಸಮಯದಲ್ಲಿ ಮಾರ್ಚ ೨೦೨೦ರಿಂದ ತಿರುಮಲಾ ತಿರುಪತಿ ದೇವಸ್ಥಾನವನ್ನು ೮೦ ದಿನಗಳಕಾಲ ದರ್ಶನಕ್ಕಾಗಿ ಮುಚ್ಚಲಾಗಿತ್ತು. ಆದ್ದರಿಂದ ದೇವಸ್ಥಾನದಲ್ಲಾಗುವ ವಸ್ತ್ರಾಲಂಕಾರ ಸಹಿತ ಇತರ ಸೇವೆಗಳನ್ನೂ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ದೇವಸ್ಥಾನವು ಭಾಸ್ಕರರವರಿಗೆ ‘ಹೊಸ ದಿನಾಂಕ ಬೇಕೆ ಅಥವಾ ಹಣವನ್ನು ಹಿಂತಿರುಗಿಸಬೇಕಾ ?’, ಎಂದು ವಿಚಾರಿಸಿತ್ತು. ಈ ಸಮಯದಲ್ಲಿ ಭಾಸ್ಕರನವರು ‘ಹೊಸ ದಿನಾಂಕ ನೀಡಬೇಕು’ ಎಂದು ಮನವಿ ಮಾಡಿದ್ದರು; ಆದರೆ ಅದು ಸಾಧ್ಯವಿಲ್ಲವೆಂದು ದೇವಸ್ಥಾನವು ತಿಳಿಸಿದಾಗ ಭಾಸ್ಕರರವರು ಗ್ರಾಹಕ ನ್ಯಾಯಾಲಯದಲ್ಲಿ ದೇವಸ್ಥಾನದ ಸಮಿತಿಯ ವಿರುದ್ಧ ದೂರನ್ನು ದಾಖಲಿಸಿದ್ದರು.
ಸಂಪಾದಕೀಯ ನಿಲುವುದೇವಸ್ಥಾನಗಳ ಸರಕಾರೀಕರಣವಾದಾಗ ಹೀಗೆಯೇ ಆಗುತ್ತದೆ ! |