ದುಮಕಾ (ಝಾರ್‌ಖಂಡ)ದಲ್ಲಿ ಬಲತ್ಕಾರದನಂತರ ಗರ್ಭಿಣಿಯಾದ ಹಿಂದೂ ಹುಡುಗಿಯನ್ನು ಆರೊಪಿ ಮುಸಲ್ಮಾನ ಯುವಕನಿಂದ ಹತ್ಯೆ

ಹತ್ಯೆ ಮಾಡಿ ಶವವನ್ನು ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ನೇತಾಡಿಸಿ ಆತ್ಮಹತ್ಯೆ ಎಂದು ತೋರಿಸಲು ಪ್ರಯತ್ನ

ದುಮಕಾ (ಝಾರ್‌ಖಂಡ) – ಕೆಲವು ದಿನಗಳ ಹಿಂದೆ ಇಲ್ಲಿ ಶಾಹರೂಖ ಎಂಬ ಯುವಕನು ಅಂಕಿತಾ ಎಂಬ ಹೆಸರಿನ ಹುಡುಗಿಯ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಘಟನೆ ಗಟಿಸಿತ್ತು. ಈಗ ಶ್ರೀಅಮಡಾ ಎಂಬಲ್ಲಿ ಅರಮಾನ ಅನ್ಸಾರಿ ಎಂಬವನು ಬಲತ್ಕಾರ ಮಾಡಿದ್ದ ಅಪ್ರಾಪ್ತ ಹುಡುಗಿ ಗರ್ಭಿಣಿಯಾಗಿದ್ದರಿಂದ ಅವಳ ಕತ್ತು ಹಿಸುಕಿ ಕೊಲೆ ಮಾಡಿದನು ಹಾಗೂ ‘ಆಕೆಯ ಆತ್ಮಹತ್ಯೆಯೆಂದು ಅನಿಸಬೇಕೆಂದು’ ಶವವನ್ನು ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ನೇತಾಡಿಸಿದನು. ಅನ್ಸಾರಿ ಈ ಹುಡುಗಿಯ ಮೇಲೆ ಅನೇಕ ದಿನಗಳಿಂದ ಬಲತ್ಕಾರ ಮಾಡುತ್ತಿದ್ದನು. ಈ ಹುಡುಗಿ ಆದಿವಾಸಿ ಸಮಾಜದವಳಾಗಿದ್ದಳು. ಶವಪರೀಕ್ಷೆ ಮಾಡಿದಾಗ ಈ ಹುಡುಗಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆಯೆಂದು ಹಾಗೂ ಅವಳು ಗಬೀನೀ ಆಗಿದ್ದಳು ಎಂಬುದು ತಿಳಿಯಿತು. ಪೊಲೀಸರು ಅರಮಾನನನ್ನು ಬಂಧಿಸಿದ್ದಾರೆ.


ಈ ಹುಡುಗಿ ಕೂಲಿ ಕೆಲಸ ಮಾಡುತ್ತಿದ್ದಳು. ೧೪ ವರ್ಷದ ಈ ಹುಡುಗಿಯನ್ನು ಕೆಲಸಕ್ಕೆ ಹೋಗುವಾಗ ಅರಮಾನನು ಅಡ್ಡಗಟ್ಟಿ ಅವಳ ಮೇಲೆ ಬಲತ್ಕಾರ ಮಾಡಿದನು. ಅನಂತರ ಕೆಲವುದಿನಗಳ ವರೆಗೆ ಅವನು ನಿರಂತರವಾಗಿ ಬಲತ್ಕಾರ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಇಂತಹ ವಾಸನಾಂಧರನ್ನು ಇಸ್ಲಾಮೀ ದೇಶದ ಹಾಗೆ ಶರಿಯತ ಕಾನೂನಿನ ಪ್ರಕಾರ ಸೊಂಟದ ವರೆಗೆ ಹುಗಿದು ಕಲ್ಲು ಹೊಡೆದು ಕೊಲೆ ಮಾಡುವ ಶಿಕ್ಷೆಯನ್ನು ನೀಡಬೇಕೆಂದು ಯಾರಾದರೂ ಬೇಡಿಕೆ ಮಾಡಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ !