ಚೀನಾದ ಶಿನಜಿಯಾಂಗನಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗ

ಆರೋಪವನ್ನು ತಳ್ಳಿಹಾಕಿದ ಚೀನಾ !

ಜಿನಿವಾ (ಸ್ವಿಡ್ಜರಲ್ಯಾಂಡ) – ಚೀನಾದ ಶಿನಜಿಯಾಂಗ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘಟನೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅಲ್ಲಿರುವ ಮುಸಲ್ಮಾನರಿಗೆ ಗಂಭೀರವಾಗಿ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ‘ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ’, ಎಂದೂ ಈ ವರದಿಯಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಚ್ಚಾಯುಕ್ತ ಮಿಶೆಲ್ ಬ್ಯಾಚಲೆಟ ಇವರ ೪ ವರ್ಷದ ಕಾಲಾವಧಿ ಮುಗಿಯುವ ಮೊದಲು ಜಿನಿವಾದ ಪರಿಷತ್ತಿನಲ್ಲಿ ಬುಧವಾರ ರಾತ್ರಿ ಈ ವರದಿಯನ್ನು ಪ್ರಕಟಿಸಲಾಯಿತು. ಈ ವರದಿಯನ್ನು ತಯಾರಿಸಲು ಸುಮಾರು ಒಂದು ವರ್ಷದ ಕಾಲಾವಧಿ ತಗುಲಿತು. ಬ್ಯಾಚಲೆಟ ಇವರ ಕಾರ್ಯಕಾಲ ಮುಗಿಯಲು ಕೇವಲ ೧೩ ನಿಮಿಷಗಳ ಮೊದಲು ಮಾನವ ಹಕ್ಕುಗಳ ಉಲ್ಲಂಘನೆಯ ಈ ವರದಿಯನ್ನು ಪರಿಷತ್ತಿನ ಎದುರು ಇಡಲಾಯಿತು. ‘ಚೀನಾದಿಂದ ಶಿನಜಿಯಾಂಗ ಪ್ರದೇಶದ ಸುಮಾರು ೧೦ ಲಕ್ಷ ಉಘುರ ಮುಸಲ್ಮಾನರನ್ನು ವಶಕ್ಕೆ ಪಡೆದು ಅವರ ಮೇಲೆ ಅತ್ಯಾಚಾರ ಮಾಡುತ್ತಿದೆ’, ಎಂದು ಆರೋಪಿಸಲಾಗುತ್ತಿದೆ. ಈ ಆರೋಪ ಸತ್ಯವಾಗಿದೆಯೆಂದು ಈ ವರದಿಯಿಂದ ಸತ್ಯಾಂಶ ಹೊರಬಂದಿದೆ. ಇನ್ನೊಂದೆಡೆ ಶಿನಜಿಯಾಂಗ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಆರೋಪವನ್ನು ಚೀನಾ ತಳ್ಳಿಹಾಕಿದೆ. ಈ ಪ್ರದೇಶದಲ್ಲಿ ಕಟ್ಟರವಾದಿಗಳನ್ನು ಹಿಡಿತದಲ್ಲಿಡಲು ಔದ್ಯೋಗಿಕ ಪ್ರಶಿಕ್ಷಣ ಕೇಂದ್ರವನ್ನು ನಡೆಸಲಾಗುತ್ತಿದೆಯೆಂದು ಚೀನಾ ಹೇಳಿದೆ.

ಬ್ಯಾಚಲೆಟ ಇವರು ಮಾತನಾಡುತ್ತಾ, ಶಿನಜಿಯಾಂಗ ಪ್ರದೇಶದ ಸಮಸ್ಯೆ ಭೀಕರವಾಗಿದೆ. ಈ ಸಮಸ್ಯೆ ರಾಷ್ಟ್ರೀಯ ಸ್ತರದಲ್ಲಿ ಉಚ್ಚಪದಾಧಿಕಾರಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳ ಕಡೆಗೆ ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಶಿನಜಿಯಾಂಗ ಉಯಿಗರ ಸ್ವಾಯತ್ತ ಪ್ರದೇಶದ ಪರಿಸ್ಥಿತಿಯ ಬಗ್ಗೆ ನಿಗಾವಹಿಸುವ ಆವಶ್ಯಕತೆಯಿದೆ ಎಂದು ಬ್ಯಾಚಲೆಟ ಇವರು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ವಿಶ್ವಸಂಸ್ಥೆ ಚೀನಾಗೆ ಈ ವಿಷಯದಲ್ಲಿ ವಿಚಾರಿಸಿ ಮುಸಲ್ಮಾನರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವ ಧೈರ್ಯ ತೋರಿಸುವರೇ ?