ಪಾಕಿಸ್ತಾನಿ ಸೈನ್ಯದಿಂದ ಯುವತಿಯರ ಮೂಲಕ ಭಾರತೀಯ ಸೈನಿಕರನ್ನು ಗುರಿ ಮಾಡುವುದಕ್ಕಾಗಿ ವಿಶೇಷ ಪಡೆ !

ನವ ದೆಹಲಿ – ಪಾಕಿಸ್ತಾನದ ಗೂಢಚಾರ ಸಂಘಟನೆ ಐ.ಎಸ್.ಐ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಸೈನಿಕರನ್ನು ಮಹಿಳೆಯರ ಮೂಲಕ ಬಲೆಗೆ ಸಿಲುಕೀಸಲು ಪ್ರಯತ್ನಿಸುತ್ತಿದೆ. ಇದರಲ್ಲಿ ಅವರು ಯಶಸ್ವಿ ಆಗಿರುವುದು ಅನೇಕ ಘಟನೆಯಿಂದ ಬೆಳಕಿಗೆ ಬಂದಿದೆ. ಐ.ಎಸ್.ಐ. ಇದಕ್ಕಾಗಿ ಮಹಿಳೆಯರ ೧೦ ಪಡೆಗಳನ್ನು ಸ್ಥಾಪನೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಇದರಲ್ಲಿ ಪ್ರತಿಯೊಂದರಲ್ಲಿ ೫೦ ಕ್ಕು ಹೆಚ್ಚು ಯುವತಿಯರ ಸಮಾವೇಶವಿದೆ. ಈ ತರುಣಿಯರಿಗೆ ಭಾರತೀಯ ಸೈನಿಕರನ್ನು ಬಲೆಗೆ ಬೀಳಿಸುವ ಪ್ರಶಿಕ್ಷಣ ನೀಡಲಾಗುತ್ತಿದೆ. ಭಾರತೀಯ ಗೂಢಚಾರ ಸಂಸ್ಥೆಯಿಂದ ಈ ವಿಷಯವಾಗಿ ಸೈನಿಕರನ್ನು ಜಾಗರೂಕತೆಯಿದ ಇರಲು ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಿಂದ ಅಜ್ಞಾತ ವ್ಯಕ್ತಿಗಳ ಸ್ನೇಹದ ವಿನಂತಿ (ಫ್ರೆಂಡ್ ರಿಕ್ವೆಸ್ಟ್) ಸ್ವೀಕರಿಸದಿರಿ, ಎಂದು ಸೂಚನೆ ನೀಡಲಾಗಿದೆ.

ಭಾರತೀಯ ಸೈನ್ಯದಳದಲ್ಲಿನ ಒಬ್ಬ ಹಿರಿಯ ಗೂಢಚಾರ ಅಧಿಕಾರಿಯಿಂದ, ಈ ಯುವತಿಯರು ಪಾಕಿಸ್ತಾನದ ಹೈದರಾಬಾದನಿಂದ ಪಾಕಿಸ್ತಾನ ಸೈನ್ಯದ ಇಂಟಲಿಜೆನ್ಸ್ ಯೂನಿಟ್ ೪೧೨ ಮೂಲಕ ಪ್ರಶಿಕ್ಷಣ ನೀಡಲಾಗುತ್ತಿದೆ. ಅವರಿಗೆ ಹಿಂದಿ ಮತ್ತು ಇಂಗ್ಲೀಷ್ ಮಾತನಾಡುವ ಶಿಕ್ಷಣ ನೀಡಲಾಗಿದೆ. ಅವರ ಗುರಿ ರಾಜಸ್ಥಾನ ಮತ್ತು ಗುಜರಾತ ಗಡಿಯ ಸೈನ್ಯದ ನೆಲೆಯಲ್ಲಿ ನೇಮಕಗೊಂಡಿರುವ ಭಾರತೀಯ ಸೈನ್ಯದ ಸೈನಿಕರಾಗಿದ್ದಾರೆ. ಪಾಕಿಸ್ತಾನದ ಈ ಮಹಿಳಾ ಪಾಕಿಸ್ತಾನಿಯರು ಸೈನ್ಯದಲ್ಲಿ ಬ್ರಿಗೇಡಿಯರ ಮತ್ತು ಕ್ಯಾಪ್ಟನ್ ಈ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಭಾರತೀಯ ಸೈನಿಕರನ್ನು ಬಲೆಗೆ ಹೇಗೆ ಬೀಳಿಸುತ್ತಾರೆ ?

ಈ ಯುವತಿಯರಿಗೆ ಪ್ರಶಿಕ್ಷಣ ನೀಡಿದ ನಂತರ ಅವರಿಗೆ ಒಂದು ಉಪಹಾರಗೃಹದ ಕೊಣೆಯಲ್ಲಿ ಇರಿಸಲಾಗುತ್ತದೆ. ಈ ಯುವತಿಯರು ರಿಯಾ, ಖುಷಿ, ಕಲ್ಪನಾ, ನೀತು, ಗೀತು, ಅವನಿ, ಮುಸ್ಕಾನ್, ಹರಲಿನ ಈ ರೀತಿಯ ಹಿಂದೂ ಹೆಸರುಗಳು ನೀಡಲಾಗುತ್ತದೆ. ಇಲ್ಲಿಂದ ಅವರು ಭಾರತೀಯ ಸೈನಿಕರನ್ನು ಸಂಪರ್ಕಿಸುತ್ತಿರುತ್ತಾರೆ. ಈ ಯುವತಿಯರ ಮೊದಲು ಸುಳ್ಳು ಪರಿಚಯ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯುತ್ತಾರೆ ಮತ್ತು ಅದರಿಂದ ಭಾರತೀಯ ಸೈನಿಕರಿಗೆ ಸ್ನೇಹದ ವಿನಂತಿ ಕಳಿಸುತ್ತಾರೆ. ನಕಲಿ ಖಾತೆಯಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಇಡುತ್ತಾರೆ. ಪ್ರತಿದಿನ ೫೦ ಸೈನಿಕರನ್ನು ಸಂಪರ್ಕಿಸುವ ಧ್ಯೇಯ ನೀಡಲಾಗುತ್ತದೆ. ಸೈನಿಕರು ವಿನಂತಿ ಸ್ವೀಕರಿಸಿದ ನಂತರ ಆ ಸೈನಿಕರ ಜೊತೆ ಪ್ರೀತಿಯಿಂದ ಹಾಗೂ ಅಶ್ಲೀಲ ಸಂಭಾಷಣೆ ನಡೆಸುತ್ತಾರೆ. ಹಾಗೂ ಕೆಲವು ಸಾರಿ ಈ ಯುವತಿಯರು ವಿವಾಹದ ವಚನ ನೀಡುತ್ತಾರೆ. ಇಬ್ಬರಲ್ಲಿನ ಸಂವಾದ ಸಂರಕ್ಷಿಸ ಇಡುತ್ತಾರೆ. ಅದರ ಆಧಾರದಲ್ಲಿ ಆ ಸೈನಿಕರನ್ನು ಬ್ಲಾಕ್ ಮೇಲ್ ಮಾಡಿ ಅವರಿಂದ ಭಾರತೀಯ ಸೈನ್ಯದ ಗೌಪ್ಯ ಮಾಹಿತಿ ತರಸಿಕೊಳ್ಳುತ್ತಾರೆ. ಒಂದು ವೇಳೆ ಈ ಮಾಹಿತಿ ನೀಡದೆ ಇದ್ದರೆ, ಅವರಲ್ಲಿ ನಡೆದಿರುವ ಸಂವಾದ ಬಹಿರಂಗಗೊಳಿಸಿ ತೊಂದರೆ ನೀಡುವ ಬೆದರಿಕೆ ನೀಡಲಾಗುತ್ತದೆ.

ಸಂಪಾದಕೀಯ ನಿಲುವು

ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !