ಅಮೇರಿಕಾದಲ್ಲಿನ ಭಾರತೀಯ ಸಂಜಾತೆ ಸಂಸದ ರಾಜಾ ಕೃಷ್ಣಮೂರ್ತಿ ಇವರ ಬೇಡಿಕೆ

ಭಾರತೀಯ ಮಹಿಳೆಯರ ಮೇಲೆ ವರ್ಣ ದ್ವೇಷದ ಹೇಳಿಕೆ ನೀಡಿರುವ ಅಮೆರಿಕಾದ ಮಹಿಳೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಿ !

ಟೆಕ್ಸಸ್ (ಅಮೇರಿಕಾ) – ಇಲ್ಲಿ ೪ ಭಾರತೀಯ ಮಹಿಳೆಯರ ಮೇಲೆ ಒಬ್ಬ ಅಮೇರಿಕಾ ಮಹಿಳೆಯು ಕೆಲವು ದಿನಗಳ ಹಿಂದೆ ವರ್ಣ ದ್ವೇಷದ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಭಾರತೀಯ ಸಂಜಾತೆ ಅಮೇರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಇವರು ಆ ಮಹಿಳೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಅವರು, ಆರೋಪಿ ಮಹಿಳೆಯ ಮೇಲೆ ಕಾನೂನಿನ ಪ್ರಕಾರ ಮೊಕದ್ದಮೆ ನಡೆಸಿ ಆಕೆಗೆ ಪಾಠ ಕಲಿಸಬೇಕು ಎಂದು ನಾನು ಪೊಲೀಸರಿಗೆ ಕರೆ ನೀಡುತ್ತೇನೆ ಹೇಳಿದರು.