ಬಾಂಗ್ಲಾದೇಶದಲ್ಲಿ ತಯಾರಿಸಲಾಗುತ್ತಿರುವ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮುಸಲ್ಮಾನರಿಂದ ಧ್ವಂಸ !

  • ಪ್ರಧಾನಿ ಶೇಖ ಹಸೀನಾ ಮೌನವಾಗಿದ್ದರೆ, ಬಾಂಗ್ಲಾದೇಶದಲ್ಲಿನ ಹಿಂದೂಗಳು ಭಾರತೀಯ ಸೈನ್ಯದ ಸಹಾಯ ಪಡೆಯುವರು ! – ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ನ ಹೇಳಿಕೆ

  • ಭಾರತ ಸರಕಾರ ಬಾಂಗ್ಲಾದೇಶಿ ಹಿಂದೂಗಳಿಗೆ ಸಹಾಯ ಮಾಡುವರೇ ?

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮಾಣಿಕಗಂಜದ ಹರಿರಾಮಪುರ ಉಪಜಿಲ್ಲೆಯಲ್ಲಿ ತಯಾರಿಸಲಾಗುತ್ತಿರುವ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮುಸಲ್ಮಾನರು ಧ್ವಂಸಗೊಳಿಸಿದ್ದಾರೆ. ಕಳೆದ ವರ್ಷ ನವರಾತ್ರಿ ಉತ್ಸವದಲ್ಲಿ ಮುಸಲ್ಮಾನರು ಗಲಭೆ ನಡೆಸಿದ್ದರು. ಅದರಲ್ಲಿ ಅನೇಕ ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದರು ಅದರಲ್ಲಿ ಕೆಲವು ಹಿಂದೂಗಳು ಸಾವನ್ನಪ್ಪಿದ್ದರು. ಇಸ್ಕಾನ್‌ನ ಆಶ್ರಮದ ಮೇಲೆ ದಾಳಿ ನಡೆಸಿ ಅಲ್ಲಿಯ ಇಬ್ಬರು ಸಾಧುಗಳ ಹತ್ಯೆ ಮಾಡಲಾಗಿತ್ತು. ‘ಅದೇ ರೀತಿ ಈ ವರ್ಷ ಕೂಡ ಏನಾದರೂ ಷಡ್ಯಂತ್ರ ರಚಿಸಲಾಗಿದೆ’, ಎಂದು ಹೇಳಲಾಗುತ್ತಿದೆ. ‘ಪ್ರಧಾನಿ ಶೇಖ ಹಸೀನಾ ಕಳೆದ ಸಲದಂತೆ ಮೌನವಾಗಿದ್ದರೆ ಬಾಂಗ್ಲಾದೇಶದ ಹಿಂದೂಗಳು ರಾಜಾರೋಷವಾಗಿ ಭಾರತೀಯ ಸೈನ್ಯದ ಸಹಾಯ ಪಡೆಯುವರು’, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.