‘ಮೋಪಲಾ ನರಮೇಧವು ಭಾರತದ ಸ್ವಾತಂತ್ರ್ಯ ಹೋರಾಟದ ಗೌರವಶಾಲಿ ಅಧ್ಯಾಯ (ಅಂತೆ) !’ – ಕೇರಳ ವಿಧಾನಸಭೆಯ ಸಭಾಪತಿಗಳ ಹಿಂದೂ ವಿರೋಧಿ ಹೇಳಿಕೆ

ಕೇರಳ ವಿಧಾನಸಭೆಯ ಸಭಾಪತಿ ಹಾಗೂ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಎಂ ಬಿ ರಾಜೇಶ್

ತಿರುವನಂತಪುರಂ – ೧೯೨೧ ರಲ್ಲಿ ಮಲಬಾರ್‌ದಲ್ಲಿ ನಡೆದ ಮೋಪಲಾ ನರಸಂಹಾರ ಇದು ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಗೌರವಶಾಲಿ ಅಧ್ಯಾಯವಿತ್ತೆಂದು ಕೇರಳ ವಿಧಾನಸಭೆಯ ಸಭಾಪತಿ ಹಾಗೂ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಎಂ ಬಿ ರಾಜೇಶ್ ಇವರು ಆಗಸ್ಟ್ ೨೨ ರಂದು ವಿಧಾನಸಭೆಯಲ್ಲಿ ಹಿಂದೂ ವಿರೋಧಿ ಘೋಷಣೆ ಮಾಡಿದರು. ಕಾಂಗ್ರೆಸ್‌ನ ನೇತೃತ್ವದಲ್ಲಿನ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್‌ನ ಒಬ್ಬನೇ ಒಬ್ಬ ಸದಸ್ಯನು ಈ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ಮಾತನಾಡುವ ಧೈರ್ಯ ತೋರಲಿಲ್ಲ. ‘ರಾಜೇಶ ಇವರು ಮೋಪಲಾ ನರಮೇದದ ಬಗ್ಗೆ ಮಾತನಾಡಿರುವುದು ಇದು ಮೊದಲ ಬಾರಿ ಅಲ್ಲ. ಕಳೆದ ವರ್ಷ ಕ್ರಾಂತಿವೀರ ಭಗತ ಸಿಂಗ ಇವರನ್ನು ಅವಮಾನಿಸಿರುವ ಪ್ರಕರಣದಲ್ಲಿ ಅವರ ವಿರುದ್ಧ ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಲಾಗಿತ್ತು. ಅವರು ಭಗತ ಸಿಂಗ ಇವರನ್ನು ಒರಿಯಾನ ಕುನ್ನಾಥು ಕುಂಜಾಹಮ್ಮದ್ ಹಾಜಿ ಎಂಬ ಜಿಹಾದಿಯ ಜೊತೆಗೆ ತುಲನೆ ಮಾಡಿ ಅವರನ್ನು ಅವಮಾನಿಸಿದ್ದರು. ಹಾಜೀಯು ೧೯೨೧ ರಲ್ಲಿ ಹಿಂದೂ ನರಮೇದದ ನೇತೃತ್ವ ವಹಿಸಿದ್ದನು ಎಂದು ಅನೇಕ ಜನರು ಒಪ್ಪಿದ್ದಾರೆ’, ಎಂದು ಯುವ ಮೋರ್ಚಾದ ನಾಯಕನು ಹೇಳಿದರು.

ಏನಿದು ಮೋಪಲಾ ಗಲಭೆ ?

ಸಪ್ಟೆಂಬರ್ ೧೯೨೧ ರಲ್ಲಿ ಬ್ರಿಟಿಷರ ವಿರುದ್ಧ ಮುಸಲ್ಮಾನರು ಬಂಡಾಯ ಮಾಡಿದರು, ಎಂಬ ಸುಳ್ಳ ಇತಿಹಾಸ ಹೇಳಲಾಗುತ್ತದೆ. ವಾಸ್ತವದಲ್ಲಿ ಆ ಕಾಲದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ಅನೇಕ ದೌರ್ಜನ್ಯಗಳು ನಡೆಸಿ ಅವರ ಹತ್ಯೆ ಮಾಡಿದ್ದರು. ಈ ಗಲಭೆಯಲ್ಲಿ ೧೦ ಸಾವಿರ ಹಿಂದೂಗಳ ಮಾರಣಹೋಮ ನಡೆದಿತ್ತು, ಹಾಗೂ ಲಕ್ಷಾಂತರ ಹಿಂದೂಗಳು ಅಲ್ಲಿಂದ ಪಲಾಯನ ಮಾಡಿದ್ದರು ಎಂದು ಹೇಳಲಾಗುತ್ತದೆ.

ಸಂಪಾದಕೀಯ ನಿಲುವು

‘ಮೋಪಲಾ ನರಮೇಧವು ಭಾರತದ ಸ್ವಾತಂತ್ರ್ಯ ಹೋರಾಟದ ಗೌರವಶಾಲಿ ಅಧ್ಯಾಯ (ಅಂತೆ) !’ – ಕೇರಳ ವಿಧಾನಸಭೆಯ ಸಭಾಪತಿಗಳ ಹಿಂದೂ ವಿರೋಧಿ ಹೇಳಿಕೆ