ನ್ಯಾಯಾಲಯವು ಮುಸಲ್ಮಾನ ಪುರುಷರನ್ನು ವಿಚ್ಛೇದನ ಹಾಗೂ ಬಹುಪತ್ನಿತ್ವದಿಂದ ತಡೆಯಲಾರದು ! – ಕೇರಳದ ಉಚ್ಚ ನ್ಯಾಯಾಲಯ

ತಿರುವನಂಥಪುರಮ್‌ – ನ್ಯಾಯಾಲಯವು ಮುಸಲ್ಮಾನ ಪುರುಷನನ್ನು ವಿಚ್ಛೇದನ ನೀಡುವುದರಿಂದ ಅಥವಾ ಒಂದಕ್ಕಿಂತ ಹೆಚ್ಚಿನ ವಿವಾಹ ಮಾಡಿಕೊಳ್ಳುವುದರಿಂದ ತಡೆಯಲಾರದು; ಏಕೆಂದರೆ ಮುಸಲ್ಮಾನ ಕಾನೂನು ಅಥವಾ ನಿಯಮಗಳ ಅನುಸಾರ ನ್ಯಾಯಾಲಯಕ್ಕೆ ಕೆಲವು ಸಂಗತಿಗಳಲ್ಲಿ ಬದಲಾವಣೆಗಳನ್ನು ಮಾಡುವ ಅಧಿಕಾರವಿಲ್ಲ. ಹೀಗೆ ಮಾಡುವುದರಿಂದ ಸಂವಿಧಾನದ ಕಲಂ ೨೫ರ ಅನುಸಾರ ಅವರ ಅಧಿಕಾರಗಳ ಉಲ್ಲಂಘನೆಯಾಗುತ್ತದೆ, ಎಂಬ ತೀರ್ಪನ್ನು ಇತ್ತೀಚೆಗೆ ಕೇರಳದ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ಆಲಿಕೆ ಸಂದರ್ಭದಲ್ಲಿ ನೀಡಿದೆ.

ನ್ಯಾಯಮೂರ್ತಿ ಎ. ಮಹಂಮದ ಮುಸ್ತಾಕ ಹಾಗೂ ನ್ಯಾಯಮೂರ್ತಿ ಸೋಫಿ ಥಾಮಸರವರ ವಿಭಾಗೀಯ ಪೀಠವು, ಯಾವುದೇ ತಲಾಕ ಅಥವಾ ಯಾವುದೇ ಧಾರ್ಮಿಕ ಕೃತ್ಯಗಳು ವೈಯಕ್ತಿಕ ಕಾನೂನಿನ ಅನುಸಾರ ನಡೆಯದಿದ್ದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಹೀಗಿದ್ದರೂ ಯಾವುದೇ ನ್ಯಾಯಾಲಯವು ಆ ವ್ಯಕ್ತಿಯನ್ನು ಅದನ್ನು ಮಾಡುವುದರಿಂದ ತಡೆಯಲಾರದು. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ಅಧಿಕಾರ ಕ್ಷೇತ್ರವು ಸೀಮಿತವಾಗಿದೆ. ಧಾರ್ಮಿಕ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡಲಾರರು, ಹೀಗೆ ಮಾಡುವುದು ಸಂಪೂರ್ಣವಾಗಿ ತಪ್ಪಾಗಿದೆ, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಸಂವಿಧಾನವು ನ್ಯಾಯವ್ಯವಸ್ಥೆಯ ಕೈಗಳನ್ನು ಕಟ್ಟಿಹಾಕಿರುವುದರಿಂದ ಅದನ್ನು ಮೀರಿ ಏನೂ ಮಾಡಲಾಗದು. ಇದಕ್ಕಾಗಿ ಈಗ ಕೇಂದ್ರ ಸರಕಾರವೇ ಸಮಾನ ನಾಗರೀಕ ಕಾನೂನನ್ನು ಜ್ಯಾರಿಗೊಳಿಸಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿ ಕೊಡುವಲ್ಲಿ ಮುಂದಾಳತ್ವ ವಹಿಸಬೇಕಿದೆ !