ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ರಾಜೌರಿ (ಜಮ್ಮೂ-ಕಾಶ್ಮೀರ) – ಇಲ್ಲಿಯ ಗಡಿಯಲ್ಲಿ ಭಾರತೀಯ ಸೇನೆಯು ತಬರಾಕ ಹುಸೇನ (ವಯಸ್ಸು ೩೨ ವರ್ಷ) ಈ ಪಾಕಿಸ್ತಾನಿ ಜಿಹಾದಿ ಉಗ್ರನನ್ನು ಬಂಧಿಸಿದ್ದಾರೆ. ನುಸುಳುವಾಗ ಓಡಿ ಹೋಗುತ್ತಿರುವಾಗ ಸೇನೆಯು ನಡೆಸಿದ ಗುಂಡು ಹಾರಾಟದಲ್ಲಿ ಆತ ಗಾಯಗೊಂಡ ನಂತರ ಅವನನ್ನು ಬಂಧಿಸಲಾಗಿತ್ತು, ಆದರೆ ಅವನೊಂದಿಗಿದ್ದ ಸಹಚರರು ಓಡಿ ಹೋದರು. ಅವನು ವಿಚಾರಣೆಯಲ್ಲಿ, ಪಾಕಿಸ್ತಾನಿ ಸೇನೆಯ ಕರ್ನಲ್ ಯೂನೂಸ ಚೌಧುರಿಯು ಭಾರತೀಯ ಸೇನೆಯ ಪೋಸ್ಟ ಮೇಲೆ ಆಕ್ರಮ ನಡೆಸಲು ೩೦ ಸಾವಿರ ಪಾಕಿಸ್ತಾನಿ ರೂಪಾಯಿ (ಭಾರತೀಯ ಮೌಲ್ಯ ೧೦ ಸಾವಿರ ೯೮೦) ನೀಡಿದ್ದನು ಎಂದು ಹೇಳಿದ್ದಾನೆ.
भारतीय सेना ने पाक आतंकवादी को गिरफ्तार किया: बोला- पाकिस्तानी कर्नल ने उसे भारतीय पोस्ट पर हमला करने के लिए 11 हजार रुपए दिए थे; बॉर्डर की फेंसिंग काटते वक्त पकड़ा #Pakistan #Terrorists https://t.co/Tk1JkrFn3R
— Dainik Bhaskar (@DainikBhaskar) August 25, 2022
ಭಾರತೀಯ ಸೈನಿಕರು ೩ ಬಾಟಲಿ ರಕ್ತ ನೀಡಿದರು !ತಬರಾಕ ಹುಸೇನ ಓಡಿ ಹೋಗುತ್ತಿರುವಾಗ ನಡೆಸಿದ ಗುಂಡಿನದಾಳಿಯಲ್ಲಿ ಗಾಯಗೊಂಡನು. ಅವನ ತೊಡೆಗೆ ಮತ್ತು ಹೆಗಲಿಗೆ ಎರಡು ಗುಂಡು ತಗುಲಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಆಗುತ್ತಿತ್ತು. ಅವನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅತಿಯಾದ ರಕ್ತಸ್ರಾವದಿಂದ ಅವನಿಗೆ ರಕ್ತದ ಅವಶ್ಯಕತೆಯಿದೆಯೆಂದು ವೈದ್ಯರು ಹೇಳಿದಾಗ ಸೈನಿಕರು ಅವನಿಗೆ ರಕ್ತದಾನ ನೀಡಲು ನಿರ್ಧರಿಸಿದರು. ಅವನಿಗೆ ೩ ಬಾಟಲಿ ರಕ್ತ ನೀಡಲಾಯಿತು. ಅವನ ಮೇಲೆ ಶಸ್ತ್ರಕ್ರಿಯೆ ಮಾಡಿ ಅವನನ್ನು ಐ.ಸಿ.ಯು. ವಿಭಾಗದಲ್ಲಿ ಸ್ಥಳಾಂತರಿಸಲಾಯಿತು. ಸದ್ಯ ಅವನ ಆರೋಗ್ಯ ಸ್ಥಿರವಾಗಿದೆ. ಅವನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿ.ಒ.ಕೆ)ಯ ಕೊಟಲಿ ಜಿಲ್ಲೆಯ ಸಬ್ಜಕೋಟ ಗ್ರಾಮದ ನಿವಾಸಿಯಾಗಿದ್ದಾನೆ. ಸಂಪಾದಕೀಯ ನಿಲುವುಭಾರತೀಯ ಸೈನಿಕರ ಗಾಂಧಿಗಿರಿ ! ಮಹಮ್ಮದ ಘೋರಿಯ ಇತಿಹಾಸದಿಂದ ಭಾರತೀಯರು ಏನನ್ನೂ ಕಲಿತಿಲ್ಲ ಎನ್ನುವುದು ಇಂತಹ ಘಟನೆಗಳಿಂದ ಪದೇ ಪದೇ ಕಂಡುಬರುತ್ತದೆ ! ಹಾವಿಗೆ ಹಾಲು ಕುಡಿಸಿದರೆ ಅದು ಅಮೃತವಲ್ಲ, ವಿಷವನ್ನೇ ಕಕ್ಕುವುದು ಎನ್ನುವುದು ಭಾರತೀಯರಿಗೆ ಎಂದು ಗಮನಕ್ಕೆ ಬರುವುದು ? |
೨೦೧೬ ರಲ್ಲಿಯೂ ಬಂಧಿಸಲಾಗಿತ್ತು
ಭಾರತೀಯ ಸೇನೆಯು ೨೦೧೬ರಲ್ಲಿ ಇದೇ ಪರಿಸರದಿಂದ ತಬರಾಕ ಹುಸೇನ ಮತ್ತು ಅವನ ಸಹೋದರ ಹಾರೂನ ಅಲಿಯನ್ನು ಇದೇ ಸ್ಥಳದಲ್ಲಿ ನುಸುಳುವಿಕೆಯ ಪ್ರಯತ್ನದ ಸಂದರ್ಭದಲ್ಲಿ ಬಂಧಿಸಲಾಗಿತ್ತು; ಆದರೆ ನವೆಂಬರ ೨೦೧೭ರಲ್ಲಿ ಅವನನ್ನು ಮಾನವೀಯತೆಯ ಆಧಾರದಲ್ಲಿ ಬಿಡಲಾಗಿತ್ತು. (ಅದೇ ಸಮಯದಲ್ಲಿ ಹುಸೇನ ಮೇಲೆ ಕ್ರಮ ಕೈಕೊಂಡಿದ್ದರೆ, ಇಂದು ಈ ಸಮಯ ಬರುತ್ತಿರಲಿಲ್ಲ – ಸಂಪಾದಕರು) ಹುಸೇನ ಪಾಕಿಸ್ತಾನಿ ಗುಪ್ತಚಾರ ಇಲಾಖೆಗಾಗಿ ೨ ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಗಡಿ ರೇಖೆಯನ್ನು ದಾಟಿ ಲಷ್ಕರ-ಎ-ತೋಯಬಾದ ಪ್ರಶಿಕ್ಷಣ ಶಿಬಿರದಲ್ಲಿ ಅವನು ೬ ವಾರಗಳ ಕಾಲ ಪ್ರಶಿಕ್ಷಣ ತೆಗೆದುಕೊಂಡಿದ್ದಾನೆ. ಡಿಸೆಂಬರ ೧೬, ೨೦೧೯ ರಂದು ಹುಸೇನ ಇವರ ಎರಡನೇಯ ಸಹೋದರ ಮಹಮ್ಮದ ಸಯೀದನನ್ನು ಅದೇ ಪ್ರದೇಶದಲ್ಲಿ ಭಾರತೀಯ ಸೈನಿಕರು ಬಂಧಿಸಿದ್ದರು.