ಭಾಗ್ಯನಗರ (ತೇಲಂಗಾಣ) – ಇಲ್ಲಿಯ ಗೋಶಾಮಹಲ ವಿಧಾನಸಭೆ ಮತದಾನ ಕ್ಷೇತ್ರದ ಭಾಜಪ ಶಾಸಕ ಟಿ. ರಾಜಾ ಸಿಂಹರನ್ನು ಪೈಗಂಬರರ ತಥಾಕಥಿತ ಅಪಮಾನ ಮಾಡಿದ್ದಾರೆಂದು ಬಂಧಿಸಿ, ತದನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಈ ಪ್ರಕರಣದಲ್ಲಿ ಭಾಜಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕಾರಣ ನೀಡಿ ನೊಟೀಸ್ ಜಾರಿಗೊಳಿಸಿದೆ. ಈ ವಿಷಯದಲ್ಲಿ ಟಿ. ರಾಜಾ ಸಿಂಹ ಇವರು, ‘ನಾನು ಏನೂ ತಪ್ಪು ಹೇಳಿಲ್ಲ. ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರ ಕಾಲಡಿಯ ಪ್ರಾಮಾಣಿಕ ಸೈನಿಕನಾಗಿದ್ದೇನೆ; ಆದರೆ ಪಕ್ಷಕ್ಕಿಂತ ನನಗೆ ಧರ್ಮರಕ್ಷಣೆ ಮಾಡುವುದು ಅಧಿಕ ಮಹತ್ವದ್ದೆಂದು ಅನಿಸುತ್ತದೆ. ನಾನು ಆದಷ್ಟು ಬೇಗನೆ ನನ್ನ ವಿಡಿಯೋದ ಎರಡನೇಯ ಭಾಗವನ್ನು ಪ್ರಸಾರ ಮಾಡುವವನಿದ್ದೇನೆ. ಅದರಲ್ಲಿ ಧರ್ಮವನ್ನು ವಿರೋಧಿಸುವವರ ಮೇಲಿನ ಟಿಪ್ಪಣೆ ಇರಬಹುದು.’ ಎಂದು ಹೇಳಿದರು.
ಪ್ರವಾದಿ ವಿರುದ್ದ ಹೇಳಿಕೆ ನೀಡಿ ಅರೆಸ್ಟ್ ಆಗಿದ್ದ ಬಿಜೆಪಿ ನಾಯಕ ರಾಜಾ ಸಿಂಗ್ಗೆ ಜಾಮೀನು!#rajasingharrested #RajaSingh #Bail #Court #ProphetMuhammad #BJP https://t.co/7YodE9HTW0
— Asianet Suvarna News (@AsianetNewsSN) August 23, 2022
ನಾನು ಧರ್ಮಕ್ಕಾಗಿ ಸಾಯಲೂ ಸಿದ್ಧನಿದ್ದೇನೆ ! – ಟಿ. ರಾಜಾ ಸಿಂಹ
ಶಾಸಕ ಟಿ. ರಾಜಾ ಸಿಂಹ ಇವರನ್ನು ಅಗಸ್ಟ ೨೩ರಂದು ಪೊಲೀಸರು ಮನೆಯಿಂದ ಬಂಧಿಸಿದ ಬಳಿಕ ಪೊಲೀಸ ಠಾಣೆಗೆ ಕರೆದೊಯ್ಯುತ್ತಿರುವಾಗ ‘ಪೊಲೀಸರು ಏನು ಮಾಡುವವರಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ನಾನು ಯವಾಗ ಬಿಡುಗಡೆ ಆಗುವೆನೋ ಆಗ ಖಂಡಿತವಾಗಿಯೂ ವಿಡಿಯೋದ ಎರಡನೇಯ ಭಾಗವನ್ನು ಕೂಡ ಅಪ್ ಲೋಡ ಮಾಡುತ್ತೇನೆ. ನಾನು ಇದನ್ನು ಧರ್ಮಕ್ಕಾಗಿ ಮಾಡುತ್ತಿದ್ದೇನೆ. ನಾನು ಧರ್ಮಕ್ಕಾಗಿ ಸಾಯಲು ಸಿದ್ದನಿದ್ದೇನೆ’, ಎಂದು ಹೇಳಿದ್ದರು. ಸಾಯಂಕಾಲ ತಡವಾಗಿ ಅವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಶ್ರೀರಾಮನ ಅಪಮಾನ ಮಾಡುವವರಿಗೆ ಗೌರವ; ಆದರೆ ಭಕ್ತರಿಗೆ ಯಾವುದೇ ಗೌರವವಿಲ್ಲ !
ಟಿ. ರಾಜಾ ಸಿಂಹ ಇವರು ಮಾತು ಮುಂದುವರಿಸುತ್ತಾ, ಯಾವಾಗ ಹಿಂದೂಗಳ ದೇವತೆಗಳ ಮೇಲೆ ಅಪಮಾನಕಾರಿ ಹಾಸ್ಯ ಕೇಳಿಸಲಾಗುತ್ತದೆಯೋ, ಅವರನ್ನು ಗುರಿ ಮಾಡಲಾಗುತ್ತದೆ, ಆಗ ಯಾವುದೇ ದೂರು ದಾಖಲಿಸುವುದಿಲ್ಲ. ಇಂದು ನನ್ನ ವಿರುದ್ಧ ಅನೇಕ ಸ್ಥಳಗಳಲ್ಲಿ ದೂರು ದಾಖಲಿಸಲಾಗಿದೆ; ಆದರೆ ನಮ್ಮ ದೇವರು ಶ್ರೀರಾಮ ಅಲ್ಲವೇ ? ನಮ್ಮ ಸೀತೆ ಮಾತೆಯಲ್ಲವೇ ? ಇಂದು ತೇಲಂಗಾಣದ ಭಕ್ತರು ನಮ್ಮ ಭಗವಾನ ಶ್ರೀರಾಮ ಮತ್ತು ಸೀತಾ ಮಾತೆಯನ್ನು ಅಪಮಾನ ಮಾಡುವವರನ್ನು ಏಕೆ ಸಂರಕ್ಷಣೆ ನೀಡಲಾಗುತ್ತಿದೆ ? ಅವರಿಗೆ ಪ್ರಧಾನ ಮಂತ್ರಿಗಳೂ ಸಿಗದಂತಹ ಸಂರಕ್ಷಣೆ ನೀಡಲಾಗುತ್ತಿದೆ. ಇದರಿಂದ ಸರಕಾರ ಜನತೆಗೆ ಏನು ಸಂದೇಶ ನೀಡುವವರಿದ್ದಾರೆ. ? ಭಗವಾನ ಶ್ರೀರಾಮ ಮತ್ತು ಸೀತಾ ಮಾತೆಯ ಅಪಮಾನ ಮಾಡುವವರಿಗೆ ಗೌರವವಿದೆ, ಆದರೆ ಭಕ್ತರಿಗೆ ಯಾವುದೇ ಗೌರವವಿಲ್ಲ ಎಂದು ಕೇಳಿದರು.
ಯುಟ್ಯುಬ ಚಾನೆಲ ಮೇಲೆ ಟಿ. ರಾಜಾ ಸಿಂಹ ಇವರ ಒಂದು ವಿಡಿಯೋ ಅಪಲೋಡ ಮಾಡಲಾಗಿತ್ತು. ಅದರಲ್ಲಿ ಅವರು ಹಾಸ್ಯಕಲಾವಿದ ಮುನವ್ವರ ಫಾರುಕಿಯನ್ನು ಟೀಕಿಸಿದ್ದರು. ಆತ ಭಾಗ್ಯನಗರದಲ್ಲಿ ಒಂದು ಕಾರ್ಯಕ್ರಮವನ್ನು ಮಾಡಿದ್ದ. ಈ ಕಾರ್ಯಕ್ರಮವನ್ನು ಟಿ. ರಾಜಾ ಸಿಂಹ ಇವರು ವಿರೋಧಿಸಿದ್ದರು. ಅವರು, ‘ನಮ್ಮ ರಾಮ, ರಾಮನಲ್ಲ ? ನಮ್ಮ ಸೀತೆ, ಸೀತಾ ಮಾತೆಯಲ್ಲ ? ಎಂದು ಕೇಳಿದ್ದರು. ನಾನು ಪೊಲೀಸ್ ಮಹಾನಿರ್ದೆಕರಲ್ಲಿ, ಅವರು ರಾಮ ಮತ್ತು ಸೀತೆಯ ವಿರುದ್ಧ ಆಕ್ಷೇಪಾರ್ಹ ಹಾಸ್ಯ ಮಾಡುವ ವ್ಯಕ್ತಿಯ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡಬಾರದು’ ಎಂದು ಕೈ ಮುಗಿದು ವಿನಂತಿಸುತ್ತೇನೆ. ಅವರ ವಿರೋಧದ ಬಳಿಕವೂ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದ ಬಳಿಕ ಟಿ. ರಾಜಾ ಸಿಂಹರು ವಿಡಿಯೋ ಮಾಡಿದ್ದರು. ಆಗ ಅವರು ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ಆರೋಪವಿದೆ.
ಟಿ. ರಾಜಾ ಸಿಂಹ ಇವರು ಬಿಡುಗಡೆಗೊಂಡ ಬಳಿಕ ಮತಾಂಧರಿಂದ ಹಿಂಸಾಚಾರ : ೪ ಪೊಲೀಸರಿಗೆ ಗಾಯ
ಟಿ. ರಾಜಾ ಸಿಂಹ ಇವರನ್ನು ಅಗಸ್ಟ ೨೩ ರಂದು ಸಂಜೆ ತಡವಾಗಿ ಜಾಮೀನು ಸಿಕ್ಕಬಳಿಕ ಮತಾಂಧರು ಅದೇ ರಾತ್ರಿ ಹಿಂಸಾಚಾರ ಮಾಡಿದರು. ಟಿ. ರಾಜಾ ಸಿಂಹರ ಶಿರಚ್ಛೇದ ಮಾಡುವ ಬೆದರಿಕೆ ನೀಡಲಾಯಿತು. ಈ ಸಮಯದಲ್ಲಿ ಪೊಲೀಸರು ಅವರ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ ೪ ಪೊಲೀಸರು ಗಾಯಗೊಂಡರು. ಹಾಗೆಯೇ ಪೊಲೀಸರ ವಾಹನಗಳನ್ನು ನಷ್ಟಗೊಳಿಸಿದರು. ಪೊಲೀಸರು ಈ ಸಂದರ್ಭದಲ್ಲಿ ಲಾಠಿಚಾರ್ಜ ನಡೆಸಿದರು. ಹಾಗೆಯೇ ಅಶ್ರುವಾಯು ಸಿಡಿಸಿದರು. ನಗರದ ಅಂಬರಪೇಟ, ತಲ್ಲಬಕಟ್ಟಾ, ಮೊಗಲಪುರಾ, ಖಿಲವತ, ಬಹಾದುರಪುರಾ ಮತ್ತು ಚಂಚಲಗುಡಾದಲ್ಲಿ ಹಿಂಸಾತ್ಮಕ ಪ್ರದರ್ಶನಗಳನ್ನು ನಡೆಸಲಾಯಿತು.