ಕಾಶ್ಮೀರ ಸಮಸ್ಯೆಗೆ ಯುದ್ಧವು ಒಂದು ಆಯ್ಕೆಯಲ್ಲ, ನಾವು ಶಾಂತಿಯನ್ನು ಬಯಸುತ್ತೇವೆ!’- ಪಾಕಿಸ್ತಾನದ ಪ್ರಧಾನಿಯ ಮೊಸಳೆ ಕಣ್ಣೀರು (ಅಂತೆ)

ಎಡದಿಂದ ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಷರೀಫ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ

ಇಸ್ಲಾಮಾಬಾದ್ – ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಯುದ್ಧವು ಒಂದು ಆಯ್ಕೆಯಲ್ಲ. ನಾವು ಭಾರತದೊಂದಿಗಿನ ಗಡಿ ವಿವಾದವನ್ನು ಪರಿಹರಿಸಲು ಬಯಸುತ್ತೇವೆ. ನಮಗೆ ಶಾಶ್ವತ ಶಾಂತಿ ಬೇಕಾಗಿದೆ. ಪಾಕಿಸ್ತಾನ ಮತ್ತು ಭಾರತವು ವ್ಯಾಪಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪರಸ್ಪರ ಪೈಪೋಟಿ ನಡೆಸಬೇಕು ಎಂದು ಪಾಕ್ ಪ್ರಧಾನಿ ಶಾಹಬಾಜ್ ಷರೀಫ್ ಅವರು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಸೌಮ್ಯ ನಿಲುವನ್ನು ತಾಳುತ್ತಾ ಹೇಳಿದರು. (ಮೊಸಳೆ ಕಣ್ಣೀರನ್ನು ಸುರಿಸಿದರು.) ಪ್ರಸ್ತುತ, ಪಾಕಿಸ್ತಾನವು ಆರ್ಥಿಕ ದಿವಾಳಿತನದ ಹೊಸ್ತಿಲಿನಲ್ಲಿ ನಿಂತಿದೆ. ಬಡವಾದ ಪಾಕಿಸ್ತಾನ ಭಾರತದೊಂದಿಗೆ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ. ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅದು ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡಲು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಷರೀಫ್ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯನ್ನು ನಂಬದೆ, ಅದರ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದೇ ಅವಶ್ಯಕವಾಗಿದೆ!