‘ಹರ ಘರ ತಿರಂಗಾ’ ಅಭಿಯಾನದ ನಿಮಿತ್ತ ಸನಾತನದ ಆಶ್ರಮಗಳಲ್ಲಿ ಧ್ವಜಾರೋಹಣ ಹಾಗೂ ಧ್ವಜವಂದನೆ

ಮಂಗಳೂರಿನಲ್ಲಿ ಧ್ವಜವಂದನೆಯನ್ನು ಮಾಡುತ್ತಿರುವ ಪೂ. ರಮಾನಂದ ಗೌಡ (೧), ಇತರ ಸಂತರು ಮತ್ತು ಸಾಧಕರು

ಗೋವಾ – ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂದರೆ ೭೫ ವರ್ಷಗಳು ಪೂರ್ಣವಾದ ನಿಮಿತ್ತ ಕೇಂದ್ರ ಸರಕಾರದ ವತಿಯಿಂದ ೧೩ ರಿಂದ ೧೫ ಆಗಸ್ಟ್ ಈ ಕಾಲಾವಧಿಯಲ್ಲಿ ‘ಹರ ಘರ ತಿರಂಗಾ’ ಎಂಬ ಅಭಿಯಾನವನ್ನು ನಡೆಸಲಾಗಿತ್ತು. ಸರಕಾರದ ಈ ಕರೆಗೆ ಸ್ಪಂದಿಸಿ ಸನಾತನ ಸಂಸ್ಥೆ, ಗೋವಾ ಆಶ್ರಮದಲ್ಲಿ ಧ್ವಜಾರೋಹಣ ಹಾಗೂ ದೇವದ ಪನವೇಲ ಆಶ್ರಮ, ಅದೇ ರೀತಿ ಮಂಗಳೂರು ಹಾಗೂ ದೇಶದಾದ್ಯಂತದ ಸೇವಾಕೇಂದ್ರಗಳಲ್ಲಿ ಧ್ವಜವಂದನೆಯನ್ನು ಮಾಡಲಾಯಿತು.

ರಾಮನಾಥಿ ಆಶ್ರಮದಲ್ಲಿ ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥರ ಹಸ್ತದಿಂದ ಧ್ವಜಾರೋಹಣ

ಗೋವಾದ ಸನಾತನ ಆಶ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥ ಶ್ರೀ. ವೀರೇಂದ್ರ ಮರಾಠೆಯವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಅವರೊಂದಿಗೆ ಸಂಸ್ಥೆಯ ವಿಶ್ವಸ್ಥ ಶ್ರೀ. ನಿತೀನ ಸಹಕಾರಿಯವರ ಸಹಿತ ಸಾಧಕರು ಉಪಸ್ಥಿತರಿದ್ದರು.

ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ.ರಮಾನಂದ ಗೌಡ ಇವರಿಂದ ಮಂಗಳೂರಿನಲ್ಲಿ ಧ್ವಜವಂದನೆ

ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಹರ ಘರ ತಿರಂಗಾ ಅಭಿಯಾನದ ನಿಮಿತ್ತ ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡ ಇವರ ಹಸ್ತದಿಂದ ಧ್ವಜವಂದನೆಯ ಕಾರ್ಯಕ್ರಮವು ನೆರವೇರಿತು. ಆ ಸಮಯದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ. ವಿನಾಯಕ ಕರ್ವೆ, ಪೂ. ರಾಧಾ ಪ್ರಭು ಮತ್ತು ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು ಇವರೊಂದಿಗೆ ಇತರ ಸಾಧಕರು ಉಪಸ್ಥಿತರಿದ್ದರು. ಧ್ವಜವಂದನೆಯನ್ನು ಮಾಡಿ ರಾಷ್ಟ್ರಗೀತೆಯನ್ನು ಹಾಡಲಾಯಿತು ಮತ್ತು ‘ಭಾರತ ಮಾತಾ ಕಿ ಜಯ’ ಹಾಗೂ ‘ವಂದೇ ಮಾತರಮ್’ ಘೋಷಣೆಯನ್ನು ನೀಡಲಾಯಿತು