‘ಝೊಮಾಟೊ’ನಿಂದ ಹಿಂದೂಗಳಲ್ಲಿ ಕ್ಷಮಾಯಾಚನೆ !

‘ಝೊಮಾಟೊ’ ಜಾಹೀರಾತಿನ ಮೂಲಕ ನಟ ಹೃತಿಕ ರೋಶನರಿಂದ ಉಜ್ಜೈನ ಮಹಾಕಾಲೇಶ್ವರ ಮಂದಿರವನ್ನು ಅಪಮಾನಿಸಿದ ಪ್ರಕರಣ

ಮಹಾಕಾಲೇಶ್ವರ ಮಂದಿರದ ವಿಷಯವಲ್ಲ, ‘ಮಹಾಕಾಲ ರೆಸ್ಟಾರೆಂಟ’ ವಿಷಯದ ಬಗ್ಗೆ ಜಾಹೀರಾತು ಇರುವುದಾಗಿ ಪ್ರತಿಪಾದನೆ

ಉಜ್ಜೈನ (ಮಧ್ಯಪ್ರದೇಶ) – ‘ಆನ್ ಲೈನ’ ಖಾದ್ಯಪದಾರ್ಥ ಮಾರಾಟ ಮಾಡುವ ‘ಝೊಮಾಟೊ’ ತನ್ನ ಒಂದು ಜಾಹೀರಾತಿನ ಮೂಲಕ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜೈನ ಮಹಾಕಾಲೇಶ್ವರ ಮಂದಿರವನ್ನು ಅವಮಾನಿಸಲಾಗಿರುವುದರಿಂದ, ಅದಕ್ಕೆ ಹಿಂದೂಗಳಿಂದ ಬಲವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದಲೂ ಇದರ ವಿರುದ್ಧ ಟ್ರೆಂಡ ಮಾಡಲಾಗಿತ್ತು. ತದ ನಂತರ ‘ಝೊಮಾಟೊ’ದಿಂದ ಕ್ಷಮೆ ಯಾಚಿಸಲಾಗಿದೆ. ನಟ ಹೃತಿಕ ರೋಶನ ಈ ಜಾಹೀರಾತಿನಲ್ಲಿ ಕೆಲಸ ನಿರ್ವಹಿಸಿದ್ದರು. ಈ ಜಾಹೀರಾತಿನಲ್ಲಿ ಹೃತಿಕ ರೋಶನ, “ನಾನು ಉಜ್ಜೈನನಲ್ಲಿ ಇದ್ದೆನು. ನನಗೆ ಇಚ್ಛೆಯಾಯಿತು. ಅದಕ್ಕಾಗಿ ನಾನು ‘ಮಹಾಕಾಲ’ ನಿಂದ (ಊಟ) ತರಿಸಿದೆನು’, ಮಹಾಕಾಲವೆಂದರೆ ಮಹಾಕಾಲೇಶ್ವರ ಮಂದಿರ ಎಂದು ಅದರ ಅರ್ಥವಾಗುವುದರಿಂದ ಹಿಂದೂಗಳು ಅದನ್ನು ವಿರೋಧಿಸುತ್ತಿದ್ದರು. ಈ ವಿಷಯದಲ್ಲಿ ಝೊಮಾಟೊ ಕೋರಿದ ಕ್ಷಮಾಯಾಚನೆಯಲ್ಲಿ, ‘ಮಹಾಕಾಲ ಥಾಳಿ’ ಎಂದರೆ ಉಜ್ಜೈನದ ‘ಮಹಾಕಾಲ ರೆಸ್ಟಾರೆಂಟ’ ನ ಥಾಳಿಯಾಗಿದೆ. ಅದಕ್ಕೂ ಮಹಾಕಾಲೇಶ್ವರ ಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ನಮಗೆ ಯಾರ ಭಾವನೆಯನ್ನು ನೋಯಿಸುವ ಉದ್ದೇಶವಿರಲಿಲ್ಲ. ನಾವೂ ಉಜ್ಜೈನ ನಾಗರಿಕರ ಭಾವನೆಗಳನ್ನು ಗೌರವಿಸುತ್ತೇವೆ’. ಎಂದು ಹೇಳಿದೆ.

೧. ಈ ಜಾಹೀರಾತಿನ ಮಹಾಕಾಲೇಶ್ವರ ಮಂದಿರದ ಪೂಜಾರಿಗಳಿಂದಲೂ ವಿರೋಧ ವ್ಯಕ್ತಪಡಿಸಲಾಗಿತ್ತು. ಮಂದಿರದ ಪೂಜಾರಿ ಮಹೇಶ ಇವರು ‘ಇಂತಹ ಜಾಹೀರಾತು ಮಾಡುವ ಮೊದಲು ಸಂಸ್ಥೆ ವಿಚಾರ ಮಾಡಬೇಕಾಗಿತ್ತು. ಹಿಂದೂಗಳು ಎಂದಿಗೂ ಆಕ್ರಮಣಕಾರಿಗಳಾಗುವುದಿಲ್ಲ; ಆದರೆ ಬೇರೆ ಧರ್ಮದ ವಿಷಯದಲ್ಲಿ ಈ ರೀತಿಯ ಜಾಹೀರಾತು ಮಾಡುತ್ತಿದ್ದರೆ, ಅವರು ಈ ಸಂಸ್ಥೆಯ ಕಚೇರಿಗೆ ಇಲ್ಲಿಯವರೆಗೆ ಬೆಂಕಿ ಹಚ್ಚುತ್ತಿದ್ದರು. ‘ಈ ಕಂಪನಿಯು ಕ್ಷಮಾ ಕೋರದಿದ್ದರೆ, ನ್ಯಾಯಾಲಯಕ್ಕೆ ಹೋಗುತ್ತೇವೆ’, ಎಂದು ಹೇಳಿದರು.

೨. ಪೂಜಾರಿ ಮಹೇಶ ತಮ್ಮ ಮಾತನ್ನು ಮುಂದುವರಿಸುತ್ತಾ, ಮಹಾಕಾಲೇಶ್ವರ ಮಂದಿರದ ಅನ್ನಛತ್ರವಿದೆ; ಆದರೆ ಅಲ್ಲಿಂದ ಭೋಜನ ಮನೆಯವರೆಗೆ ತಲುಪಿಸುವ ಯಾವುದೇ ವ್ಯವಸ್ಥೆ ಇಲ್ಲ. ಆದುದರಿಂದ ಈ ಕಂಪನಿಯ ಮಹಾಕಾಲೇಶ್ವರನ ಹೆಸರಿನಲ್ಲಿ ಜಾಹೀರಾತು ಮಾಡಬಾರದು. ಈ ಕಂಪನಿಯು ಮಾಂಸಾಹಾರ ಪದಾರ್ಥವನ್ನು ಕೂಡ ವಿತರಿಸುತ್ತದೆ ಎಂದು ಹೇಳಿದರು.

೩. ಮಹಾಕಾಲ ಮಂದಿರ ಸಮಿತಿಯ ಅಧ್ಯಕ್ಷ ಆಶಿಷ ಸಿಂಹ ಇವರು ಈ ಜಾಹೀರಾತನ್ನು ವಿರೋಧಿಸಿದರು. ‘ಮಂದಿರದ ಅನ್ನಛತ್ರದಿಂದ ಭೋಜನವನ್ನು ಬೇರೆ ಕಡೆಗೆ ವಿತರಿಸುವ ಯಾವುದೇ ವ್ಯವಸ್ಥೆಯಿಲ್ಲ’, ಎಂದೂ ಅವರು ಸ್ಪಷ್ಟಪಡಿಸಿದರು. ಈ ಜಾಹೀರಾತು ನಿರ್ಬಂಧಿಸಲು ಅವರ ಮೇಲೆ ಕ್ರಮ ಜರುಗಿಸಲಾಗುವುದು, ಎಂದೂ ಅವರು ಹೇಳಿದರು.

ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದಾಗ ‘#Boycott_Zomato’ ಈ ಹ್ಯಾಶ್ ಟ್ಯಾಗ್ ಟ್ವಿಟರ ಮೇಲೆ ಟ್ರೆಂಡ ಆಯಿತು. ರಾಷ್ಟ್ರೀಯ ಸ್ತರದಲ್ಲಿ ಈ ಟ್ರೆಂಡ ಕೆಲವು ಕಾಲ ಎರಡನೇಯ ಸ್ಥಾನದಲ್ಲಿತ್ತು. ಹಾಗೆಯೇ ಬಹಳ ಸಮಯ ಭಾರತದ ಮೊದಲ ೧೦ ಟ್ರೆಂಡನಲ್ಲಿಯೂ ಇತ್ತು. ಈ ಟ್ರೆಂಡ ಮೂಲಕ ಅನೇಕ ಜನರು ‘ಝೊಮಾಟೊ ಹಿಂದೂಗಳ ಕ್ಷಮೆ ಯಾಚಿಸಬೇಕು’, ಎಂದು ಕೋರಿದ್ದರು.

 

ಸಂಪಾದಕೀಯ ನಿಲುವು

ಧರ್ಮ, ದೇವತೆ ಮುಂತಾದವರ ಅಪಮಾನದ ವಿಷಯದಲ್ಲಿ ಭಾರತದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಯಾರಿಗೂ ಇದರ ಭಯವಿಲ್ಲ. ಪಾಕಿಸ್ತಾನದಲ್ಲಿ ಇಂತಹ ಅಪಮಾನಕ್ಕಾಗಿ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಭಾರತದಲ್ಲಿ ಈ ರೀತಿ ಯಾವಾಗ ಆಗಲಿದೆ ?