ಚೀನಾ ತೈವಾನ ಮೇಲೆ ನಿಯಂತ್ರಣ ಪಡೆದರೆ ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ !

ರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರ ಎಚ್ಚರಿಕೆ !

ನವ ದೆಹಲಿ – ಚೀನಾದ ಸೈನ್ಯ ತೈವಾನ ಮೇಲೆ ನಿಯಂತ್ರಣ ಪಡೆದರೆ, ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ ಇರುವುದು, ಎಂದು ರಕ್ಷಣಾ ಮತ್ತು ವಿದೇಶಾಂಗ ತಜ್ಞ ಬ್ರಹ್ಮ ಚೇಲಾನಿ ಇವರು ಹೇಳಿಕೆ ನೀಡಿದರು.

೧. ಚೆಲಾನಿ ಅವರು ಜಪಾನ್‌ನ ದೈನಿಕ ‘ನಿಕ್ಕೆಯಿ’ದಲ್ಲಿ ಬರೆದಿರುವ ಲೇಖನದಲ್ಲಿ, ಚೀನಾ ಏನಾದರೂ ತೈವಾನಿನ ಮೇಲೆ ನಿಯಂತ್ರಣ ಪಡೆದರೆ, ಚೀನಾದ ಮುಂದಿನ ಗುರಿ ಭಾರತದ ಅರುಣಾಚಲ ಪ್ರದೇಶ ಈ ರಾಜ್ಯ ಇರುತ್ತದೆ. ಅರುಣಾಚಲ ಪ್ರದೇಶ ತೈವಾನಗಿಂತಲು ಮೂರು ಪಟ್ಟು ಇದೆ. ಚೀನಾ ಈ ಮೊದಲು ಅದರ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ತೋರಿಸಿ ‘ಇದು ಚೀನಾದ ಭಾಗವಾಗಿದೆ’, ಎಂದು ಹೇಳಿತ್ತು. ಆದ್ದರಿಂದ ಭಾರತವು ತೈವಾನಿನ ರಕ್ಷಣೆಗಾಗಿ ಸ್ಪಷ್ಟ ನಿಲುವು ತಾಳುವುದು ಅವಶ್ಯಕವಾಗಿದೆ.

೨. ಚೇಲಾನಿ ಮಾತು ಮುಂದುವರೆಸುತ್ತಾ, ಕಳೆದ ೨೮ ತಿಂಗಳಲ್ಲಿ ಚೀನಾ ಲಡಾಖ್ ಭಾಗದ ಮೇಲೆ ನಿಯಂತ್ರಣ ಪಡೆಯುವ ಪ್ರಯತ್ನ ಮಾಡುತ್ತಿದೆ. ಅದರ ನಂತರ ಕೂಡ ಭಾರತ ಚೀನಾದ ಜೊತೆ ಶಂಘೈ ಶಿಖರ ಸಭೆಯಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿಂಗಪಿಗ್ ಇವರ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಚರ್ಚೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.

೩. ಅಮೇರಿಕಾದ ಪ್ರಸಿದ್ಧ ನಿಯತಕಾಳಿಕೆ ‘ಫಾರಿನ್ ಪಾಲಿಸಿ’ಯಲ್ಲಿ ಪ್ರಕಾಶಿತಗೊಂಡಿರುವ ಒಂದು ಲೇಖನದಲ್ಲಿ, ಹಿಂದ-ಪ್ರಶಾಂತ ಕ್ಷೇತ್ರದ ಪರಿಸ್ಥಿತಿ ಬದಲಾಗಿದೆ. ಭಾರತ ತೈವಾನಗೆ ಸಂಬಂಧಪಟ್ಟ ಅದರ ರಾಜಕೀಯ ಸಂಬಂಧ ಹೆಚ್ಚು ಸದೃಢ ಮಾಡುವ ಸಮಯ ಈಗ ಬಂದಿದೆ.