ಪೊಲೀಸರು ಅಪರಾಧ ದಾಖಲಿಸಲು ನಿರಾಕರಣೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯನ್ನು ಕಿರುಕುಳ ನೀಡುವ ಮತಾಂಧರನ್ನು ವಿರೋಧಿಸಿದ ಆಕೆಯ ತಂದೆಯ ಮೇಲೆಯೇ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರ ಹೆಸರು ನೀಲ್ ಮಾಧವ್ ಸಹಾ ಎಂದಾಗಿದೆ. ಅವರ ಮಗಳು ಟ್ಯೂಶನ್.ಗೆ ಹೋಗುತ್ತಿದ್ದಾಗ, ರಾಜಶಾಹಿ ರೈಲು ನಿಲ್ದಾಣದ ಬಳಿಯ ರಸ್ತೆಯಲ್ಲಿ ಮಿರಾಜ್ ಅಲಿಯಾಸ್ ಇಮ್ರಾನ್ ಮತ್ತು ಪ್ರಿನ್ಸ್ ಎಂಬ ಇಬ್ಬರು ಆಕೆಗೆ ಕಿರುಕುಳ ನೀಡಿದ್ದಾರೆ. ಈ ಹಿಂದೆ ಇಬ್ಬರೂ ಅವಳನ್ನು ಚುಡಾಯಿಸಿದ್ದರು. ಚುಡಾಯಿಸಿದ ಬಳಿಕ ಬಾಲಕಿಯ ಮನೆಗೆ ತೆರಳಿದ ಇಮ್ರಾನ್ ಮತ್ತು ಪ್ರಿನ್ಸ್ ಇವರು ನೀಲ್ ಮಾಧವ್ ಸಹಾ ಜತೆ ವಾಗ್ವಾದ ನಡೆಸಿದ್ದಾರೆ. ನಂತರ ಅವರು ಸಾಹಾ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ಆರೋಪಿಗಳಾದ ಮಾಮೂನ್, ಫರಾದ್, ರೆಹಮ್, ಅಖೆರ್ ಮತ್ತು ರಾಬಿನ್ ಕೂಡ ಇದ್ದರು.
ದಾಳಿಯ ವೇಳೆ ಆರೋಪಿಯು ಸಾಹಾ ಬಳಿಯಿದ್ದ ೩೦೦ ರೂಪಾಯಿ ಹಾಗೂ ಪತ್ನಿಯ ಕೊರಳಲ್ಲಿದ್ದ ಚಿನ್ನದ ಸರ ಕದ್ದಿದ್ದಾನೆ. ಈ ಘಟನೆಯ ನಂತರ ಸಾಹಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ, ಸಾಹಾ ಮತ್ತೆ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ಈ ಘಟನೆ ರೈಲ್ವೇ ಪೊಲೀಸರ ವ್ಯಾಪ್ತಿಯಲ್ಲಿ ಆಗಿದ್ದರಿಂದ ಅಪರಾಧವನ್ನು ದಾಖಲಿಸಲು ನಿರಾಕರಿಸಿದರು. ರೈಲ್ವೆ ಪೊಲೀಸರು ಕೂಡ ಅಪರಾಧವನ್ನು ದಾಖಲಿಸಲು ನಿರಾಕರಿಸಿದರು. ನಂತರ ಪತ್ರಿಕೆಗಳಲ್ಲಿ ಘಟನೆ ವರದಿಯಾದಾಗ ರೈಲ್ವೇ ಪೊಲೀಸರು ಅಪರಾಧ ದಾಖಲಿಸಿಕೊಂಡು ಮೂವರನ್ನು ಬಂಧಿಸಿದರು.
ನಾವು ಸಾಯಬೇಕು, ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಭಾರತಕ್ಕೆ ಓಡಿ ಹೋಗಬೇಕು ! – ಸಂತ್ರಸ್ತೆಯ ತಂದೆಯ ವ್ಯಥೆಹಿಂದೂಗಳ ಮೇಲಿನ ಈ ಅನ್ಯಾಯದ ಬಗ್ಗೆ ಗಮನ ಹರಿಸುವಂತೆ ಭಾರತವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗೆ ಹೇಳಬೇಕು !ಈ ಬಗ್ಗೆ ಸಾಹಾ ಇವರು ಪ್ರತಿಕ್ರಿಯಿಸುತ್ತಾ, ನಾನು ಬದುಕಬೇಕಾದರೆ ತಿಂಗಳಿಗೊಂದು ಹಣ ಕೊಟ್ಟು ನನ್ನೊಂದಿಗೆ ಹುಡುಗಿಯ ಮದುವೆ ಮಾಡಿಸುವಂತೆ ಪ್ರಿನ್ಸ್ ಬೆದರಿಕೆ ಹಾಕಿದ್ದ. (ಬಾಂಗ್ಲಾದೇಶದಲ್ಲಿ ಔರಂಗಜೇಬನ ವಂಶಜ ! – ಸಂಪಾದಕರು) ನಾವು ಇಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ, ಆದ್ದರಿಂದ ನಾವು ಅಂತಹ ಘಟನೆಗಳನ್ನು ಎದುರಿಸಬೇಕಾಗಿದೆ. ನಾವು ಸಾಯಬೇಕು, ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಭಾರತಕ್ಕೆ ಓಡಿ ಹೋಗಬೇಕು. ನಮಗೆ ಸಹಾಯ ಮಾಡಲು ಯಾರೂ ಮುಂದೆ ಬಂದಿಲ್ಲ. ನಮಗೆ ನ್ಯಾಯ ಬೇಕು ಎಂದು ಹೇಳಿದರು. |
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು ! ಒಂದೆಡೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ‘ಹಿಂದೂಗಳು ತಮ್ಮನ್ನು ಅಲ್ಪಸಂಖ್ಯಾತರೆಂದು ಭಾವಿಸಬಾರದು’ ಎಂದು ಹೇಳುತ್ತಾರೆ; ಆದರೆ ಇನ್ನೊಂದೆಡೆ ಅವರನ್ನು ಮಾತ್ರ ರಕ್ಷಿಸುತ್ತಿಲ್ಲ ಎಂದು ಭಾರತವು ಹಸಿನಾರವರಿಗೆ ಗದರಿಸಬೇಕು ! |