ಬಾಂಗ್ಲಾದೇಶದ ಹಿಂದೂಗಳು ತಮ್ಮನ್ನು ಅಲ್ಪಸಂಖ್ಯಾತರ ಎಂದು ತಿಳಿದುಕೊಳ್ಳಬಾರದು !

ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಆವಾಹನೆ

ಎಡಬದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ

ಢಾಕಾ (ಬಾಂಗ್ಲಾದೇಶ) – ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರು ಹಿಂದೂಗಳಿಗೆ ಉದ್ದೇಶಿಸಿ, ಹಿಂದೂಗಳು ತಮ್ಮನ್ನು ತಾವು ಅಲ್ಪಸಂಖ್ಯಾತರ ಎಂದು ತಿಳಿಯಬಾರದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟೇ ಅಧಿಕಾರ ಬಾಂಗ್ಲಾದೇಶದ ಹಿಂದೂಗಳಿಗೂ ಇದೆ. ಮುಸಲ್ಮಾನ ಬಹುಸಂಖ್ಯಾತ ದೇಶದಲ್ಲಿ ಎಲ್ಲಾ ಧರ್ಮದವರಿಗೆ ಸಮಾನ ಅಧಿಕಾರ ಇದೆ. ಬಂಗಾಲ ರಾಜ್ಯದಲ್ಲಿನ ದುರ್ಗಾ ಪೂಜೆಗೆ ಎಷ್ಟು ಮಂಟಪಗಳು ಇರುತ್ತವೆ, ಅದಕ್ಕಿಂತ ಹೆಚ್ಚಿನ ಮಂಟಪಗಳು ಢಾಕಾದಲ್ಲಿ ಇರುತ್ತವೆ, ಎಂಬ ದಾವೆ ಕೂಡ ಅವರು ಈ ಸಮಯದಲ್ಲಿ ಮಾಡಿದರು.

ಸಂಪಾದಕೀಯ ನಿಲುವು

ಶೇಖ ಹಸೀನಾ ಇವರು ಕೇವಲ ಹೀಗೆ ಕರೆ ನೀಡದೇ ಹಿಂದೂಗಳನ್ನು ಮತಾಂಧರಿಂದ ರಕ್ಷಿಸಬೇಕು ಹಾಗೂ ಅವರ ದೇವಸ್ಥಾನ ಮತ್ತು ಹಿಂದೂ ಮಹಿಳೆಯರ ರಕ್ಷಣೆ ಮಾಡಬೇಕು !