ಅನುಭೂತಿಗಳಿಂದ ಎಲ್ಲರಿಗೂ ಆನಂದ ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

 

ಪೂ. ರಮಾನಂದ ಗೌಡ

ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ಸಮಯದಲ್ಲಿ ಸನಾತನದ ಸಂತರಾದ ಪೂ. ರಮಾನಂದ ಗೌಡರಿಗೆ ಬಂದ ಅನುಭೂತಿ

೧. ಪ.ಪೂ. ಗುರುದೇವರ ಜನ್ಮೋತ್ಸವದ ದಿನದಂದು ಅವರ ಮಾರ್ಗದರ್ಶನದ ಚಿತ್ರ ಸುರುಳಿಯನ್ನು ನೋಡುವಾಗ ‘ಗುರುದೇವರನ್ನು ನೋಡುತ್ತಲೇ ಇರಬೇಕು’, ಎಂದೆನಿಸಿ ಅತ್ಯಂತ ಆನಂದವಾಗುವುದು

‘೨೦೨೧ ನೇ ಇಸವಿಯಲ್ಲಿ ಪ.ಪೂ. ಗುರುದೇವರ ಜನ್ಮೋತ್ಸವದ ದಿನದಂದು ಅವರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿರುವ ಚಿತ್ರಸುರುಳಿಯನ್ನು ನೋಡುತ್ತಿರುವಾಗ ‘ಗುರುದೇವರನ್ನು ಇನ್ನೂ ನೋಡಬೇಕು, ಅವರನ್ನು ನೋಡುತ್ತಲೇ ಇರಬೇಕು’, ಎಂದು ಅನಿಸುತ್ತಿತ್ತು. ಅವರನ್ನು ನೋಡಿ ನನ್ನ ಭಾವಜಾಗೃತಿಯಾಗುತ್ತಿತ್ತು. ಅಂತಃಕರಣದಿಂದ ‘ನನ್ನ ದೇವರು, ನನ್ನ ದೇವರು’, ಎಂಬ ಶಬ್ದ ಬರುತ್ತಿತ್ತು. ಅದರಿಂದ ನನಗೆ ಅತ್ಯಂತ ಆನಂದವಾಗುತ್ತಿತ್ತು.

೨. ಪ.ಪೂ. ಗುರುದೇವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿತವಾದ ದೈನಿಕ ‘ಸನಾತನ ಪ್ರಭಾತ’ದ ವಿಶೇಷಾಂಕದಲ್ಲಿನ ಅವರ ಚಿತ್ರವನ್ನು ನೋಡಿದಾಗ ‘ಅವರನ್ನು ನೋಡುತ್ತಲೇ ಇರಬೇಕು’, ಎಂದೆನಿಸಿ ಆನಂದವಾಗುವುದು

ಪ.ಪೂ. ಗುರುದೇವರ ೯.೫.೨೦೨೧ ಈ ದಿನದ ದೈನಿಕ ‘ಸನಾತನ ಪ್ರಭಾತ’ದ ಜನ್ಮೋತ್ಸವ ವಿಶೇಷಾಂಕವನ್ನು ನೋಡುವಾಗಲೂ ಅದರಲ್ಲಿನ ಪ.ಪೂ. ಗುರುದೇವರ ಛಾಯಾಚಿತ್ರವನ್ನು ನೋಡಿ ನನಗೆ ಬಹಳ ಭಾವಜಾಗೃತಿಯಾಗುತ್ತಿತ್ತು. ‘ಅವರನ್ನು ಇನ್ನು ನೋಡಬೇಕು, ನೋಡುತ್ತಲೇ ಇರಬೇಕು’, ಎಂದು ನನಗೆ ಅನಿಸುತ್ತಿತ್ತು. ಆಗಲೂ ಒಳಗಿನಿಂದ ‘ನನ್ನ ದೇವರು, ನನ್ನ ದೇವರು’, ಎಂಬ ಶಬ್ದ ಬರುತ್ತಿತ್ತು. ನನಗೆ ಆನಂದವೆನಿಸುತ್ತಿತ್ತು. ಈ ರೀತಿ ನನಗೆ ಬಹಳ ಕಾಲಾವಧಿಯವರೆಗೆ ಅನುಭವಿಸಲು ಸಾಧ್ಯವಾಯಿತು. ನಂತರ ನನ್ನಿಂದ ಶರಣಾಗತಭಾವದಿಂದ, ‘ಈ ಜನ್ಮದಲ್ಲಿಯೇ ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿರಿ’, ಎಂದು ಪ್ರಾರ್ಥನೆಯಾಗುತ್ತಿತ್ತು.

ಪ.ಪೂ. ಗುರುದೇವರ ಅಪಾರ ಕೃಪೆಯಿಂದಲೇ ಇಂತಹ ಅನುಭೂತಿಯು ಬಂದಿತು. ಆ ಬಗ್ಗೆ ಅವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞನಾಗಿದ್ದೇನೆ.’

– (ಪೂ.) ರಮಾನಂದ ಗೌಡ, ಮಂಗಳೂರು (೨೧.೬.೨೦೨೧)