ಮಂಗಳೂರಿನ ಯುವ ಸಾಧಕ ಕು. ಪಾರ್ಥ ಪೈ ಇವರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಯಶಸ್ಸು

ಶ್ರೀ. ಪಾರ್ಥ ಪೈ

ಮಂಗಳೂರಿನಲ್ಲಿ ಸನಾತನದ ಯುವ ಸಾಧಕ ಕು. ಪಾರ್ಥ ಪೈ ಇವರು ವಿಜ್ಞಾನ ಶಾಖೆಯ ಸ್ಪರ್ಧಾತ್ಮಕ ಪರೀಕ್ಷೆಯಾದ ಸಿ.ಇ.ಟಿ ಯಲ್ಲಿ ರಾಜ್ಯದಲ್ಲಿ  ೪೬ ನೆ ರ‍್ಯಾಂಕ್ (ಎಂಜಿನಿಯರಿಂಗ್ ವಿಭಾಗ) ಗಳಿಸಿರುತ್ತಾರೆ ಹಾಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ ಜೆ.ಇ.ಇ (ಮೆಯಿನ್ಸ) ನಲ್ಲಿ ಶೇ. ೯೯.೬೬ ರಷ್ಟು ಅಂಕ ಪಡೆದಿರುತ್ತಾರೆ. ಕು. ಪಾರ್ಥ ಇವರು ಇಲ್ಲಿನ ಸಾಧಕರಾದ ಸೌ. ಅಂಜನಿ ಪೈ ಹಾಗೂ ಶ್ರೀ. ಪುಂಡಲೀಕ ಪೈ ಇವರ ಪುತ್ರರಾಗಿದ್ದಾರೆ. ಕು. ಪಾರ್ಥ ಇವರು ‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ’, ಎಂದು ಹೇಳಿ ಶ್ರೀಗುರು ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.