ಭಾರತವನ್ನು ‘ಮುಸ್ಲಿಂ ರಾಷ್ಟ್ರ’ ಮಾಡುವ ಉದ್ದೇಶ ! – ಜೈಶ-ಎ-ಮಹಮ್ಮದ ಭಯೋತ್ಪಾದಕ ಹಬೀಬುಲ

ನೂಪುರ ಶರ್ಮಾರ ಹತ್ಯೆ ಮಾಡುವ ಸಂಚು !

ಜೈಶ-ಎ-ಮಹಮ್ಮದ ಭಯೋತ್ಪಾದಕ ಹಬೀಬುಲ

ಫತೇಹಪೂರ (ಉತ್ತರಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ಬಂಧಿಸಿರುವ ಜೈಶ-ಎ-ಮಹಮ್ಮದನ ಭಯೋತ್ಪಾದಕ ಹಬೀಬುಲ ಇಸ್ಲಾಮ್ ಅಲಿಯಾಸ್ ಸೈಫುಲ್ಲಾನಿಗೆ ಭಾರತವನ್ನು ‘ಮುಸ್ಲಿಂ ರಾಷ್ಟ್ರ’ವನ್ನಾಗಿ ಮಾಡುವುದಿದ್ದು, ಅದಕ್ಕಾಗಿ ಅವನು ಕೆಲಸವನ್ನೂ ಮಾಡುತ್ತಿದ್ದನು. ತನಿಖಾ ದಳಕ್ಕೆ ಇದುವರೆಗೆ ಸಿಕ್ಕಿರುವ ಮಾಹಿತಿಯನುಸಾರ ಅವನು, ‘ಭಾಜಪದ ಮಾಜಿ ವಕ್ತೆ ನೂಪುರ ಶರ್ಮಾಳ ಹತ್ಯೆಗಾಗಿ ಸಂಚು ರೂಪಿಸುತ್ತಿದ್ದನು’, ಎನ್ನುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಸಹಾರನಪೂರದಿಂದ ಬಂಧಿಸಲಾಗಿರುವ ಭಯೋತ್ಪಾದಕ ನದೀಂನಿಗೆ ಆತ್ಮಾಹುತಿ ಆಕ್ರಮಣ ಮಾಡಿ ನೂಪುರ ಶರ್ಮಾಳನ್ನು ಹತ್ಯೆ ಮಾಡುವುದಿತ್ತು ಎಂದು ಅವನು ಹೇಳಿದ್ದಾನೆ. ನದೀಂನು ಹಬೀಬುಲನ ಸಂಪರ್ಕದಲ್ಲಿದ್ದನು.

‘ಜಿಹಾದ ಮಾಡುವುದರಿಂದಲೇ ಸ್ವರ್ಗ(ಜನ್ನತ್) ಸಿಗುವುದು (ಅಂತೆ) !

ಹಬೀಬುಲ್, ‘ಜಿಹಾದ ಮಾಡುವುದರಿಂದಲೇ ಸ್ವರ್ಗ(ಜನ್ನತ) ಸಿಗುವುದು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯು ಇಸ್ಲಾಂ ಸ್ವೀಕರಿಸಲೇ ಬೇಕು. ಇಸ್ಲಾಂ ಇದೊಂದೆ ಧರ್ಮವಾಗಿದೆ. ಯಾರು ಇದನ್ನು ಸ್ವೀಕರಿಸುವುದಿಲ್ಲವೋ, ಅವನಿಗೆ ‘ತಾಲಿಬಾನಿ ಶಿಕ್ಷೆ’ ನೀಡಲಾಗುವುದು’, ತಾಲಿಬಾನಿ ಹೇಗೆ ಕ್ರೂರವಾಗಿ ಜನರ ಹತ್ಯೆ ಮಾಡುತ್ತಾರೆಯೋ, ಆ ಪದ್ಧತಿ ಹಬೀಬುಲ್ಲಾನಿಗೆ ಇಷ್ಟವಾಗುತ್ತದೆ. ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ಅವನು ‘ಟೆಲಿಗ್ರಾಮ್’ ಈ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದನು. ಉಗ್ರ ನಿಗ್ರಹ ದಳವು ‘ಫತೇಹಪುರ, ಕಾನಪೂರ ಅಲ್ಲದೇ ದೇಶಾದ್ಯಂತವಿರುವ ವಿವಿಧ ನಗರಗಳಲ್ಲಿ ಯಾರು ಯಾರು ಅವನ ಸಂಪರ್ಕದಲ್ಲಿದ್ದಾರೆ?’, ಎಂದು ಶೋಧಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳೇ, ಭಾರತ ಮತ್ತೊಮ್ಮೆ ಮುಸ್ಲಿಂ ಆಡಳಿತದ ನಿಯಂತ್ರಣದಲ್ಲಿ ಹೋಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !