ಪ್ರೇಮಭಾವ, ಸ್ಥಿರತೆ ಮತ್ತು ದೇವರ ಮೇಲೆ ದೃಢ ಶ್ರದ್ಧೆ ಇರುವ ಪುಣೆಯ ಶ್ರೀಮತಿ ಮಾಲತಿ ನವನೀತದಾಸ ಶಹಾ (೮೩ ವರ್ಷ) ಸನಾತನದ ೧೨೦ ನೇ ಸಂತಪದವಿಯಲ್ಲಿ ವಿರಾಜಮಾನ !

ಪೂ. ಶ್ರೀಮತಿ ಮಾಲತಿ ನವನೀತದಾಸ ಶಹಾ

ಪುಣೆ – ಪ್ರೇಮಭಾವ, ಸ್ಥಿರತೆ ಮತ್ತು ದೇವರ ಮೇಲೆ ದೃಢ ಶ್ರದ್ಧೆ ಇರುವ ಪುಣೆಯ ಶ್ರೀಮತಿ ಮಾಲತಿ ನವನೀತದಾಸ ಶಹಾ (ವಯಸ್ಸು ೮೩ ವರ್ಷಗಳು) ಇವರು ಸನಾತನದ ೧೨೦ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಆನಂದ ವಾರ್ತೆಯನ್ನು ಸದ್ಗುರು ಸ್ವಾತಿ ಖಾಡ್ಯೆ ಇವರು ೪ ಆಗಸ್ಟ್ ಈ ದಿನದಂದು ನೀಡಿದರು. ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಶ್ರೀಮತಿ) ಶಹಾಅಜ್ಜಿ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಲು  ವಾಯಿಯಲ್ಲಿರುವ ಅವರ ಮನೆಗೆ ಹೋಗಿದ್ದರು. ಆ ಸಮಯದಲ್ಲಿ ಅವರು ಈ ಆನಂದವಾರ್ತೆಯನ್ನು ಎಲ್ಲರಿಗೂ ನೀಡಿದರು. ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಶ್ರೀಮತಿ) ಮಾಲತಿ ಶಹಾ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರ, ಹಾಗೆಯೇ ಶಾಲು ಮತ್ತು ಶ್ರೀಫಲವನ್ನು ನೀಡಿ ಅವರನ್ನು ಸನ್ಮಾನಿಸಿದರು. ‘ಈ ಆನಂದವಾರ್ತೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯರು ಕೃಪಾಶೀರ್ವಾದವನ್ನೇ ನೀಡಿದ್ದಾರೆ, ಎಂಬ ಭಾವವು ಅಲ್ಲಿನ ಸಾಧಕರಿಗೆಲ್ಲ ಅರಿವಾಯಿತು.