ಕೆಲವು ಅಜ್ಞಾತ ಕ್ರಾಂತಿಕಾರರ ವೀರಗಾಥೆ !

ಇತಿಹಾಸ ತಿಳಿದುಕೊಳ್ಳಿರಿ, ರಾಷ್ಟಾçಭಿಮಾನ ಬೆಳೆಸಿರಿ !

ಭಗತಸಿಂಗ, ಸುಖದೇವ್, ರಾಜಗುರು ಇವರಂತೆಯೇ ದೇಶದಲ್ಲಿ ಸಾವಿರಾರು ಕ್ರಾಂತಿಕಾರರು ಆಗಿ ಹೋಗಿದ್ದಾರೆ, ಅವರು ಕ್ರಾಂತಿಯ ದೀವಟಿಗೆಯನ್ನು ಪ್ರಜ್ವಲಿಸಿಟ್ಟರು, ಇಂತಹ ಅಜ್ಞಾತ ಕ್ರಾಂತಿಕಾರರ ಬಗ್ಗೆ ಈ ಲೇಖನದಿಂದ ಮಾಹಿತಿ ಪಡೆದು ಸ್ವರಾಜ್ಯವನ್ನು ಸುರಾಜ್ಯ (ಹಿಂದೂ ರಾಷ್ಟç) ವನ್ನಾಗಿಸಲು ಕೃತಿಶೀಲರಾಗೋಣ !

ಶಂಕರ ಮಹಾಲೆ

೯ ರಿಂದ ೧೧ ಆಗಸ್ಟ್ ೧೯೪೨ ಹೀಗೆ ೩ ದಿನಗಳ ಕಾಲ ನಾಗಪುರದÀ ಆಂದೋಲನ ಕಾರರು ಮುಷ್ಕರವನ್ನು ಹೂಡಿ ಸಭೆಯನ್ನು ತೆಗೆದುಕೊಂಡರು. ಸರಕಾರಿ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳ ಎದುರು ಮೆರವಣಿಗೆಯನ್ನು ನಡೆಸ ಲಾಯಿತು ಮತ್ತು ಠಾಣೆಗಳನ್ನು ಸುಡಲಾಯಿತು. ಅದರಲ್ಲಿ ಕ್ರಾಂತಿಕಾರಿ ಶಂಕರ ಮಹಾಲೆಯವರು ಪಾಲ್ಗೊಂಡಿದ್ದರು. ಆದುದರಿಂದ ೧೭ ವರ್ಷಗಳ ಮಹಾಲೆ ಯವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು.

ಬಾಲಕ್ರಾಂತಿವೀರಾಂಗನೆಯರು – ಸುನೀತಿ ಚೌಧರಿ ಮತ್ತು ಶಾಂತಿ ಘೋಷ್

ಸುನೀತಿ ಚೌಧರಿ

 

ಶಾಂತಿ ಘೋಷ್

೧೪ ಡಿಸೆಂಬರ್ ೧೯೩೧ ದಿನದಂದು ಶಾಂತಿ ಘೋಷ್ ಮತ್ತು ಸುನೀತಿ ಚೌಧರಿ ಈ ೧೩ ವರ್ಷಗಳ ಇಬ್ಬರು ಸ್ನೇಹಿತೆಯರು ಅನ್ಯಾಯಿ ನ್ಯಾಯದಂಡಾಧಿಕಾರಿ ಸ್ಟಿವನ್ಸ್ ಇವನನ್ನು ಶಾಲೆಯ ಕಾರ್ಯಕ್ರಮಕ್ಕೆ ಆಮಂತ್ರಣ ನೀಡುವ ನಿಮಿತ್ತವನ್ನು ಸಾಧಿಸಿ ಅವರ ಕಚೇರಿಗೆ ಹೋದರು. ಅವರು ನೀಡಿದ ಆಮಂತ್ರಣ ಪತ್ರಿಕೆಯನ್ನು ಓದಲು ಸ್ಟಿವನ್ಸ್ ಇವರು ತಲೆ ಕೆಳಗೆ ಮಾಡುತ್ತಲೇ ಇವರಿಬ್ಬರೂ ಅವರ ಮೇಲೆ ಗುಂಡುಗಳನ್ನು ಹಾರಿಸಿ ಅವರನ್ನು ಕೊಂದು ಹಾಕಿದರು. ಇವರಿಬ್ಬರಿಗೂ ಕಠಿಣ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಯಿತು.

ಕ್ರಾಂತಿಕಾರಿಶಿರೀಷಕುಮಾರ ಮೆಹತಾ

ಶಿರೀಷಕುಮಾರ ಮೆಹತಾ

ನಂದೂರಬಾರ್ (ಮಹಾ ರಾಷ್ಟç) ದಲ್ಲಿ ೯ ಸೆಪ್ಟೆಂಬರ್ ೧೯೪೨ ಈ ದಿನದಂದು ತ್ರಿವರ್ಣ ಯಾತ್ರೆಗೆ ಆಂಗ್ಲರು ವಿರೋಧಿಸಿದರು. ಲಾಠಿಮಾರ್ ಮಾಡುತ್ತಾ ಬಂದೂಕುಗಳನ್ನು ತಡೆ ಹಿಡಿದಿದ್ದರು. ಈ ಯಾತ್ರೆಯಲ್ಲಿ ೧೬ ವರ್ಷದ ಶಿರೀಷಕುಮಾರ ಮೆಹತಾ ಇವರು ಸಹ ಪಾಲ್ಗೊಂಡಿದ್ದರು. ಆಂಗ್ಲರು ಬಂದೂಕು ತಡೆಹಿಡಿದಿದ್ದನ್ನು ನೋಡಿ `ಒಂದು ವೇಳೆ ಗುಂಡು ಹಾರಿಸುವುದಿದ್ದರೆ, ಮೊದಲು ನನ್ನ ಮೇಲೆ ಹಾರಿಸಿ’, ಎಂದು ಹೇಳುತ್ತಾ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಶಿರೀಷಕುಮಾರ ಅವರೆದುರು ನಿಂತರು. ಇದರಿಂದ ಸಿಟ್ಟಿಗೆದ್ದ ನಿರ್ದಯಿ ಆಂಗ್ಲ ಪೊಲೀಸರು ಅವರ ಮೇಲೆ ೪ ಗುಂಡುಗಳನ್ನು ಹಾರಿಸಿದರು. ಇದರಲ್ಲಿ ಶಿರೀಷಕುಮಾರ ಇವರು ಹುತಾತ್ಮರಾದರು.

ಕ್ರಾಂತಿಕಾರಿ ಸುಶೀಲ ಸೆನ್

ಸುಶೀಲ ಸೆನ್

೧೬ ಅಗಸ್ಟ್ ೧೯೦೭ ರಂದು ಕೊಲಕಾತಾ ನ್ಯಾಯಾಲಯ ದಲ್ಲಿ ಅರವಿಂದ ಘೋಷರ ಮೇಲೆ ಮೊಕದ್ದಮೆ ನಡೆದಿರುವಾಗ ಹೊರಗೆ ಸೇರಿದ ದೇಶಭಕ್ತರು `ವಂದೇ ಮಾತರಮ್’ ಘೋಷಣೆ ಕೂಗುತ್ತಿದ್ದರು. ಆ ದೇಶಭಕ್ತರ ಮೇಲೆ ಆಂಗ್ಲ ಸಿಪಾಯಿಗಳು ಮನಬಂದAತೆ ಲಾಠಿಮಾರ್ ಮಾಡತೊಡಗಿದರು. ೧೫ ವರ್ಷಗಳ ಸುಶೀಲ ಸೆನ್ ಇವನಿಗೆ ಅದನ್ನು ನೋಡಲು ಆಗಲಿಲ್ಲ. ಅವನು ಓರ್ವ ಬಲಿಷ್ಠ ಆಂಗ್ಲ ಸಿಪಾಯಿಗೆ ಕೈಯಿಂದಲೇ ೨-೩ಏಟು ಕೊಟ್ಟನು ! ಉಳಿದ ಸಿಪಾಯಿಗಳು ಸುಶೀಲನನ್ನು ಸುತ್ತು ವರಿದರು ಮತ್ತು ರಕ್ತಸಿಕ್ತನಾಗುವವರೆಗೆ ಹೊಡೆದರು. ಮರುದಿನ ನ್ಯಾಯಾಲಯವು ಸುಶೀಲನಿಗೆ ೧೫ ಛಡಿಯೇಟಿನ ಶಿಕ್ಷೆ ವಿಧಿಸಿತು. ಸುಶೀಲನು ಧೈರ್ಯದಿಂದ ಅದನ್ನು ಭೋಗಿಸಿದನು !

ಜ್ಞಾತ-ಅಜ್ಞಾತ ಕ್ರಾಂತಿಕಾರಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಸವಿನಯ ವಂದನೆಗಳು !