ಪಂಢರಪುರ ವಿಠ್ಠಲ ಮಂದಿರದ ಸರಕಾರೀಕರಣ ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ!- ಡಾ. ಸುಬ್ರಹ್ಮಣ್ಯಮ್ ಸ್ವಾಮಿ, ಭಾಜಪ

ಮುಂಬಯಿ – ಪಂಢರಪುರದಲ್ಲಿ ಹಿಂದೂ ಭಕ್ತರಿಗೆ ತೊಂದರೆ ನೀಡಲಾಗುತ್ತಿದೆ. ಸರಕಾರವು ಹಿಂದೂಗಳ ಮಂದಿರಗಳನ್ನು ಕಬಳಿಸುತ್ತಿದೆ. ಈ ಮಂದಿರಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ನಾನು ಸ್ವತಃ ಪಂಢರಪುರಕ್ಕೆ ಹೋಗಿ ಜನರನ್ನು ಭೇಟಿಯಾಗುತ್ತೇನೆ. ಎಲ್ಲ ಪರಿಸ್ಥಿತಿಗಳ ವರದಿಯನ್ನು ತೆಗೆದುಕೊಂಡು ನಾನು ಪಂಢರಪುರದ ವಿಠ್ಠಲ ಮಂದಿರದ ಸರಕಾರೀಕರಣವನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಿದ್ದೇನೆ ಎಂದು ಭಾಜಪ ಹಿರಿಯ ಮುಖಂಡ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಹೇಳಿದರು. ಮುಂಬಯಿಯಲ್ಲಿ ಇಸ್ಕಾನ ಮಂದಿರದಲ್ಲಿ ವಾರಕರಿ ಪಾಯಿಕ್ ಸಂಘದ ಅಧ್ಯಕ್ಷರಾದ ವಿಠ್ಠಲ ಮಹಾರಾಜ ಚೌರೆ, ದೇವವ್ರತ ರಾಣಾ ಮಹಾರಾಜ ವಾಸಕರ, ಹ.ಭ.ಪ. ರಾಮಕೃಷ್ಣ ವೀರ ಮಹಾರಾಜ ಮತ್ತು ಮಾವುಲಿ ಸಂಘದ ಅಧ್ಯಕ್ಷ ಗೋಸಾವಿ ಮಹಾರಾಜರು ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರನ್ನು ಭೇಟಿಯಾದರು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಆ ಸಮಯದಲ್ಲಿ `ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರಿಗೆ ನಾವು ಪಂಢರಪುರಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದ್ದು, ಅವರು ಅದನ್ನು ಸ್ವೀಕರಿಸಿದ್ದಾರೆ’, ಎಂದು ದೇವವ್ರತ ರಾಣಾ ಮಹಾರಾಜ ವಾಸಕರ ಅವರು ಹೇಳಿದರು. ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ವಾರ್ಷಿಕ ವ್ಯವಹಾರ ರೂ.35 ಕೋಟಿಗಳಷ್ಟಿದ್ದು, ವರ್ಷದಲ್ಲಿ ಒಂದೂವರೆ ಕೋಟಿ ಭಕ್ತರು ದರ್ಶನಕ್ಕೆ ಬರುತ್ತಾರೆ. ಸದ್ಯು ದೇವಸ್ಥಾನ ಸಮಿತಿಯ ಅಧ್ಯಕ್ಷ ಹುದ್ದೆಯು ಖಾಲಿಯಿದ್ದು, ಸಹ ಅಧ್ಯಕ್ಷ ಹುದ್ದೆಯು ಹ.ಭ.ಪ. ಗಹಿನಿನಾಥ ಜ್ಞಾನೇಶ್ವರ ಮಹಾರಾಜ(ಔಸಕರ) ಇವರ ಬಳಿಯಿದೆ.

ಸಂಪಾದಕೀಯ ನಿಲುವು

ಮಂದಿರ ಸರಕಾರೀಕರಣದಿಂದ ಮಂದಿರದ ಆಡಳಿತಮಂಡಳಿಯ ಅವ್ಯವಹಾರಗಳು ಬಹಿರಂಗಗೊಳ್ಳುತ್ತಿರುವ ಅಸಂಖ್ಯಾತ ಘಟನೆಗಳು ಕಂಡು ಬಂದಿವೆ. ಮಂದಿರದ ದೇವನಿಧಿಯು ಹಿಂದೂ ಧರ್ಮಕಾರ್ಯಕ್ಕಾಗಿ ಉಪಯೋಗವಾಗುವುದು ಆವಶ್ಯಕವಿರುವುದರಿಂದ ಆದಷ್ಟು ಬೇಗನೆ ಮಂದಿರಗಳನ್ನು ಭಕ್ತರ ವಶಕ್ಕೆ ನೀಡಬೇಕು ಎಂದು ಭಕ್ತರ ಅಪೇಕ್ಷೆಯಾಗಿದೆ.