ಗಾಯಗೊಂಡ ಚೀನಿ ಸೈನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಭಾರತೀಯ ಡಾಕ್ಟರರನ್ನು ಚೀನಾ ಹತ್ಯೆಗೈದಿತ್ತು

  • ೨೦೨೦ ರಲ್ಲಿ ಭಾರತದ ಗಲ್ವಾನ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆ ಪ್ರಕರಣ

  • ಮುಂಬರುವ ಪುಸ್ತಕದಿಂದ ಆಘಾತಕಾರಿ ಮಾಹಿತಿ ಬಹಿರಂಗ

ನವ ದೆಹಲಿ – ೨೦೨೦ ನೇ ಇಸವಿಯಲ್ಲಿ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸಿ ಚೀನಾದ ಅನೇಕ ಸೈನಿಕರ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವ ಭಾರತೀಯ ಸೈನ್ಯದ ಡಾ. ದೀಪಕ ಸಿಂಹ ಅವರು ಅನೇಕ ಚೀನಾ ಸೈನಿಕರಿಗೂ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದರು. ಆದರೂ ಚೀನಾ ಸೈನ್ಯವು ಅವರನ್ನು ಅಪಹರಿಸಿ ಹತ್ಯೆ ಮಾಡಿತು ಎನ್ನುವ ಆಘಾತಕಾರಿ ಮಾಹಿತಿಯನ್ನು ‘ಇಂಡಿಯಾಸ್ ಮೋಸ್ಟ ಫಿಯರಲೆಸ್ ೩ : ನ್ಯೂ ಮಿಲಿಟರಿ ಸ್ಟೋರೀಸ ಆಫ್ ಅನ್.ಇಮ್ಯಾಜಿನೇಬಲ ಕರೇಜ ಅಂಡ್ ಸ್ಯಾಕ್ರಿಫೈಸ್’ (ಭಾರತದ ಅತ್ಯಂತ ನಿರ್ಭೀತ ೩: ಕಲ್ಪನಾತೀತ ಧೈರ್ಯ ಮತ್ತು ಬಲಿದಾನದ ಇನ್ನಷ್ಟು ಸೈನ್ಯದ ಹೊಸ ಕಥೆಗಳು) ಈ ಪುಸ್ತಕದಲ್ಲಿ ಬರೆಯಲಾಗಿದೆ. ಶಿವ ಅರೂರ ಮತ್ತು ರಾಹುಲ ಸಿಂಹ ಪತ್ರಿಕಾ ವರದಿಗಾರರು ಈ ಪುಸ್ತಕವನ್ನು ಬರುವ ಆಗಸ್ಟ್ ೧೫ ರಂದು ೭೫ ನೇ ಸ್ವಾತಂತ್ರ್ಯ ದಿನದಂದು ಬಿಡುಗಡೆಗೊಳಿಸಲಿದ್ದಾರೆ.

ಪುಸ್ತಕದ ಕೆಲವು ಮಹತ್ವಪೂರ್ಣ ಅಂಶಗಳು

೧. ೧೫ ಜೂನ ೨೦೨೦ ರ ರಾತ್ರಿ ಎರಡು ಸೈನ್ಯಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಭಾರತದ ಒಬ್ಬ ಕರ್ನಲ ಸಹಿತ ೨೦ ಸೈನಿಕರು ಸರ್ವೋಚ್ಚ ಬಲಿದಾನವನ್ನು ನೀಡಿದರು. ಚೀನಾ ಅವರ ಕೇವಲ ೪ ಸೈನಿಕರು ಹತರಾದರು ಎಂದು ಹೇಳಿತ್ತು. ಆದರೆ ಪುಸ್ತಕದಲ್ಲಿ ನೀಡಿರುವ ಅನೇಕ ಸತ್ಯ ಆಧಾರಿತ ಘಟನೆಗಳನ್ನು ಆಧರಿಸಿ ಚೀನಾದ ಸುಳ್ಳುತನ ಬಯಲಾಗಿದೆ.

೨.ಗಲ್ವಾನ ಕಣಿವೆಯಲ್ಲಿ ಚೀನಾ ತನ್ನ ಗಾಯಾಳು ಸೈನಿಕರನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಸಾಧಾರಣ ೩೦ ಕ್ಕಿಂತ ಅಧಿಕ ಗಾಯಾಳು ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡಿ ಅವರ ಜೀವ ಕಾಪಾಡಿದ ಬಳಿಕ ಡಾ. ದೀಪಕ ಸಿಂಹ ಇವರು ಗಾಯಾಳು ಚೀನಿ ಸೈನಿಕರಿಗೂ ಚಿಕಿತ್ಸೆ ನೀಡಿದ್ದರು.

೩. ತದನಂತರ ಚೀನಿ ಸೈನ್ಯವು ಡಾ. ಸಿಂಹ ಇವರನ್ನು ಅಪಹರಿಸಿ ಅವರ ಇನ್ನುಳಿಕ ಗಾಯಾಳು ಸೈನಿಕರ ಚಿಕಿತ್ಸೆ ಮಾಡಿಸಿಕೊಂಡಿತು ಮತ್ತು ತದನಂತರ ಅವರನ್ನು ಹತ್ಯೆ ಮಾಡಿತು.

೪. ೨೬ ಜನವರಿ ೨೦೨೧ ರಂದು ಡಾ. ಸಿಂಹ ಇವರಿಗೆ ಮರಣೋತ್ತರ ಎರಡನೇಯ ಸರ್ವೋಚ್ಚ ಶೌರ್ಯ ಪುರಸ್ಕಾರವಾಗಿರುವ ‘ವೀರಚಕ್ರ’ ಪ್ರದಾನಿಸಲಾಯಿತು.
೫.ಅವರ ಪತ್ನಿ ರೇಖಾ ಸಿಂಹ ಇವರು ಭಾರತೀಯ ಸೈನ್ಯದಲ್ಲಿ ಭರ್ತಿಯಾಗಿದ್ದು, ಮುಂದಿನ ವರ್ಷ ‘ಲೆಫ್ಟಿನೆಂಟ’ ಎಂದು ಸೇರ್ಪಡೆಯಾಗಲಿದ್ದಾರೆ. ಸದ್ಯ ಅವರ ಸೇನಾ ತರಬೇತಿ ಪ್ರಾರಂಭವಾಗಿದೆ.

ಸಂಪಾದಕೀಯ ನಿಲುವು

ಪಾಶವಿ ಮನೋವೃತ್ತಿ ಮತ್ತು ಉಪಕಾರ ಮಾಡುವವರಿಗೇ ಆಘಾತ ಮಾಡುವ ಕೃತಘ್ನ ಚೀನಾ. ಇಂತಹ ಚೀನಾಕ್ಕೆ ಈಗ ಎಲ್ಲ ಸ್ತರಗಳಲ್ಲಿಯೂ ನಿರ್ನಾಮ ಮಾಡಲು ಭಾರತ ಪ್ರಯತ್ನಿಸುವುದು ಆವಶ್ಯಕ !