ಕೆಲವು ದಿನಗಳ ಹಿಂದೆ (೧ ಜುಲೈ ೨೦೨೨ ರಂದು) ಭಾರತದ ‘ರಕ್ಷಣಾ ಸಂಶೋಧನ ಹಾಗೂ ವಿಕಾಸ ಸಂಸ್ಥೆ’ಯು (‘ಡಿ.ಆರ್.ಡಿ.ಒ’) ‘ಘಾತಕ’ ಎಂಬ ಯುದ್ಧ ವಿಮಾನವನ್ನು ಪರೀಕ್ಷಣೆ ಮಾಡಿತು. ಮುಂಬರುವ ಕಾಲದಲ್ಲಿ ಸಂರ್ಪೂಣ ಯುದ್ಧನೀತಿಯನ್ನು ಬದಲಾಯಿಸುವ ಶಕ್ತಿಯಿರುವ ತಂತ್ರಜ್ಞಾನವನ್ನು ಭಾರತ ಈಗ ಅಂಗೀಕರಿಸಿದೆ. ಆದ್ದರಿಂದಲೇ ಭಾರತವು ‘ಘಾತಕ’ದ ಪರೀಕ್ಷಣೆಯಿಂದ ಏನು ಗಳಿಸಿತು ? ಈ ಪರೀಕ್ಷಣೆಯಿಂದ ಭವಿಷ್ಯದಲ್ಲಿ ಎಂತಹ ಪರಿಣಾಮವಾಗಲಿಕ್ಕಿದೆ ? ಇದರಿಂದ ನಾವು ಯಾವ ತಂತ್ರಜ್ಞಾನವನ್ನು ವಿಕಸಿತಗೊಳಿಸಿದ್ದೇವೆ ? ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಅದಕ್ಕಾಗಿ ಈ ಲೇಖನ…
೧. ಗುಪ್ತ ತಂತ್ರಜ್ಞಾನವನ್ನು ಉಪಯೋಗಿಸಿ ತಯಾರಿಸಿದ ‘ಘಾತಕ’ ಯುದ್ಧ ವಿಮಾನ
‘ಘಾತಕ’ – ಮಾನವರಹಿತ ಯುದ್ಧ ವಿಮಾನ ‘ಘಾತಕ’ ಇದು ‘ಡಿ.ಆರ್.ಡಿ.ಓ.’ ತಯಾರಿಸುತ್ತಿದ್ದ (UCAV ಯುಕಾವ್) ಸ್ವಯಂಚಾಲಿತ ಮಾನವರಹಿತ ಯುದ್ಧ ವಿಮಾನ ಹಾರಾಟದ (‘ಸ್ಟೆಲ್ಥೀ ಅನ್ಮ್ಯಾನ್ಡ್ ಕಾಂಬೆಕ್ಟ್ ಎಅರ್ ವ್ಹೆಹಿಕಲ್’ನ) ಸಣ್ಣ ಸ್ವರೂಪವಾಗಿದೆ. ಅದರ ಹೆಸರಿನಲ್ಲಿ ಎರಡು ವಿಷಯಗಳು ಅತ್ಯಂತ ಮಹತ್ವದ್ದಾಗಿವೆ. ಒಂದು ‘ಸ್ಟೆಲ್ಥ್ ಟೆಕ್ನಾಲಾಜಿ’ (ಗುಪ್ತ ತಂತ್ರಜ್ಞಾನ), ಇದು ಅನೇಕ ಪ್ರಕಾರದ ತಂತ್ರಜ್ಞಾನದ ಸಂಗಮವಿರುವ ತಂತ್ರಜ್ಞಾನವಾಗಿದೆ. ಅವುಗಳನ್ನು ಉಪಯೋಗಿಸಿ ಯಾವುದೇ ವಸ್ತುವನ್ನು ಗಾಳಿಯಲ್ಲಿ ರಡಾರ್‌ನಿಂದ ಅದೃಶ್ಯಗೊಳಿಸಬಹುದು ಅಥವಾ ಅದು ಅದೃಶ್ಯವಾಗಿರುತ್ತದೆ. ಒಂದು ವೇಳೆ ನಾವು ವಿವಿಧ ತಂತ್ರಜ್ಞಾನಗಳಿಂದ ಗಾಳಿಯಲ್ಲಿ ಪ್ರವಾಸ ಮಾಡುವ ವಿಷಯಗಳ ‘ವಿಸಿಬಲ್ ಸ್ಪೆಕ್ಟ್ರಮ್'(ದೃಶ್ಯ ವರ್ಣಪಟ), ‘ಇನ್ಫ್ರಾರೆಡ್ ರಡಾರ್ ಸಿಗ್ನೇಚರ್’, ‘ರೆಡಿಯೋ ಫ್ರಿಕ್ವೆನ್ಸಿ’, ಹಾಗೂ ‘ಇಲೆಕ್ಟ್ರಾನಿಕ್ ರೆಡಿಯೇಶನ್’ ಇವೆಲ್ಲ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾದರೆ ಅಥವಾ ಅವುಗಳನ್ನು ಬದಿಗೆಸರಿಸಲು ಸಾಧ್ಯವಾದರೆ, ಇಂತಹ ವಸ್ತುಗಳು ಗಾಳಿಯಲ್ಲಿ ಪ್ರವಾಸ ಮಾಡುತ್ತಿರುವಾಗ ರಡಾರ್‌ನಲ್ಲಿ ಅದೃಶ್ಯವಿರುತ್ತದೆ. ಇದಕ್ಕೆ ‘ಸ್ಟೆಲ್ಥ್ ಟೆಕ್ನಾಲಾಜಿ’ (ಗುಪ್ತ ತಂತ್ರಜ್ಞಾನ) ಎಂದು ಹೇಳುತ್ತಾರೆ. ಭಾರತದಲ್ಲಿ ಇಂದಿನವರೆಗೆ ಇಂತಹ ತಂತ್ರಜ್ಞಾನವಿರಲಿಲ್ಲ. ಜಗತ್ತಿನಲ್ಲಿ ಕೇವಲ ಅಮೇರಿಕಾ ಮತ್ತು ಇಸ್ರೆಲ್‌ನಲ್ಲಿ ಇಂತಹ ತಂತ್ರಜ್ಞಾನ ಇದೆಯೆಂದು ಹೇಳಲಾಗುತ್ತದೆ. ಆದ್ದರಿಂದಲೆ ಭಾರತ ಈ ತಂತ್ರಜ್ಞಾನ ಕಲಿಯಲು ಕಳೆದ ಕೆಲವು ದಶಮಾನಗಳಿಂದ ಕೆಲಸ ನಡೆಸುತ್ತಿದೆ. ‘ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಡಿಇ)’, ‘ಡಿ.ಆರ್.ಡಿ.ಓ.’ ಮತ್ತು ಭಾರತೀಯ ವಾಯು ಪಡೆಯವರು ಒಟ್ಟಾಗಿ ಸ್ಟೆಲ್ಥ್ ಪದ್ಧತಿಯ ಯೂಕ್ಯವ್‌ನ ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಮೊದಲು ೨೦೦೯ ರಲ್ಲಿ ‘ಆರಾ’ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದರು; ಆದರೆ ೨೦೧೫ ರಲ್ಲಿ ಅಂದಿನ ಸಂರಕ್ಷಣಮಂತ್ರಿ ಮನೋಹರ ಪರ‍್ರೀಕರರು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಆರ್ಥಿಕ ಬೆಂಬಲವನ್ನು ನೀಡಿದರು ಹಾಗೂ ಇದಕ್ಕೆ ‘ಘಾತಕ’ ಎಂದು ಹೆಸರನ್ನಿಡಲಾಯಿತು. ಅನಂತರ ಇವೆರಡೂ ಸಂಸ್ಥೆಗಳು ವಾಯುದಳ ಸಹಿತ ಒಟ್ಟಾಗಿ ಕಳೆದ ೫ ರಿಂದ ೭ ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ಭಾರತದಲ್ಲಿ ವಿಕಾಸಗೊಳಿಸಿದರು.
೨. ‘ಘಾತಕ’ ಯುದ್ಧ ವಿಮಾನಕ್ಕೆ ನೀಡಿರುವ ಮೂರ್ತಸ್ವರೂಪ
ಯಾವುದೇ ‘ಸ್ಟೆಲ್ಥ್ ಯೂಕ್ಯವ್’ (ಗುಪ್ತ ತಂತ್ರಜ್ಞಾನವನ್ನು ಉಪ ಯೋಗಿಸಿದ ಮಾನವರಹಿತ ಯುದ್ಧ ವಿಮಾನ) ತಯಾರಿಸುವಾಗ ಅನೇಕ ಪ್ರಕಾರದ ತಂತ್ರಜ್ಞಾನವನ್ನು ಒಂದೇ ಸಮಯದಲ್ಲಿ ಕಲಿತುಕೊಂಡು ಅವುಗಳನ್ನು ಒಟ್ಟಿಗೆ ಮಾಡಬೇಕಾಗುತ್ತದೆ. ವಿಮಾನವನ್ನು ತಯಾರಿಸುವಾಗ ಯಾವುದು ತಾನಾಗಿ ಹಾರುತ್ತದೆಯೋ, ತಾನಾಗಿ ಗಾಳಿಯಲ್ಲಿ ಮಾರ್ಗಕ್ರಮಣ ಮಾಡುವುದೋ, ತಾನಾಗಿ ಭೂಮಿಗೆ ಇಳಿಯುವುದೋ, ಯಾವುದರ ಚಕ್ರಗಳು ತಾನಾಗಿ ಒಳಗೆ ಸೇರಿಕೊಳ್ಳುತ್ತವೋ, ಭೂಮಿಯ ಮೇಲೆ ಇಳಿಯುವಾಗ ಆ ಚಕ್ರಗಳು ತಾನಾಗಿ ಹೊರಗೆ ಬರುವವೋ’, ಇಂತಹ ಎಲ್ಲ ವಿಷಯಗಳ ವಿಚಾರ ಮಾಡಬೇಕಾಗುತ್ತದೆ. ಇವೆಲ್ಲವನ್ನೂ ಮಾಡುವಾಗ ಆ ವಿಮಾನ ‘ತನ್ನಲ್ಲಿರುವ ಕ್ಷಿಪಣಿ, ಬಾಂಬ್, ‘ಲೇಸರ್ ಗೈಡೆಡ್’ ಕ್ಷಿಪಣಿ ಇಂತಹ ಅತ್ಯಾಧುನಿಕ ಆಯುಧಗಳನ್ನು ಇಟ್ಟುಕೊಂಡು ಶತ್ರುವಿನ ಕೋಟೆಯನ್ನು ಪ್ರವೇಶಿಸಿ ತನ್ನ ಗುರಿಸಾಧಿಸುವುದು ಹಾಗೂ ಶತ್ರುವಿನ ರಡಾರ್‌ನಿಂದ ಅದೃಶ್ಯವಾಗಿರುವುದು’, ಇವೆಲ್ಲವನ್ನೂ ಒಟ್ಟು ಸೇರಿಸಿ ಅದಕ್ಕೆ ಮೂರ್ತಸ್ವರೂಪವನ್ನು ನೀಡುವುದು ಅಷ್ಟೇ ಕಠಿಣವಾಗಿದೆ. ಹಾಗಾಗಿ ಜಗತ್ತಿನ ಬೆರಳೆಣಿಕೆಯಷ್ಟೇ ದೇಶಗಳಲ್ಲಿ ಇಂತಹ ತಂತ್ರಜ್ಞಾನವಿದೆ.
೩. ‘ಘಾತಕ’ – ಪ್ರಗತ ಯುದ್ಧದಲ್ಲಿನ ಒಂದು ಮೈಲುಗಲ್ಲು
ಡಿ.ಆರ್.ಡಿ.ಓ. ‘ಘಾತಕ’ದ ಸಣ್ಣ ಸ್ವರೂಪದ ಯಶಸ್ವೀ ಪರೀಕ್ಷಣೆ ಮಾಡಿ ತಮ್ಮ ಮುಂದಿನ ಪ್ರವಾಸದ ಮಾರ್ಗವನ್ನು ಮುಕ್ತಗೊಳಿಸಿದೆ. ‘ಘಾತಕ’ದ ಈ ಪ್ರತಿರೂಪವು ಅಮೇರಿಕಾದ ಪ್ರಸಿದ್ಧ ‘ಬೀ-೨ ಸ್ಟೆಲ್ಥ್ ಬಾಂಬರ್’ ವಿಮಾನದೊಂದಿಗೆ ಹೋಲಿಕೆಯಾಗುತ್ತದೆ. ಅದಕ್ಕೆ ‘ಪ್ಲೈಯಿಂಗ್ ವಿಂಗ್ ಡಿಸೈನ್’ ಎಂದು ಹೇಳಲಾಗುತ್ತದೆ. ಇದರ ಡಿಸೈನ್ ಮಾಡುವಾಗ ‘ಸ್ಟೆಲ್ಥ್’ಗೆ ಎಲ್ಲಕ್ಕಿಂತ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಇದರ ಇಂಜಿನ್‌ನ ಭಾಗಗಳು ಎಲ್ಲಿಂದಲೂ ಕಾಣಿಸದಿರುವಂತೆ ಇದನ್ನು ರಚಿಸಲಾಗಿದೆ ಹಾಗೂ ಇದರಲ್ಲಿ ಉಪಯೋಗಿಸಿದ ‘ಮೆಟೇರಿಯಲ್ ಕಂಪೋಸಿಟ್’ (ಸಮ್ಮಿಶ್ರ ಸಾಹಿತ್ಯ) ಹಾಗೂ ಇದಕ್ಕೆ ನೀಡಿರುವ ಬಣ್ಣವೂ ರಡಾರ್‌ನ ಸಿಗ್ನಲನ್ನು ಸೆಳೆಯುವುದಾಗಿದೆ. ಆದ್ದರಿಂದ ‘ಘಾತಕ’ ಇದು ರಡಾರ್‌ನಲ್ಲಿ ಸಂಪೂರ್ಣವಾಗಿ ಅದೃಶ್ಯವಾಗಿರುವುದು. ಜುಲೈ ೧ ರಂದು ಮಾಡಿರುವ ಪರೀಕ್ಷಣೆಯು ಪ್ರಾಮುಖ್ಯವಾಗಿ ‘ಘಾತಕ’ದಲ್ಲಿನ ವ್ಯವಸ್ಥೆಯು ಪರಸ್ಪರವಾಗಿ ಯೋಗ್ಯವಾದ ಹೊಂದಾಣಿಕೆಯನ್ನು ಮಾಡಿಕೊಂಡು ವಿಮಾನಯಾನ ಮಾಡಲು ಸಾಧ್ಯವಿದೆಯೇ ? ಎಂಬುದನ್ನು ಪತ್ತೆ ಹಚ್ಚಲಿಕ್ಕಾಗಿಯೇ ಇತ್ತು. ಇದರಲ್ಲಿ ಈ ‘ಸ್ವಿಫ್ಟ್ಮಾಡೆಲ್’ (ವೇಗವಾನ ಪ್ರತಿಕೃತಿ) ಯಶಸ್ವಿಯಾಗಿದೆ. ಇದರ ಜೊತೆಗೆ ಅದರ ‘ಸ್ಟೆಲ್ಥ್’ ತಂತ್ರಜ್ಞಾನದ ಈ ಶೋಧನೆಯನ್ನು ಮಾಡಲಾಯಿತು. ಈ ಯಶಸ್ವಿ ಶೋಧನೆಯು ಭಾರತದ ಐದನೆ ಪೀಳಿಗೆಯಲ್ಲಿನ ಸ್ವಬಲದಿಂದ ನಿರ್ಮಾಣವಾಗುತ್ತಿದ್ದ “ಅಡ್ವಾನ್ಸ್ ಮಿಡಿಯಮ್ ಕಾಮ್ಬೆಕ್ಟ್ ಏರ್‌ಕ್ರಾಫ್ಟ್ (ಎ.ಎಮ್.ಸಿ.ಎ.-ಪ್ರಗತಿಶೀಲ ಮಧ್ಯಮ ಪದ್ಧತಿಯ ಯುದ್ಧ ವಿಮಾನ)”ಗಾಗಿ ಒಂದು ಮೈಲುಗಲ್ಲಾಗಿದೆ.
೪ ‘ಘಾತಕ’ ಯುದ್ಧ ವಿಮಾನದ ಕ್ಷಮತೆ ಹಾಗೂ ಭೇದಕತೆ
ಈ ಯಶಸ್ವೀ ಶೋಧನೆಯ ನಂತರ ಮೊದಲ ‘ಘಾತಕ’ ಎಂಬಜೆಟ್ ವಿಮಾನವು ೨೦೨೫ ರ ವರೆಗೆ ಹಾರಾಟಕ್ಕೆ ಸಿದ್ಧವಾಗುವುದು. ಘಾತಕ ತನ್ನ ಜೊತೆಯಲ್ಲಿ ೨ ಸಾವಿರ ಕಿಲೊ ಭಾರದ ಕ್ಷಿಪಣಿ, ‘ಲೇಸರ ಗೈಡೆಡ್ ಬಾಂಬ್’, ‘ಪ್ರಿಸಿಜನ್ ಗೈಡೆಡ್ ಬಾಂಬ್’ ಹಾಗೂ ಮಿಸೈಲ್ (ಬಾಲಾಕೋಟ ನಂತರದ ಆಕ್ರಮಣದಲ್ಲಿ ಉಪಯೋಗಿಸಿದ ‘ಸಫೈಸ್’ ಅಥವಾ ‘ರಾಫೆಲ್’ ಯುದ್ಧ ವಿಮಾನಸಹಿತ ಖರೀದಿಸಿದ ‘ಹ್ಯಾಮೆರ್’ನಂತಹ ಕ್ಷಿಪಣಿ) ಇತ್ಯಾದಿಗಳೊಂದಿಗೆ ಹೋಗಲು ಸಾಧ್ಯವಿದೆ. ೩೦ ಸಾವಿರ ಅಡಿಗಳಷ್ಟು ಮೇಲೆ ಗಾಳಿಯಲ್ಲಿ ಹೋಗುವ ಹಾಗೂ ಸುಮಾರು ೧.೨ ಮ್ಯಕ್ (೧ ಸಾವಿರದ ೫೦೦ ಕಿಲೋ ಮೀಟರ್ / ಪ್ರತಿಗಂಟೆ) ವೇಗದಲ್ಲಿ ಹೋಗುವ ಕ್ಷಮತೆ ಇರುವುದು. ‘ಘಾತಕ’ ಈ ಸುಪರ್‌ಸಾನಿಕ್ ವೇಗದಿಂದ (ಧ್ವನಿವೇಗಾತೀತ) ಪ್ರವಾಸಮಾಡುವ ಜಗತ್ತಿನ ಮೊದಲ ‘ಸ್ಟೆಲ್ಥ್ ಯೂಕ್ಯವ್’ ಆಗಿರುವುದು. ಅದರಿಂದ ೩೦೦ ಕಿಲೋಮೀಟರ್‌ನ ವರೆಗೆ ಗುರಿಯಿಡಲು ಸಾಧ್ಯವಿದೆ. ಇದರ ಬಹುಮುಖ್ಯ ಉಪಯೋಗವೆಂದರೆ, ಸ್ಟೆಲ್ಥ್ ಇರುವುದರಿಂದ ರಡಾರ್ ವ್ಯವಸ್ಥೆಯು ಸುರಕ್ಷಿತವಾಗಿರುವ ಶತ್ರುವಿನ ಯಾವುದೇ ಸೇನಾನೆಲೆಯ ಸುರಕ್ಷಾವ್ಯವಸ್ಥೆಯನ್ನು ಭೇದಿಸಿ ಅಥವಾ ಅದಕ್ಕೆ ಸುಳಿವು ಸಿಗದಂತೆ ಕ್ಷಿಪಣಿಯನ್ನು ಹಾರಿಸಲು ಸಕ್ಷಮವಾಗಿರುವುದು. ಅದರಿಂದ ಸೇನಾನೆಲೆ ಸಂಪೂರ್ಣ ಧ್ವಂಸವಾಗಬಹುದು. ಅದೇ ರೀತಿ ‘ಘಾತಕ’ವನ್ನು ಸಂಪೂರ್ಣ ಉಪಗ್ರಹ ವ್ಯವಸ್ಥೆಯೊಂದಿಗೆ ಇದನ್ನು ಜೋಡಿಸಲಾಗುತ್ತದೆ. ಅದರಿಂದ ಅದರ ಮಾರ್ಗದ ಎಲ್ಲ ವ್ಯವಸ್ಥೆಯನ್ನು ಭೂಮಿಯಿಂದಲ್ಲ, ಭಾರತದ ಆಕಾಶದಲ್ಲಿರುವ ಉಪಗ್ರಹಗಳಿಂದ ನಿಯಂತ್ರಿಸಲು ಸಕ್ಷಮವಾಗಿದೆ. (ಅಮೇರಿಕಾ ಇಂತಹ ಪದ್ದತಿಯಲ್ಲಿ ಸಿದ್ದಪಡಿಸಿದ ‘ಸ್ಟೆಲ್ಥ್ ಯೂಕ್ಯವ್’ನನ್ನು ನಿಯಂತ್ರಿಸಲು ಸಕ್ಷಮವಾಗಿದೆ. ಭಾರತವು ಸ್ವಬಲದಿಂದ ಈ ತಂತ್ರಜ್ಞಾನವನ್ನು ವಿಕಸಿತಗೊಳಿಸುತ್ತಿದೆಯೆಂದು ಅನೇಕ ರಕ್ಷಣಾ ತಜ್ಞರ ಹೇಳಿಕೆಯಾಗಿದೆ.)
೫. ಭಾರತದ ಯುದ್ಧವನ್ನುಬದಲಾಯಿಸುವ ಯುದ್ಧನೀತಿಯ ಒಂದು ನಡೆ
‘ಘಾತಕ’ವು ಹೆಸರಿಗನುಸಾರವೆ ಶತ್ರುವಿಗಾಗಿ ಘಾತಕವಾಗಿರುವ ತಂತ್ರಜ್ಞಾನವಾಗಿದೆ. ಈ ಮೂಲಕ ಭಾರತ ಆತ್ಮನಿರ್ಭರತೆಯ ದಿಕ್ಕಿನಲ್ಲಿ ತುಂಬಾ ಎತ್ತರಕ್ಕೇರಿದೆ. ಜುಲೈ ೧ ರಂದು ಆಗಿರುವ ಪರೀಕ್ಷಣೆಯು ಕೇವಲ ಒಂದು ಮಾನರಹಿತ ಜೆಟ್ ವಿಮಾನದ ಪರೀಕ್ಷಣೆಯಾಗಿರಲಿಲ್ಲ, ಅದು ಯುದ್ಧವನ್ನು ಬದಲಾವಣೆ ಮಾಡುವ ಭಾರತದ ಯುದ್ಧನೀತಿಯ ಒಂದು ನಡೆಯಾಗಿತ್ತು. ಈ ನಡೆಯಿಂದ ಭಾರತವು ಜಗತ್ತಿನ ತುಲನೆಯಲ್ಲಿ ಎಲ್ಲಿಯೂ ಹಿಂದೆ ಉಳಿದಿಲ್ಲ ಹಾಗೂ ಸ್ವಬಲದಲ್ಲಿ ಇಂತಹ ಕಠಿಣ ತಂತ್ರಜ್ಞಾನವನ್ನು ನಿರ್ಮಾಣ ಮಾಡುವುದರಲ್ಲಿ ಸಕ್ಷಮವಿದೆಯೆಂಬುದು ಸಿದ್ಧವಾಗಿದೆ.
– ಶ್ರೀ. ವಿನೀತ ವರ್ತಕ, ನ್ಯಾಯವಾದಿಗಳು, ಮುಂಬಯಿ.
(ಆಧಾರ : ವಿನೀತ ವರ್ತಕ ಇವರ ‘ಬ್ಲಾಗ್‌ಸ್ಪಾಟ್’)