ಆಗಸ್ಟ್ ೧೧ ರ ಬೆಳಿಗ್ಗೆ ೧೦.೩೯ ರಿಂದ ಶ್ರಾವಣ ಹುಣ್ಣಿಮೆ ಆರಂಭವಾಗುತ್ತದೆ. ಬೆಳಗ್ಗೆ ೧೦.೩೯ ರಿಂದ ರಾತ್ರಿ ೮.೫೧ ರ ವರೆಗೆ ಭದ್ರಾ ಕರಣ ಇದೆ. ಶುಭ ಕಾರ್ಯಕ್ಕಾಗಿ ಭದ್ರಾ ಅಶುಭವೆಂದು ತಿಳಿಯಲಾಗುತ್ತದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ರಕ್ಷಾ ಬಂಧನ ಯಾವ ಸಮಯಕ್ಕೆ ಮಾಡಬೇಕು? ಇದನ್ನು ಇಲ್ಲಿ ಕೊಡುತ್ತಿದ್ದೇವೆನೆ.
೧. ನಿರ್ಣಯಸಿಂಧು ಈ ಗ್ರಂಥದಲ್ಲಿ ಹೇಳಿರುವ ಪ್ರಕಾರ ‘ಭದ್ರಾ ಕರಣ ಇರುವಾಗ ರಕ್ಷಾಬಂಧನ ಮಾಡಬಾರದು. ಹಗಲು ಭದ್ರಾ ಕರಣ ಇದ್ದರೆ ಹಾಗೂ ಭದ್ರಾ ಕರಣ ಮುಗಿದ ಮೇಲೆ ರಾತ್ರಿ ಅದನ್ನು ಮಾಡಬೇಕು’ ಎಂದು ಹೇಳಲಾಗಿದೆ. ಈ ರಕ್ಷಾಬಂಧನ ಪ್ರತಿಪದಯುಕ್ತ ಹುಣ್ಣಿಮೆ ತಿಥಿಗೆ ಮಾಡಬಾರದು.
೨. ‘ಧರ್ಮಸಿಂಧು’ ಈ ಗ್ರಂಥದಲ್ಲಿ ಹೇಳಿರುವಂತೆ ‘ಶ್ರಾವಣ ಹುಣ್ಣಿಮೆಯ ದಿನ ಅಪರಾಹ್ನ ಅಥವಾ ಪ್ರದೋಷಕಾಲದಲ್ಲಿ ರಕ್ಷಾಬಂಧನ ಮಾಡಬೇಕು. ಆದರೆ ಆ ಸಮಯದಲ್ಲಿ ಭದ್ರಾ ಕರಣ ವರ್ಜ್ಯ ಮಾಡಬೇಕು’.
ಅಪರಾಹ್ನಕಾಲದಲ್ಲಿ ಭದ್ರಾ ಕರಣ ಇರುವುದರಿಂದ ಪ್ರದೋಷ ಕಾಲದಲ್ಲಿ ಭದ್ರಾ ಕರಣ ಮುಗಿದ ನಂತರ ಅಂದರೆ ರಾತ್ರಿ ೮.೫೧ ರಿಂದ ೯.೫೬ ಈ ಅವಧಿಯಲ್ಲಿ ರಕ್ಷಾಬಂಧನಕ್ಕಾಗಿ ಸರ್ವೋತ್ತಮ ಕಾಲವಾಗಿದೆ. (ಕೆಲವರ ಅಭಿಪ್ರಾಯದ ಪ್ರಕಾರ ಪ್ರದೋಷಕಾಲ ಇದು ಸೂರ್ಯಾಸ್ತದ ನಂತರ ಕೇವಲ ೯೦ ನಿಮಿಷಗಳಷ್ಟೇ’ ಆಗಿರುತ್ತದೆ. ಆದರೆ ಈ ಸ್ಥಳಗಳಲ್ಲಿ ‘ಪ್ರದೋಷಕಾಲ ಇದು ರಾತ್ರಿಪ್ರಮಾಣದ ೪ ರ ಒಂದಂಶ ಭಾಗವೆಂದು ತಿಳಿಯಲಾಗಿದೆ.)
ಮೇಲಿನ ಸಮಯದಲ್ಲಿ ರಕ್ಷಾಬಂಧನ ಸಾಧ್ಯವಾಗದಿದ್ದರೆ ಮುಂದಿನ ರೀತಿ ಪರ್ಯಾಯ ಅನುಸರಿಸಬಹುದು !
ಅ. ರಕ್ಷಾ ಬಂಧನದ ಸಂದರ್ಭದಲ್ಲಿನ ಎರಡನೆಯ ಪರ್ಯಾಯ : ‘ಜ್ಯೋತಿರ್ಮುಯೂಖ’ ಈ ಗ್ರಂಥದಲ್ಲಿ ಹೇಳಿರುವ ಪ್ರಕಾರ ಭದ್ರಾ ಕರಣದ ಪುಚ್ಛ ಕಾಲ ಎಲ್ಲಾ ಕಾರ್ಯಗಳಿಗೆ ಶುಭ ಎಂದು ಹೇಳಲಾಗಿದೆ. ಅದಕ್ಕನುಸಾರ ಸಾಯಂಕಾಲ ೫.೧೭ ರಿಂದ ೬.೧೯ ರ ವರೆಗೆ ರಕ್ಷಾ ಬಂಧನ ಮಾಡಬಹುದು.
ಆ. ಮೂರನೆಯ ಪರ್ಯಾಯ : ‘ಜ್ಯೋತಿರ್ಮುಯೂಖ’ ಈ ಗ್ರಂಥದಲ್ಲಿ ಹೇಳಿರುವ ಪ್ರಕಾರ ಭದ್ರಾ ಕರಣದ ಮುಖದ ಕಾಲ (ಸುಮಾರು ಸಾಯಂಕಾಲ ೬ ರಿಂದ ರಾತ್ರಿ ೮.೧೫) ವರ್ಜ್ಯ ಮಾಡಿ ಬೆಳಿಗ್ಗೆ ೧೦.೩೯ ರಿಂದ ಹಗಲಿಡಿ ಯಾವುದೇ ಸಮಯಕ್ಕೂ ರಕ್ಷಾಬಂಧನ ಮಾಡಬಹುದು.
ಇ. ನಾಲ್ಕನೆಯ ಪರ್ಯಾಯ : ‘ಜ್ಯೋತಿರ್ಮುಯೂಖ’, ಈ ಗ್ರಂಥದಲ್ಲಿ ಹೇಳಿರುವ ಪ್ರಕಾರ ಚಂದ್ರ ಮಕರ ರಾಶಿಯಲ್ಲಿ ಇದ್ದರೆ ಭದ್ರಾ ಕರಣದ ಸ್ಥಾನ ಪಾತಾಳದಲ್ಲಿರುವುದರಿಂದ ಅದರ ಪೃಥ್ವಿಯ ಮೇಲಿನ ಕಾರ್ಯಕ್ಕೆ ದೋಷ ಇರುವುದಿಲ್ಲ. ಆದ್ದರಿಂದ ಹುಣ್ಣಿಮೆ ಇರುವಾಗ ಯಾವಾಗ ಬೇಕಿದ್ದರೂ ರಕ್ಷಾ ಬಂಧನ ಮಾಡಿದರೂ ನಡೆಯುತ್ತದೆ.
(ಟಿಪ್ಪಣಿ : ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಸೇರಿ ಪಂಚಾಂಗ ಸಿದ್ದವಾಗುತ್ತದೆ. ಅದರಲ್ಲಿ ಭದ್ರ ಈ ಕರಣ ಅಶುಭ ಎಂದು ತಿಳಿಯಲಾಗಿದೆ. ಭದ್ರಾಗೆ ‘ವಿಷ್ಟಿ’ ಹಾಗೂ ‘ಕಲ್ಯಾಣಿ’ ಈ ಹೆಸರಿನಿಂದ ಸಂಬೋಧಿಸಲಾಗುತ್ತದೆ.)
– ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ. (೯.೮.೨೦೨೨)