ಆಗಸ್ಟ್ ೧೫ ರಂದು ಇರುವ ‘ಸ್ವಾತಂತ್ರ್ಯದ ಅಮೃತಮಹೋತ್ಸವ ದಿನ’ದ ನಿಮಿತ್ತ…
ಸ್ವಾತಂತ್ರ್ಯದ ಮೊದಲೆ ಪ್ರತಿಯೊಬ್ಬ ಭಾರತೀಯನಿಗೆ ಅಭಿಮಾನವೆನಿಸುವಂತಹ ಒಂದು ಘಟನೆ ೧೫ ಅಗಸ್ಟ್ ೧೯೩೬ ರಂದು ಘಟಿಸಿತು. ‘ಹಾಕಿ ಮಾಂತ್ರಿಕ’ ಎಂಬ ಬಿರುದು ಪಡೆದಿರುವ ಹಾಕಿಪಟು ಮೇಜರ್ ಧ್ಯಾನಚಂದ್ ಇವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ಪ್ರಸ್ತಾಪವನ್ನು ನೇರವಾಗಿ ಧಿಕ್ಕರಿಸಿದ್ದರು. ಈ ವಿಷಯವನ್ನು ಭಾರತೀಯ ಹಾಕಿ ತಂಡದ ಮಾಜಿ ತರಬೇತುದಾರ ಸಯ್ಯದ ಅಲೀ ಸಿಬ್ತೆ ನಕವಿ ಇವರು ಹೇಳಿದರು.
ಬರ್ಲಿನ್ ಓಲಂಪಿಕ್‌ನಲ್ಲಿ ೧೫ ಆಗಸ್ಟ್ ೧೯೩೬ ರಂದು ಬರ್ಲಿನ್‌ನಲ್ಲಿಯೆ ಭಾರತ ಹಾಗೂ ಜರ್ಮನಿಯ ತಂಡದ ನಡುವೆ ಹಾಕಿಯ ಅಂತಿಮ ಸ್ಪರ್ಧೆ ನಡೆಯಲಿಕ್ಕಿತ್ತು. ಈ ಸ್ಪರ್ಧೆಯನ್ನು ನೋಡಲು ಮೈದಾನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು; ಆದರೆ ಮೈದಾನದಲ್ಲಿ ಒಂದು ಒತ್ತಡವೂ ಇತ್ತು; ಏಕೆಂದರೆ ಈ ಸ್ಪರ್ಧೆಯನ್ನು ನೋಡಲು ಸ್ವತಃ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಬರಲಿಕ್ಕಿದ್ದ. ಭಾರತೀಯ ತಂಡವು ಫ್ರಾನ್ಸ್ಅನ್ನು ಸೋಲಿಸಿ ಅಂತಿಮ ಸ್ಪರ್ಧೆಗೆ ತಲಪಿತ್ತು. ಫ್ರಾನ್ಸ್ ನ ಸ್ಪರ್ಧೆಯಲ್ಲಿ ತನ್ನ ಪ್ರಭಾವವನ್ನು ಚೆನ್ನಾಗಿ ತೋರಿಸಿದ ಮೇಜರ್ ಧ್ಯಾನಚಂದ್ ಇವರು ಜರ್ಮನಿಯ ವಿರುದ್ಧದ ಅಂತಿಮ ಸ್ಪರ್ಧೆಯಲ್ಲಿಯೂ ತನ್ನ ಚಮತ್ಕಾರ ತೋರಿಸಿದರು. ಧ್ಯಾನಚಂದ್ ಇವರು ಜರ್ಮನಿಯ ವಿರುದ್ಧ ಆಡುವಾಗ ೬ ಗೋಲ್ ಮಾಡಿದ್ದರು. ಭಾರತ ಜರ್ಮನಿಯನ್ನು ೮ ರ ವಿರುದ್ಧ ೧ಈ ಕ್ರಮದಲ್ಲಿ ಸೋಲಿಸಿ ಸುವರ್ಣಪದಕ ಗಳಿಸಿತು. ಅನಂತರ ಏನು ಘಟಿಸಿತೋ ಅದು ಭಾರತಕ್ಕೆ ಸುವರ್ಣ ಪದಕಕ್ಕಿಂತಲೂ ಅಭಿಮಾನಾಸ್ಪದವಾಗಿತ್ತು. ಈ ಸ್ಪರ್ಧೆಯನ್ನು ನೋಡಲು ಬಂದಿದ್ದ ಹಿಟ್ಲರ್ ಧ್ಯಾನಚಂದ್ ಇವರ ಪ್ರಭಾವಕ್ಕೆ ಸಲ್ಯೂಟ್ ಹೊಡೆದರು. ಹಿಟ್ಲರ್ ಪುರಸ್ಕಾರವನ್ನು ಹಂಚುವ ಸಮಾರಂಭದಲ್ಲಿ ಮೇಜರ್ ಧ್ಯಾನಚಂದ್ ಇವರಿಗೆ ಜರ್ಮನಿಯ ಸೈನ್ಯದಲ್ಲಿ ಸೇರಿಕೊಳ್ಳುವ ಹಾಗೂ ಜರ್ಮನಿಯ ಪೌರತ್ವವನ್ನು ಸ್ವೀಕರಿಸುವ ಪ್ರಸ್ತಾಪ ಮಾಡಿದರು. ಅದಕ್ಕೆ ಧ್ಯಾನಚಂದ್ ಇವರು ‘ಭಾರತ ಮಾರಾಟಕ್ಕಾಗಿ ಇಲ್ಲ’, ಎಂದು ಹಿಟ್ಲರ್‌ಗೆ ಸ್ಪಷ್ಟವಾದ ಉತ್ತರವನ್ನು ನೀಡಿದರು. ಅನಂತರ ಮೈದಾನವು ಸ್ವಲ್ಪ ಹೊತ್ತಿನ ತನಕ ನಿಃಶಬ್ದವಾಗಿತ್ತು.
ಮೇಜರ್ ಧ್ಯಾನಚಂದ್ ಯಾರು ?
ಧ್ಯಾನಚಂದ್ ಇವರು ಅಲಹಾಬಾದ್ (ಈಗಿನ ಪ್ರಯಾಗರಾಜ)ನಲ್ಲಿ ೧೯ ಆಗಸ್ಟ್ ೧೯೦೫ ರಂದು ರಜಪೂತ ಮನೆತನದಲ್ಲಿ ಜನಿಸಿದರು. ವಾಸ್ತವದಲ್ಲಿಯೂ ಸೈನ್ಯದಲ್ಲಿ ಭರ್ತಿಯಾದ ನಂತರ ಧ್ಯಾನಚಂದ್ ಇವರು ಹಾಕಿ ಆಡಲು ಪ್ರಾರಂಭಿಸಿದರು. ಅದಕ್ಕೂ ಮೊದಲು ಅವರಿಗೆ ಹಾಕಿಯ ಅನುಭವ ಇರಲಿಲ್ಲ. ಅನಂತರ ಧ್ಯಾನಚಂದ್ ಇವರ ಸಹೋದರ ರೂಪಸಿಂಗ್ ಇವರು ಕೂಡ ಧ್ಯಾನಚಂದ್ ಇವರ ಹೆಜ್ಜೆಯ ಮೇಲೆಯೆ ಹೆಜ್ಜೆ ಇಡುತ್ತಾ ಹಾಕಿಯ ಬಗ್ಗೆ ಆಸಕ್ತಿಯನ್ನು ತೋರಿಸಿದರು. ಮೇಜರ್ ಧ್ಯಾನಚಂದ್ ಇವರ ನಿಜವಾದ ಹೆಸರು ಧ್ಯಾನ ಸಿಂಗ್’ ಆಗಿತ್ತು; ಆದರೆ ಯಾವಾಗಲೂ ರಾತ್ರಿ ಚಂದ್ರನ ಪ್ರಕಾಶದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ಕ್ರಮೇಣ ಅವರ ಸಮೀಪದ ಮಿತ್ರರು ಧ್ಯಾನಸಿಂಗ್ ಇವರ ಹೆಸರಿನ ಮುಂದೆ `ಚಂದ್’ ಎಂಬ ಶಬ್ದವನ್ನು ಜೋಡಿಸಿದರು. ಅಂದಿನಿAದ ಅವರು `ಧ್ಯಾನಚಂದ್’ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟರು.
(ಆಧಾರ : ದೈನಿಕ ‘ಲೋಕಸತ್ತಾ’ದ ಜಾಲತಾಣ)