ಮದಿನಾದ ಮಸೀದಿಯನ್ನು ಅಪವಿತ್ರಗೊಳಿಸಿದಕ್ಕೆ ಪಾಕಿಸ್ತಾನದ 6 ನಾಗರಿಕರಿಗೆ ಜೈಲು ಶಿಕ್ಷೆ

ರಿಯಾಧ (ಸೌದಿ ಅರೇಬಿಯಾ)– ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫ ಇವರ ಸೌದಿ ಅರೇಬಿಯಾದ ಪ್ರವಾಸದ ಸಮಯದಲ್ಲಿ ಮದೀನಾದ ‘ಮಸ್ಜಿದ-ಎ-ನಬಾವಿ’ ಮಸೀದಿಯನ್ನು ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಸೌದಿ ಅರೇಬಿಯಾ ಪಾಕಿಸ್ತಾನದ 6 ಮುಸಲ್ಮಾನ ನಾಗರಿಕರನ್ನು ದೋಷಿಗಳೆಂದು ನಿರ್ಧರಿಸಿದೆ. ಇವರಲ್ಲಿ ಮೂವರಿಗೆ 10 ವರ್ಷ ಮತ್ತು ಉಳಿದವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ 4 ಲಕ್ಷ 23 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಪ್ರಧಾನಮಂತ್ರಿ ಶರೀಫ ಈ ಮಸೀದಿಗೆ ಬಂದಾಗ ದೋಷಿಗಳು ಅವರನ್ನು ‘ಕಳ್ಳ ಕಳ್ಳ’ ಎಂದು ಹೀಯಳಿಸಿದ್ದಲದೇ ಹಾಗೆಯೇ ಶರೀಫರವರ ಪತ್ನಿಯ ವಿಷಯದಲ್ಲಿಯೂ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದರು. ಹಾಗೆಯೇ ಮಂತ್ರಿ ಶಾಹಜೈನ ಬುಗತಿ ಇವರ ಕೂದಲನ್ನು ಎಳೆದಿದ್ದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಯಾವಾಗಲಾದರೂ ಮಂದಿರಗಳನ್ನು ಅಪವಿತ್ರಗೊಳಿಸಿದರೆ ಈ ರೀತಿಯ ಶಿಕ್ಷೆಯಾಗುತ್ತದೆಯೇ?