ಭೋಪಾಲದ ಶಿವ ಮಂದಿರದ ಶಿವಲಿಂಗ ಧ್ವಂಸ !

(ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೇ ನಿಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ – ಸಂಪಾದಕರು)

ಭೋಪಾಲ್ (ಮಧ್ಯಪ್ರದೇಶ) : ಇಲ್ಲಿಯ ಚೋಲಾ ರಸ್ತೆ ಪ್ರದೇಶದಲ್ಲಿರುವ ಶಿವ ಮಂದಿರದ ಶಿವಲಿಂಗವನ್ನು ಧ್ವಂಸ ಮಾಡಿರುವ ಘಟನೆ ಘಟಿಸಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಿಸಿಟಿವಿಯ ಚಿತ್ರೀಕರಣದ ಸಹಾಯದಿಂದ ಆರೋಪಿಯನ್ನು ಗುರುತಿಸಿದ್ದಾರೆ. ಅವನನ್ನು ಬೇಗನೆ ಬಂಧಿಸಲಾಗುವುದೆಂದು ಅವರು ಹೇಳಿದ್ದಾರೆ. ಈ ಘಟನೆಯ ನಂತರ ಹಿಂದುತ್ವನಿಷ್ಠ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !