ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ವಿವಾದ : ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ ಶ್ರೀಕೃಷ್ಣನ ಚಿತ್ರ

ಸಾಮಾಜಿಕ ಜಾಲತಾಣಗಳಿಂದ ಪ್ರಚಂಡ ವಿರೋಧ

(ಸ್ಯಾನಿಟರಿ ಪ್ಯಾಡ್ ಅಂದರೆ ಮಹಿಳೆಯರ ಋತುಚಕ್ರದ ಸಮಯದಲ್ಲಿ ಉಪಯೋಗಿಸಲಾಗುವ ಒಂದು ರೀತಿಯ ಬಟ್ಟೆ)

(ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೇ ನಿಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ)

ಮುಂಬೈ – ಮುಂಬರುವ ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ಬಿಡುಗಡೆಗೊಂಡಿದ್ದು ಭಾರಿ ವಿವಾದಕ್ಕೆ ಒಳಗಾಗಿದೆ. ಪೋಸ್ಟರ್.ನಲ್ಲಿ ‘ಸ್ಯಾನಿಟರಿ ಪ್ಯಾಡ್’ ತೋರಿಸಲಾಗಿದ್ದು, ಅದರ ಮೇಲೆ ಚಲನಚಿತ್ರದ ನಟರ ಜೊತೆಗೆ ಭಗವಾನ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ತೀವ್ರವಾದ ವಿರೋಧ ಎದುರಾಗುತ್ತಿದೆ. ಯಾರದೇ ಭಾವನೆಗಳನ್ನು ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಚಲನಚಿತ್ರದ ನಿರ್ದೇಶಕ ಮತ್ತು ನಾಯಕರು ಸ್ಪಷ್ಟೀಕರಣ ನೀಡಿದ್ದಾರೆ.

೧. ಚಲನಚಿತ್ರದ ನಾಯಕಿ ಏಕಾವಲಿ ಖನ್ನಾ ‘ನನಗೆ ಇದರ ಬಗ್ಗೆ ಏನು ತಿಳಿದಿಲ್ಲ’ ಎಂದು ಹೇಳಿದರು. ‘ಆದರೆ ಹೀಗೆ ಆಗಿದ್ದರೂ, ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ನಿರ್ಮಾಪಕರದ್ದಾಗಿರಲಿಕ್ಕಿಲ್ಲ. ಚಲನಚಿತ್ರದ ಉದ್ದೇಶ ಕೇವಲ ಸಮಾಜದ ತಪ್ಪು ಧೋರಣೆಯನ್ನು ದೂರಗೊಳಿಸುವುದು. ಯಾವ ಮೂಢನಂಬಿಕೆಗಳನ್ನು ಮಹಿಳೆಯರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆಯೋ, ಅವುಗಳಿಗೆ ಇಂದಿನ ಪೀಳಿಗೆಯಲ್ಲಿ ಸ್ಥಾನವಿಲ್ಲ’.

೨. ಸಂಪೂರ್ಣ ಚಲನಚಿತ್ರ ಮಹಿಳೆಯರ ಋತುಚಕ್ರದ ಸಂದರ್ಭದಲ್ಲಾಗಿರುವುದರಿಂದ ನಾವು ಸ್ಯಾನಿಟರಿ ಪ್ಯಾಡ್ ತೋರಿಸಿದ್ದೇವೆ ಎಂದು ಚಲನಚಿತ್ರದ ನಿರ್ದೇಶಕ ಸಂತೋಷ್ ಉಪಾಧ್ಯಾಯ ಇವರು ಹೇಳಿದರು. ಪ್ರತ್ಯಕ್ಷವಾಗಿ ಪ್ಯಾಡ್ ಮೇಲೆ ಭಗವಾನ ಶ್ರೀಕೃಷ್ಣನ ಚಿತ್ರ ಇಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಷ್ಟು ಕೆಳಮಟ್ಟಕ್ಕೆ ಇಳಿದು ಹಿಂದೂ ದೇವತೆಗಳನ್ನು ಅವಮಾನಿಸಲಾಗುತ್ತಿದ್ದರೂ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ, ಅವರಿಗೆ ಕಠಿಣ ಶಿಕ್ಷೆ ನೀಡುವುದಕ್ಕೆ ಕಠಿಣ ಕಾನೂನು ಜಾರಿಯಾಗುತ್ತಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡು !