ದೇವರ ದರ್ಶನಕ್ಕಾಗಿ ಭಕ್ತರಿಂದ ಹಣ ಪಡೆದು ೧೦ ಲಕ್ಷ ರೂಪಾಯಿ ಗಳಿಸಿದ ತ್ರ್ಯಂಬಕೇಶ್ವರ ದೇವಸ್ಥಾನ

ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರ ದೇವಸ್ಥಾನದಿಂದ ಭಕ್ತರ ಲೂಟಿ

ನಾಶಿಕ – ಜೈ ಭೋಲೆನಾಥ ಎಂಬ ಘೋಷದೊಂದಿಗೆ ೧ ಲಕ್ಷಕ್ಕಿಂತ ಹೆಚ್ಚು ಭಕ್ತರು ಆಗಸ್ಟ್ ೧ ರಂದು ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರನ ದರ್ಶನ ಪಡೆದರು. ಮುಂಜಾನೆ ನಾಲ್ಕು ಗಂಟೆಯಿಂದ ಭಕ್ತರು ಸಾಲಿನಲ್ಲಿ ನಿಂತಿದ್ದರು. ತ್ರ್ಯಂಬಕೇಶ್ವರ ದೇವಸ್ಥಾನವು ಹಣ ನೀಡುವ ಭಕ್ತರಿಗೆ ೨:೩೦ ಗಂಟೆಗಳಲ್ಲಿ ದೇವರ ದರ್ಶನ ಹಾಗೂ ಧರ್ಮದರ್ಶನಕ್ಕಾಗಿ ಬಂದಿರುವ ಭಕ್ತರಿಗೆ ೬ ಗಂಟೆಗಿಂತ ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲಿಸಿತ್ತು. ದೇವಸ್ಥಾನವು ಪ್ರತಿಯೊಬ್ಬ ವ್ಯಕ್ತಿಗೆ ೨೦೦ ರೂಪಾಯಿ ಶುಲ್ಕ ವಿಧಿಸಿ ದರ್ಶನ ಕಲ್ಪಿಸಿತು. ಸಂಜೆಯವರೆಗೆ ೫ ಸಾವಿರಕ್ಕೂ ಹೆಚ್ಚಿನ ಭಕ್ತರು ಇದರ ಲಾಭ ಪಡೆದರು. ಆದ್ದರಿಂದ ೧೦ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಉತ್ಪನ್ನ ದೇವಸ್ಥಾನಕ್ಕೆ ಸಿಕ್ಕಿದೆ.

ಭಕ್ತರ ಜನಸಂದಣಿ ನೋಡಿ ೩ ಸಾರಿ ‘ಹಣ ಪಡೆದು ದರ್ಶನ’ ನಿಲ್ಲಿಸಬೇಕಾಯಿತು. ಕೊರೊನಾ ಮಹಾಮಾರಿಯ ಕಾಲಾವಧಿಯ ನಂತರ ಬಂದಿರುವ ಇದು ಮೊದಲನೆಯ ಶ್ರಾವಣ ಸೋಮವಾರ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ವಾಹನ ನಿಲುಗಡೆಗಾಗಿ ವಾಹನ ನಿಲ್ದಾಣ ನಗರದಿಂದ ಹೊರಗೆ ಹೋಗಿರುವುದರಿಂದ ಭಕ್ತರಿಗೆ ತೊಂದರೆಯೂ ಆಯಿತು.

ಸಂಪಾದಕೀಯ ನಿಲುವು

  • ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ ! ಈ ಸ್ಥಿತಿ ಬದಲಾಗಲು ಹಿಂದೂ ರಾಷ್ಟ್ರವೇ ಬೇಕು !
  • ಹಣ ಪಡೆದು ಭಕ್ತರಿಗೆ ದರ್ಶನ ಪಡೆಯಲು ನೀಡುವ ಪದ್ಧತಿ ಅಶಾಸ್ತ್ರೀಯವಾಗಿದೆ. ದರ್ಶನಕ್ಕಾಗಿ ಶುಲ್ಕ ಪಡೆಯುವ ದೇವಸ್ಥಾನಗಳು ಇವು ಏನು ಮನೋರಂಜನೆಯ ಸ್ಥಳವಲ್ಲ ! ಸರಕಾರೀಕರಣ ಆಗಿರುವ ದೇವಸ್ಥಾನಗಳನ್ನು ಸರಕಾರ ಹಣಗಳಿಸುವ ಮಾಧ್ಯಮಗಳೆಂದು ನೋಡುವುದರಿಂದ ಈ ದುಃಸ್ಥಿತಿ ಬಂದಿದೆ .