ಸಾಧಕರು ಮತ್ತು ಸಂತರು ಶ್ರೀಗುರುಗಳಿಗೆ ಅರ್ಪಿಸಿದ ರಾಖಿಗಳಲ್ಲಿ ಬಹಳಷ್ಟು ಸಕಾರಾತ್ಮಕ ಸ್ಪಂದನಗಳಿರುವುದು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯುನಿರ್ವಸಲ್ ಔರಾ ಸ್ಕ್ಯಾನರ್ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

ಪೂ. (ಸೌ.) ಲಕ್ಷ್ಮೀ ನಾಯಿಕ
ಪ್ರಾ. ಸುಹಾಸ ಜಗತಾಪ

‘೨೦೧೯ ನೇ ಇಸವಿಯಲ್ಲಿನ ರಾಖಿ ಹುಣ್ಣಿಮೆಯಂದು ಸನಾತನದ ಇಬ್ಬರು ಸಾಧಕಿಯರು ಮತ್ತು ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ ಇವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ರಾಖಿಗಳನ್ನು ಅರ್ಪಿಸಿದರು. ಈ ರಾಖಿಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು ಅವುಗಳ ಸೂಕ್ಷ್ಮದಲ್ಲಿನ ಸ್ಪಂದನಗಳಿಂದ ಗಮನಕ್ಕೆ ಬಂದಿತು. ಈ ರಾಖಿಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಅಧ್ಯಯನಕ್ಕಾಗಿ ೧೬.೮.೨೦೧೯ ಈ ದಿನದಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ. ೪ ಅಗಸ್ಟ್ ೨೦೨೨ ರಂದು ‘ರಕ್ಷಾಬಂಧನ ಹಬ್ಬವಿದೆ ಈ ನಿಮಿತ್ತ ಈ ಲೇಖನವನ್ನು ನೀಡುತ್ತಿದ್ದೇವೆ.

ಕು. ಕರುಣಾ ಮುಳೆ
ಕು. ಕಲ್ಯಾಣಿಸ್ವರೂಪಾ ಮುಳೆ

೧. ಪರೀಕ್ಷಣೆಯಲ್ಲಿನ ರಾಖಿಗಳ ಮಾಹಿತಿ

ಅ. ರಾಖಿ ಕ್ರ. ೧ : ಇದು ಸನಾತನ – ನಿರ್ಮಿತ ಗಾಢ ಗುಲಾಬಿ ಬಣ್ಣದ ಸಾತ್ತ್ವಿಕ ರಾಖಿಯಾಗಿದೆ. ಸನಾತನದ ಸಾಧಕಿ ಕು. ಕರುಣಾ ಮುಳೆ ಇವಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ರಾಖಿಯನ್ನು ಅರ್ಪಿಸಿದಳು.

ಆ. ರಾಖಿ ಕ್ರ. ೨ : ಕು. ಕರುಣಾಳ ಕಿರಿಯ ಸಹೋದರಿ ಮತ್ತು ಸನಾತನದ ಸಾಧಕಿ ಕು. ಕಲ್ಯಾಣಿ ಸ್ವರೂಪಾ ಮುಳೆ ಇವಳು ತನ್ನ ಕೈಯಿಂದ ತಯಾರಿಸಿದ ರಾಖಿಯಾಗಿದೆ. ಅವಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ರಾಖಿಯನ್ನು ಅರ್ಪಿಸಿದಳು.

ಇ. ರಾಖಿ ಕ್ರ. ೩ : ಇದು ಸನಾತನ-ನಿರ್ಮಿತ ಹಳದಿ ಬಣ್ಣದ ಸಾತ್ತ್ವಿಕ ರಾಖಿಯಾಗಿದೆ. ಸನಾತನದ ಸಂತರಾದ ಪೂ. (ಸೌ.) ಲಕ್ಷ್ಮೀ ನಾಯಿಕ ಇವರು ಈ ರಾಖಿಯನ್ನು ಪರಾತ್ಪರ ಗುರು ಡಾ. ಆಠವಲೆಯವರ ಕೈಗೆ ಕಟ್ಟಿದರು.

ಪೂ. (ಸೌ.) ಲಕ್ಷ್ಮೀ ನಾಯಿಕ ಇವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ರಾಖಿಯನ್ನು ಕಟ್ಟುವಾಗ

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

೨ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ ನಿರೀಕ್ಷಣೆಗಳ ವಿವೇಚನೆ – ಪರೀಕ್ಷಣೆಯಲ್ಲಿನ ಮೂರೂ ರಾಖಿಗಳಲ್ಲಿ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು : ಪರೀಕ್ಷಣೆಯಲ್ಲಿನ ಮೂರೂ ರಾಖಿಗಳಲ್ಲಿ ನಕಾರಾತ್ಮಕ ಊರ್ಜೆಯು ಕಾಣಿಸಲಿಲ್ಲ. ಮೂರೂ ರಾಖಿಗಳಲ್ಲಿ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇದೆ.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಸನಾತನದ ಇಬ್ಬರೂ ಸಾಧಕಿಯರು ಶ್ರೀಗುರುಗಳಿಗೆ ಅರ್ಪಿಸಿದ ರಾಖಿಗಳಲ್ಲಿ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕರುಣಾ ಮುಳೆ (ವಯಸ್ಸು ೧೬ ವರ್ಷ) ಮತ್ತು ಕಲ್ಯಾಣಸ್ವರೂಪಾ ಮುಳೆ (ವಯಸ್ಸು ೧೦ ವರ್ಷ) ಈ ಇಬ್ಬರೂ ಸಹೋದರಿಯರು ಚಿಕ್ಕ ವಯಸ್ಸಿನಲ್ಲಿಯೇ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಲು ಆರಂಭಿಸಿದರು. ಅವರು ಚಿಕ್ಕಂದಿನಿಂದಲೇ ರಕ್ಷಾಬಂಧನದ ದಿನದಂದು ಭಗವಾನ ಶ್ರೀಕೃಷ್ಣನಿಗೆ (ಶ್ರೀಕೃಷ್ಣನ ಚಿತ್ರಕ್ಕೆ) ರಾಖಿಯನ್ನು ಅರ್ಪಿಸುತ್ತಿದ್ದರು. ಈ ಇಬ್ಬರೂ ಸಾಧಕಿಯರು ಕಳೆದ ೨ ವರ್ಷಗಳಿಂದ ತಾಯಿ-ತಂದೆಯರೊಂದಿಗೆ ರಾಮನಾಥಿ ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರ ಬಗ್ಗೆ ‘ಅವರು ಶ್ರೀಕೃಷ್ಣರಿದ್ದಾರೆ’, ಎಂಬ ಭಾವ ಅವರಲ್ಲಿದೆ. ‘ಸಾಧಕರಿಗೆ ಗುರುಗಳೇ ಸರ್ವಸ್ವವಾಗಿದ್ದಾರೆ’, ಎಂದು ತಿಳಿದು ಅವರಿಬ್ಬರೂ ರಾಖಿಹುಣ್ಣಿಮೆಯಂದು ಪರಾತ್ಪರ ಗುರು ಡಾ. ಆಠವಲೆಯವರಿಗೆ ರಾಖಿಯನ್ನು ಅರ್ಪಿಸಿದರು. ಅವರು ಶ್ರೀಗುರುಗಳಿಗೆ ಅರ್ಪಿಸಿದ ರಾಖಿಗಳಲ್ಲಿ ಅವರ ಭಾವಕ್ಕನುಸಾರ ಸ್ಪಂದನಗಳಿವೆ. ಈ ಎರಡೂ ರಾಖಿಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳಿರುವುದು, ಇದು ಅವರ ಶ್ರೀಗುರುಗಳ ಬಗ್ಗೆ ಇರುವ ಭಾವದ ಸುಂದರ ಉದಾಹರಣೆಯಾಗಿದೆ.

೩. ಆ. ಸನಾತನದ ಸಂತ ಪೂ. (ಸೌ.) ಲಕ್ಷ್ಮೀ ನಾಯಿಕ ಇವರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅನನ್ಯ ಭಾವವಿದೆ. ಅವರು ರಾಖಿಹುಣ್ಣಿಮೆಯಂದು ಪರಾತ್ಪರ ಗುರು ಡಾ. ಆಠವಲೆಯವರ ಕೈಗೆ ರಾಖಿಯನ್ನು ಕಟ್ಟಿದರು. ಅವರು ಶ್ರೀಗುರುಗಳಿಗೆ ಕಟ್ಟಿದ ರಾಖಿಯಲ್ಲಿ ಅವರಲ್ಲಿನ ಚೈತನ್ಯ ಮತ್ತು ಭಾವದ ಸ್ಪಂದನಗಳಿವೆ. ಈ ರಾಖಿಗೆ ಶ್ರೀಗುರುಗಳ ಚೈತನ್ಯಮಯ ಕೈಗಳ ಸ್ಪರ್ಶವಾಗಿದೆ. ಪೂ. (ಸೌ.) ಲಕ್ಷ್ಮೀ ನಾಯಿಕ ಇವರು ಪರಾತ್ಪರ ಗುರು ಡಾ. ಆಠವಲೆಯವರ ಕೈಗೆ ಕಟ್ಟಿದ ರಾಖಿಯಲ್ಲಿ (೧೪.೫೭ ಮೀಟರ್) ಅತ್ಯಧಿಕ ಸಕಾರಾತ್ಮಕ ಸ್ಪಂದನಗಳಿವೆ.

೩ ಇ. ಸನಾತನ ಇಬ್ಬರೂ ಸಾಧಕಿಯರು ಮತ್ತು ಪೂ. (ಸೌ.) ಲಕ್ಷ್ಮೀ ನಾಯಿಕ ಇವರ ಶ್ರೀಗುರುಗಳ ಬಗೆಗಿನ ಭಾವದಿಂದ ಅವರು ಅರ್ಪಿಸಿದ ರಾಖಿಗಳಲ್ಲಿ ಶ್ರೀಗುರುಗಳ (ಪರಾತ್ಪರ ಗುರು ಡಾಕ್ಟರರ) ಆಶೀರ್ವಾದಾತ್ಮಕ ಚೈತನ್ಯವು ಆಕರ್ಷಿತವಾಗಿ ಮೂರೂ ರಾಖಿಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಕಾಣಿಸಿದವು. ರಾಖಿ ಅರ್ಪಿಸುವಾಗ ಅಥವಾ ಕಟ್ಟುವಾಗ ರಾಖಿ ಸಾತ್ತ್ವಿಕ ಇರುವುದು ಹಾಗೂ ಅದನ್ನು ಅರ್ಪಿಸುವವರ ಭಾವವು ಅತ್ಯಂತ ಮಹತ್ವದ್ದಾಗಿದೆ, ಎಂದು ಇಲ್ಲಿ ಗಮನಕ್ಕೆ ಬರುತ್ತದೆ. ಸಾಧಕರಿಗೆ ಗುರುಗಳ ಬಗ್ಗೆ ಭಾವವಿರುವುದರಿಂದ ಅದರ ರಾಖಿಯಂತಹ ನಿರ್ಜಿವ ವಸ್ತುವಿನ ಮೇಲೆ ಇಷ್ಟು ಸಕಾರಾತ್ಮಕ ಪರಿಣಾಮ ವಾಗುತ್ತದೆ, ಎಂಬದೂ ಗಮನಕ್ಕೆ ಬರುತ್ತದೆ.

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ಮೇಲಿನ ಲೇಖನದಲ್ಲಿನ ಮಾಹಿತಿ ೧೧.೯.೨೦೨೦ ಕ್ಕನುಸಾರ ಇದೆ)

ವಿ-ಅಂಚೆ : mಚಿv.ಡಿeseಚಿಡಿಛಿh೨೦೧೪@gmಚಿiಟ.ಛಿom

ಪೂ. (ಸೌ.) ಪೂ. ಲಕ್ಷ್ಮೀ ನಾಯಿಕ ಇವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕಟ್ಟಿದ ರಾಖಿ
ಕು. ಕರುಣಾ ಮುಳೆ ಇವಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಅರ್ಪಿಸಿದ ರಾಖಿ

 

ಕು. ಕಲ್ಯಾಣಿ ಸ್ವರೂಪಾ ಮುಳೆ ಇವಳು ಸ್ವತಃ ತಯಾರಿಸಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅರ್ಪಿಸಿದ ರಾಖಿ