‘ಸೆಕ್ಯುಲರ್’ ಪದದ ಹೆಸರಿನಲ್ಲಿ ಶಿಕ್ಷಣದ ಇಸ್ಲಾಮೀಕರಣ ಆರಂಭ ! – ಡಾ. ನೀಲ ಮಾಧವ ದಾಸ

‘ಭಾರತದಲ್ಲಿ ಶಿಕ್ಷಣ ಜಿಹಾದ್ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ

ಹಿಂದೆ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ಕಿತ್ತೊಗೆಯಲು ಸ್ವಾತಂತ್ರ್ಯ ಪೂರ್ವದಲ್ಲಿಯೇ ಗಾಂಧಿಜಿಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ ಪ್ರಾರಂಭವಾಯಿತು. ಅಂದಿನಿಂದ ಶಾಲಾ ಪಠ್ಯಪುಸ್ತಕಗಳಲ್ಲಿ ಅಕ್ಬರ, ಟಿಪ್ಪು ಸುಲ್ತಾನ ಮುಂತಾದ ಮುಸ್ಲಿಂ ಆಕ್ರಮಣಕಾರರ ಪಾಠಗಳನ್ನು ಕಲಿಸಲು ಪ್ರಾರಂಭಿಸಲಾಯಿತು. ಇದು ಇಂದಿಗೂ ಮುಂದುವರೆದಿದೆ. ಒಟ್ಟಿನಲ್ಲಿ ‘ಸೆಕ್ಯುಲರ್’ ಪದದ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದ ಇಸ್ಲಾಮೀಕರಣ ನಡೆಯುತ್ತಿದೆ. ಈ ಶಿಕ್ಷಣವೇ ಜಿಹಾದ್ ಆಗಿದೆ. ಎಲ್ಲಿಯವರೆಗೆ ಭಾರತ ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರ ಆಗುವುದಿಲ್ಲವೋ, ಅಲ್ಲಿಯವರೆಗೆ ದೇಶದಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಇಸ್ಲಾಮೀಕರಣ ಮುಂದುವರಿಯುತ್ತದೆ, ಎಂದು ಜಾರ್ಖಂಡನ ‘ತರುಣ ಹಿಂದು’ನ ಸಂಸ್ಥಾಪಕ ಡಾ. ನೀಲ ಮಾಧವ ದಾಸ ಇವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಭಾರತದಲ್ಲಿ ಶಿಕ್ಷಣ ಜಿಹಾದ್?’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಜಾರ್ಖಂಡ್‌ನ ‘ಪಾಂಚಜನ್ಯ’ದ ಪತ್ರಕರ್ತ ಶ್ರೀ. ರಿತೇಶ ಕಶ್ಯಪ ಇವರು ಮಾತನಾಡುತ್ತಾ, ಜಾರ್ಖಂಡ್ ರಾಜ್ಯದಲ್ಲಿ ರಾಜಧಾನಿ ರಾಂಚಿ ಸೇರಿದಂತೆ, ದುಮಕಾ, ಜಾಮತಾಡಾ, ಗಢವಾ, ಪಲಾಮು, ಪಾಕುರ, ಬೊಕಾರೊ ಮೊದಲಾದ ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡುವುದು, ಹಿಂದಿ ಬದಲಾಗಿ ಉರ್ದು ಭಾಷೆಗೆ ಆದ್ಯತೆ ನೀಡುವುದು, ಈ ವಿಷಯಗಳು ಸಾಮಾಜಿಕ ಮಾಧ್ಯಮಗಳು ಮತ್ತು ಪ್ರಸಾರ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಇದನ್ನು ಮುಸ್ಲಿಮರು ಕಳೆದ ೧೦ ರಿಂದ ೨೫ ವರ್ಷಗಳಿಂದ ನೂರಾರು ಶಾಲೆಗಳಲ್ಲಿ ಯಾವುದೇ ಸರಕಾರಿ ಆದೇಶವಿಲ್ಲದೆ, ಕೇವಲ ಸಂಖ್ಯೆಗಳ ಆಧಾರದ ಮೇಲೆ ಮಾಡುತ್ತಿದ್ದಾರೆ. ಇದೆಲ್ಲವೂ ಮುಸಲ್ಮಾನರ ಓಲೈಕೆ ಮಾಡಲು ನಡೆಯುತ್ತಿದೆ. ಇದು ಜಾರ್ಖಂಡ್ ಸೇರಿದಂತೆ ಬಿಹಾರ ಮತ್ತು ಬಂಗಾಳದ ಹಲವಾರು ಶಾಲೆಗಳಲ್ಲಿ ಮುಂದುವರಿಯುತ್ತದೆ; ಆದರೆ ಈ ಬಗ್ಗೆ ವಾರ್ತೆ ಜನತೆಗಳ ವರೆಗೆ ತಲುಪಿಸಲೇ ಇಲ್ಲ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಮಾತನಾಡುತ್ತಾ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹೆಚ್ಚಿನ ಶಿಕ್ಷಣ ಸಚಿವರು ಮುಸ್ಲಿಮರು ಅಥವಾ ಮುಸ್ಲಿಮರನ್ನು ಬೆಂಬಲಿಸುವವರಿದ್ದರು. ಆದ್ದರಿಂದಲೇ ಶಿಕ್ಷಣದಲ್ಲಿ ತಪ್ಪು ವಿಷಯಗಳನ್ನು ಕಲಿಸಲಾಯಿತು. ಎನ್.ಸಿ.ಈ.ಆರ್.ಟಿ.ಯ ಪುಸ್ತಕಗಳಲ್ಲಿ ಆಕ್ರಮಣಕಾರಿ ಮೊಗಲರನ್ನು ವೈಭವೀಕರಿಸಲು ಎಷ್ಟೋ ಪುಟಗಳಷ್ಟು ಮೀಸಲಿಟ್ಟಿವೆ. ಎನ್.ಸಿ.ಈ.ಆರ್.ಟಿ.ಯ ೫ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ ‘ದಿ ಲಿಟಲ್ ಬುಲ್ಲಿ’ ಎಂಬ ಪಾಠದಲ್ಲಿ ‘ಹರಿ’ ಎಂಬ ವಿದ್ಯಾರ್ಥಿಯು ಹುಡುಗಿಯರನ್ನು ಚುಡಾಯಿಸುತ್ತಿರುವುದನ್ನು ತೋರಿಸಿದರೆ ‘ಅಬ್ದುಲ್’ ಎಂಬ ವಿದ್ಯಾರ್ಥಿ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ತೋರಿಸಲಾಗಿದೆ. ಇದರಿಂದ ಎಡಪಂಥೀಯರು ವ್ಯವಸ್ಥಿತವಾಗಿ ಹಿಂದೂ ಧರ್ಮದ ಬಗ್ಗೆ ದ್ವೇಷವನ್ನು ಹರಡುವ ಕೆಲಸ ಮಾಡಿದ್ದಾರೆ. ಬಾಲಭಾರತಿಯ ಪುಸ್ತಕದಲ್ಲಿಯೂ ಕೂಡ ‘ಅಫಜಲ್ ಖಾನ ವಧೆ’ಯ ಚಿತ್ರವಿಲ್ಲ; ಆದರೆ ‘ಈದ್ಗಾ’ದ ಪಾಠ ಹೇಳಲಾಗುತ್ತಿದೆ. ಗೋವಾದ ಒಂದು ಪಠ್ಯಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬರ್ದೇಶ್ ಪ್ರಾಂತ್ಯದ ಮೇಲೆ ಮೂರು ದಿನಗಳ ಕಾಲ ದಾಳಿ ಮಾಡಿ ಜನರಿಗೆ ಚಿತ್ರಹಿಂಸೆ ನೀಡಿದರು ಎಂದು ಸುಳ್ಳು ಇತಿಹಾಸವನ್ನು ಕಲಿಸಲಾಗುತ್ತಿತ್ತು. ಒಟ್ಟಾರೆಯಾಗಿ, ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳ ಪಠ್ಯಕ್ರಮದಲ್ಲಿ ನಿಜವಾಗಿ ಏನು ಕಲಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದರು.