ನಾವು ಎಲ್ಲಿಯವರೆಗೆ ಹಿಂಸೆ ಸಹಿಸಿಕೊಳ್ಳಬೇಕು ? – ಅಸಹಾಯಕ ಬಾಂಗ್ಲಾದೇಶಿ ಹಿಂದೂಗಳ ಪ್ರಶ್ನೆ
ಢಾಕಾ – ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿರುವದರ ವಿರುದ್ಧ ಅಲ್ಲಿಯ ಅನೇಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಿದರು. ಶಾಂತಿಯುತವಾಗಿ ಆಯೋಜಿಸಿದ್ದ ಈ ಆಂದೋಲನದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಭಾಗಿಯಾಗಿದ್ದರು. ಇದರದೇ ಒಂದು ಭಾಗವೆಂದು ಚಟಗಾಂವದಲ್ಲಿ ಒಂದು ದೊಡ್ಡ ಆಂದೋಲನ ನಡೆಸಲಾಯಿತು. ಹಿಂದೂಗಳ ಮೇಲಿನ ದಾಳಿ, ಹಿಂದೂ ಶಿಕ್ಷಕನ ಹತ್ಯೆ ಮತ್ತು ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ಇದರ ವಿರುದ್ಧ ಈ ಸಮಯದಲ್ಲಿ ಪ್ರತಿಭಟಿಸಲಾಯಿತು.
(ಸೌಜನ್ಯ : Hindustan Times)
ಈ ಮೊದಲು ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾ ಖಾನ ಮಾತನಾಡುತ್ತಾ, ನನ್ನ ಸರಕಾರ ಧಾರ್ಮಿಕ ಸೌಹಾರ್ದತೆ ಹಾಳು ಮಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಟಿಬದ್ಧವಾಗಿದೆ ಎಂದು ಹೇಳಿದ್ದರು. (ಮಾತಿನ ಮಲ್ಲದ ಪ್ರಕಾರವಾಗಿದೆ – ಸಂಪಾದಕರು) ಬಾಂಗ್ಲಾದೇಶ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗೃಹ ಸಚಿವಾಲಯಕ್ಕೆ ದಾಳಿಯ ತನಿಖೆ ನಡೆಸಿ ಹಿಂದುಗಳ ಮೇಲಿನ ದಾಳಿಯನ್ನು ತಡೆಯುವಲ್ಲಿ ಬೇಜವಾಬ್ದಾರಿತನದ ನಿಲುವನ್ನು ತೆಗೆದುಕೊಂಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವ ಆದೇಶ ನೀಡಿದೆ.
ಓರ್ವ ಸಂತ್ರಸ್ತ ಹಿಂದೂ ಮಹಿಳೆಯ ಪ್ರತಿಕ್ರಿಯೆ !ಆಂದೋಲನದಲ್ಲಿ ಭಾಗವಹಿಸಿದ್ದ ಓರ್ವ ಹಿಂದೂ ಮಹಿಳೆಯು, ನಮಗೆ ತಿಳಿದಿಲ್ಲ ಹಿಂಸೆಯ ಈ ಕಷ್ಟ ನಾವು ಎಲ್ಲಿಯವರೆಗೆ ಸಹಿಸಬೇಕು ? ಎಂದು ಹೇಳಿದರು. ನಮಗೆ ನ್ಯಾಯ ಮತ್ತು ಸಂರಕ್ಷಣೆ ಯಾರು ನೀಡುವರು ? ಹಿಂಸಾಚಾರದಲ್ಲಿ ನನ್ನ ಜೀವವೇ ಹೋಗುತ್ತಿತ್ತು. ದೇವರೇ ನನ್ನನ್ನು ಕಾಪಾಡಿದ್ದಾನೆ; ಆದರೆ ಜೀವಂತವಾಗಿ ಉಳಿಯುವುದು ಇದು ಯಾವ ಪದ್ದತಿಯಾಗಿದೆ ? ನನ್ನ ಶರೀರದ ಮೇಲೆ ಕೇವಲ ಒಂದು ಸೀರೆ ಉಳಿದಿದೆ ಎಂದು ಹೇಳಿದರು. |
ಸಂಪಾದಕೀಯ ನಿಲುವುಭಾರತದಲ್ಲಿ ಮುಸಲ್ಮಾನರ ಮೇಲೆ ಸುಳ್ಳು ಅತ್ಯಾಚಾರ ನಡೆದರೆ ಮತಾಂಧ ಮುಸಲ್ಮಾನರು ದೇಶಾದ್ಯಂತ ಹಿಂಸಾಚಾಋ ಮಾಡುತ್ತಾರೆ, ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಅಲ್ಲಿಯ ಹಿಂದೂಗಳು ಶಾಂತಿಯುತ ಆಂದೋಲನ ನಡೆಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಯಾವುದೇ ಜಾತ್ಯತೀತ ಅಥವಾ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ, ಇದನ್ನು ಗಮನಿಸಿ ! |