ರಾಂಚಿ (ಝಾರಖಂಡ) – ಮಾಧ್ಯಮಗಳು ‘ನಿರಂಕುಶ ನ್ಯಾಯಾಲಯ (ಕಾಂಗರೂ ಕೋರ್ಟ) ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದ ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೂ ಕೂಡ ಯೋಗ್ಯ-ಅಯೋಗ್ಯ ನಿರ್ಧಾರಿಸಲು ಕಷ್ಟವಾಗುತ್ತದೆ. ಅನೇಕ ನ್ಯಾಯಾಲಯಗಳ ಅಂಶಗಳ ಮೇಲೆ ತಪ್ಪು ಮಾಹಿತಿ ಮತ್ತು ಅಜೆಂಡಾ (ಕಾರ್ಯಸೂಚಿ) ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವುದು ಸಿದ್ಧವಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣಾ ಇವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು.
“Media Running Kangaroo Courts, Agenda-Driven Debates” : CJI Ramana Expresses Concerns Over Campaigns Against Judges https://t.co/elI7n1dWFV
— Live Law (@LiveLawIndia) July 23, 2022
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣಾ ಇವರು ಮಂಡಿಸಿದ ಅಂಶಗಳು
ಇಲೆಕ್ಟ್ರಾನಿಕ್ ಮಾಧ್ಯಮಗಳು ಬೇಜವಾಬ್ದಾರಿ ತನ !
ನಾವು ನಮ್ಮ ಜವಾಬ್ದಾರಿಯಿಂದ ಬೆನ್ನು ತಿರುಗಿಸಲು ಸಾಧ್ಯವಿಲ್ಲ. ಈ ‘ಟ್ರೆಂಡ (ನಿರಂಕುಶ ನ್ಯಾಯಾಲಯ ನಡೆಸುವ ಪ್ರಕಾರ) ನಮಗೆ ಎರಡು ಹೆಜ್ಜೆ ಹಿಂದಕ್ಕೆ ಒಯ್ಯುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ (ದಿನಪತ್ರಿಕೆಗಳಲ್ಲ್ಲಿ) ಇಂದಿಗೂ ಸ್ವಲ್ಪ ಮಟ್ಟಿಗೆ ಜವಾಬ್ದಾರಿಯ ಭಾವನೆಯಿದೆ; ಆದರೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಸುದ್ದಿವಾಹಿನಿಗಳಲ್ಲಿ) ಜವಾಬ್ದಾರಿ ಉಳಿದಿಲ್ಲ.
ನ್ಯಾಯಾಧೀಶರು ಸಾಮಾಜಿಕ ವಾಸ್ತವದ ಬಗ್ಗೆ ಕಣ್ಣುಮುಚ್ಚಲು ಸಾಧ್ಯವಿಲ್ಲ !
ನ್ಯಾಯಾಧೀಶರು ಈ ಸಾಮಾಜಿಕ ವಾಸ್ತವದ ಕಡೆಗೆ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ. ಸಮಾಜವನ್ನು ರಕ್ಷಿಸಲು ಮತ್ತು ಸಂಘರ್ಷ ತಪ್ಪಿಸಲು ನ್ಯಾಯಾಧೀಶರಿಗೆ ಹೆಚ್ಚು ಒತ್ತಡದ ಅರ್ಜಿಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಸಧ್ಯದ ಕಾಲದಲ್ಲಿ ನ್ಯಾಯವ್ಯವಸ್ಥೆಯ ಮುಂದೆ ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ತೀರ್ಪು ನೀಡುವಲ್ಲಿ ಇಂತಹ ಅಂಶಗಳಿಗೆ ಪ್ರಾಮುಖ್ಯತೆ ನೀಡುವುದು.
ನ್ಯಾಯಾಧೀಶರ ಮೇಲಿನ ಆಕ್ರಮಣಗಳಲ್ಲಿ ಹೆಚ್ಚಳ !
ರಾಜಕಾರಣಿ, ಅಧಿಕಾರಶಾಹಿ ಮತ್ತು ಪೊಲೀಸ ಅಧಿಕಾರಿಗಳಿಗೆ ನಿವೃತ್ತಿಯ ಬಳಿಕವೂ ಹಲವಾರು ಬಾರಿ ಭದ್ರತೆ ನೀಡಲಾಗುತ್ತದೆ. ಆಶ್ಚರ್ಯವೆಂದರೆ ನ್ಯಾಯಾಧೀಶರಿಗೆ ಅವರಂತೆ ಭದ್ರತೆ ಸಿಗುವುದಿಲ್ಲ. ಇತ್ತೀಚಿನ ಕಾಲದಲ್ಲಿ ನ್ಯಾಯಾಧೀಶರ ಮೇಲೆ ಶಾರೀರಿಕ ಆಕ್ರಮಣಗಳು ಹೆಚ್ಚುತ್ತಿವೆ. ಯಾವ ಸಮಾಜದಲ್ಲಿ ಅವರು ದೋಷಿಗಳೆಂದು ನಿರ್ಧರಿಸಿರುವ ಜನರು ಇರುತ್ತಾರೆಯೋ, ಅದೇ ಸಮಾಜದಲ್ಲಿ ನ್ಯಾಯಾಧೀಶರಿಗೆ ಭದ್ರತೆಯಿಲ್ಲದೇ ಬದುಕಬೇಕಾಗುತ್ತ್ತಿದೆ.
ನ್ಯಾಯಾಧೀಶರ ಜೀವನ ಸುಲಭವಾಗಿರುವುದಿಲ್ಲ !
ಭಾರತೀಯ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಜನರು ಅನೇಕಬಾರಿ ವಿಳಂಬಗೊಂಡ ಪ್ರಕರಣಗಳ ವಿಷಯದಲ್ಲಿ ದೂರು ಸಲ್ಲಿಸುತ್ತಾರೆ. ನಾನು ಸ್ವತಃ ಅನೇಕ ಪ್ರಸಂಗಗಳಲ್ಲಿ ವಿಳಂಬಗೊಂಡ ಪ್ರಕರಣಗಳ ಅಂಶಗಳನ್ನು ಮಂಡಿಸಿದ್ದೇನೆ. ನ್ಯಾಯಮೂರ್ತಿಗಳಿಗೆ ಅವರ ಪೂರ್ಣ ಕ್ಷಮತೆಯಿಂದ ಕಾರ್ಯ ಮಾಡಲು ಭೌತಿಕ ಮತ್ತು ವೈಯಕ್ತಿಕ ಹೀಗೆ ಎರಡೂ ಅಡಿಪಾಯಗಳಡಿಯಲ್ಲಿ ಸೌಲಭ್ಯಗಳ ಸುಧಾರಣೆ ಮಾಡುವ ಆವಶ್ಯಕತೆಯನ್ನು ನಾನು ದೃಢವಾಗಿ ಮಂಡಿಸುತ್ತೇನೆ. ‘ನ್ಯಾಯಮೂರ್ತಿಗಳ ಜೀವನ ಬಹಳ ಸುಲಭವಾಗಿರುತ್ತದೆ, ಎಂದು ಜನತೆಯಲ್ಲಿ ತಪ್ಪು ಕಲ್ಪನೆ ನಿರ್ಮಾಣವಾಗಿದೆ. ಈ ವಿಷಯವನ್ನು ಸ್ವೀಕರಿಸುವುದು ಬಹಳ ಕಠಿಣವಾಗಿದೆ.
ಸಂಪಾದಕೀಯ ನಿಲುವುನ್ಯಾಯಾಲಯ ಇಂತಹ ಮಾಧ್ಯಮಗಳಿಗೆ ದಿಗಿಲು ನಿರ್ಮಾಣ ಮಾಡಬೇಕು, ಎಂದು ಜನರಿಗೆ ಅನಿಸುತ್ತದೆ ! |