|
ಕೊಲಕಾತಾ (ಬಂಗಾಲ) – ಶಿಕ್ಷಕರ ನೇಮಕಾತಿ ಅವ್ಯವಹಾರ ಪ್ರಕರಣದಲ್ಲಿ ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರದ ಉದ್ಯೋಗ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಇವರನ್ನು ಈಡಿ (ಜಾರಿ ನಿರ್ದೇಶನಾಲಯ) ಬಂಧಿಸಿದೆ. ಒಂದು ದಿನ ಹಿಂದೆ ಅವರ ಹತ್ತಿರದ ಅರ್ಪಿತಾ ಮುಖರ್ಜಿ ಎಂಬವರ ಮನೆಯ ಮೇಲೆ ದಾಳಿ ನಡೆಸಿ ಈಡಿ ಸುಮಾರು ೨೦ ಕೋಟಿ ರೂಪಾಯಿ ನಗದು, ಹಾಗೂ ೨೦ ಸಂಚಾರಿವಾಣಿಯ ಸಂಚಗಳನ್ನು ವಶಪಡಿಸಿತ್ತು. ಬಂಧನಕ್ಕೂ ಮೊದಲು ಅನೇಕ ಗಂಟೆಗಳ ಕಾಲ ಈಡಿ ಚಟರ್ಜಿಯ ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ವಿಚಾರಣೆ ನಡೆದಿದೆ.
#WestBengal SSC scam: #TMC minister #ParthaChatterjee remanded to ED custody for two dayshttps://t.co/yMLUPEtULW
— TIMES NOW (@TimesNow) July 23, 2022
ಅರ್ಪಿತಾ ಚಟರ್ಜಿ ಇವರನ್ನು ಸೇರಿ ಶಿಕ್ಷಣ ರಾಜ್ಯ ಸಚಿವ ಪರೇಶ ಅಧಿಕಾರಿ ಮತ್ತು ಶಾಸಕ ಮಾಣಿಕ ಭಟ್ಟಾಚಾರ್ಯ, ಹಾಗೂ ಅನ್ಯ ಕೆಲವು ವ್ಯಕ್ತಿಗಳ ಮೇಲೆ ಈಡಿ ಕ್ರಮ ಕೈಗೊಂಡಿದೆ. ನೇಮಕಾತಿ ಅವ್ಯವಹಾರದ ಪ್ರಕರಣ ನ್ಯಾಯಾಲಯಕ್ಕೆ ಹೋದ ನಂತರ ನ್ಯಾಯಾಲಯ ಈ ಅವ್ಯವಹಾರದ ವಿಚಾರಣೆ ನಡೆಸುತ್ತಿದೆ.
ಸಿಬಿಐ ಗೆ ವಿಚಾರಣೆ ನಡೆಸುವ ಆದೇಶ ನೀಡಲಾಗಿದೆ.
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಮೌನ ಏಕೆ ವಹಿಸಿದ್ದಾರೆ? ಅವರಿಗೆ ಈ ಆವ್ಯವಹಾರದ ಮಾಹಿತಿ ಇರಲಿಲ್ಲ, ಎಂದು ಅವರು ಹೇಳಲು ಸಾಧ್ಯವೇ ? ಈ ಪ್ರಕರಣದಿಂದಾಗಿ ಅವರು ರಾಜೀನಾಮೆ ನೀಡುವುದು ಅಪೇಕ್ಷಿತವಾಗಿದೆ. |