ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟ ನಿಷೇಧದ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯದಿಂದ ನೋಟಿಸ್

(ಸೌಜನ್ಯ : LAW BEAT)

ಗುವಾಹಾಟಿ (ಅಸ್ಸಾಂ) : ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ. ಮುಜೀಬ ರೋಹಮನ ಮತ್ತು ಇನ್ನಿತರರು ದಾಖಲಿಸಿರುವ ಮನವಿಯ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ಆದೇಶ ನೀಡಿದೆ. ನಗರ ಪಾಲಿಕೆ ಅಸ್ಸಾಂ ಕ್ಯಾಟಲ್ ಪ್ರಿಸರ್ವೇಶನ್ ಆಕ್ಟ್ ನ ಕಲಂ ೮ ಪ್ರಕಾರ ಜುಲೈ ೧೫, ೨೦೨೨ ರಿಂದ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟ ವ್ಯವಸಾಯದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಮನವಿ ಸಲ್ಲಿಸಿದವರ ಪ್ರಕಾರ ಈ ಪರಿಸರದಲ್ಲಿ ಅವರ ವ್ಯವಸಾಯ ಅವರ ಪೂರ್ವಜರ ಕಾಲದಿಂದ ನಡೆಯುತ್ತಿತ್ತು. ಸಂಬಂಧಿತ ಕಾನೂನು ಸಹ ಸಂಪೂರ್ಣ ನಿಷೇಧದ ಬಗ್ಗೆ ಯೋಚಿಸುವುದಿಲ್ಲ. ಈ ಕಾನೂನಿನ ಪ್ರಕಾರ ವ್ಯವಸಾಯ ಮಾಡುವುದಕ್ಕಾಗಿ ಬೇರೊಂದು ಉಚಿತ ಸ್ಥಳ ನೀಡದೇ ಸಂಪೂರ್ಣ ನಿಷೇಧ ಹೇರುವುದರ ಬಗ್ಗೆ ಹೇಳುವುದಿಲ್ಲ.