ಕಳೆದ ೨-೩ ತಿಂಗಳಲ್ಲಿ ರಾಜ್ಯದ ೮ ಮಂದಿರಗಳಲ್ಲಿ ಧ್ವಂಸ; ಆದರೆ ಯಾರನ್ನೂ ಬಂಧಿಸಿಲ್ಲ !
(ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೇ ನಿಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ)
ಡೋಡಾ (ಜಮ್ಮೂ-ಕಾಶ್ಮೀರ) – ಇಲ್ಲಿಯ ಶಿವಮಂದಿರದಲ್ಲಿ ದುಶ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ಮಂದಿರದಲ್ಲಿದ್ದ ಭಗವಾನ ಶಿವನ ಮೂರ್ತಿಯ ಕೈ ಮತ್ತು ಕಾಲು ಮುರಿಯಲಾಗಿದೆ. ಸ್ಥಳಿಯ ಹಿಂದೂಗಳು ಈ ಮಂದಿರವನ್ನು ‘ಛೋಟಾ ಮಣಿ ಮಹೇಶ’ ಹೆಸರಿನಿಂದ ಕರೆಯುತ್ತಿದ್ದರು. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಂದಿರದ ಮುಖ್ಯ ಮಾರ್ಗದಿಂದ ೧೦ ಕಿಲೋಮೀಟರ ಒಳಗೆ ಇದೆ.
ಉಪರಾಜ್ಯಪಾಲರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತೇವೆ ! – ಹಿಂದೂ ಸಂಘಟನೆಗಳ ಎಚ್ಚರಿಕೆ
ಈ ಘಟನೆಯ ನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯದ ಉಪರಾಜ್ಯಪಾಲ ಮನೋಜ ಸಿನ್ಹಾ ಮತ್ತು ಕೇಂದ್ರ ಸರಕಾರದ ಪುತ್ತಳಿಗಳನ್ನು ಸುಟ್ಟರು. ಪ್ರತಿಭಟನಾಕಾರರು, ಕಳೆದ ೨-೩ ತಿಂಗಳಲ್ಲಿ ಜಮ್ಮೂ-ಕಾಶ್ಮೀರದಲ್ಲಿ ಹಿಂದೂಗಳ ೮ ಕ್ಕಿಂತ ಹೆಚ್ಚು ಮಂದಿರಗಳಲ್ಲಿ ಧ್ವಂಸ ಗೊಳಿಸಲಾಗಿದೆ; ಆದರೆ ಇಲ್ಲಿಯವರೆಗೆ ಒಬ್ಬ ಆರೋಪಿಯನ್ನೂ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿಲ್ಲ. (ಇಂತಹ ದುರ್ಬಲ ಪೊಲೀಸರನ್ನು ವರ್ಗಾವಣೆ ಮಾಡಬೇಕು ! – ಸಂಪಾದಕರು) ಇದರಿಂದ ಹಿಂದೂಗಳು ಆಕ್ರೋಶಗೊಂಡಿದ್ದಾರೆ. ಕೇಂದ್ರ ಸರಕಾರವು ನಮಗೆ ಮತ್ತಷ್ಟು ಕಠೋರವಾಗಿ ಪ್ರತಿಭಟನೆ ನಡೆಸುವಂತೆ ಮಾಡಬಾರದು. ಇಂತಹ ಘಟನೆ ಇತರೆ ಧರ್ಮದವರ ಶ್ರದ್ಧಾಸ್ಥಾನಗಳ ಸಂದರ್ಭದಲ್ಲಿ ಜರುಗಿದ್ದರೆ, ತಕ್ಷಣವೇ ಕ್ರಮ ಜರುಗಿಸಲಾಗುತ್ತಿತ್ತು. ಒಂದು ವೇಳೆ ಮಂದಿರದಲ್ಲಿ ಧ್ವಂಸ ಮಾಡಿದವರನ್ನು ಬಂಧಿಸದೆ ಇದ್ದಲ್ಲಿ ನಾವು ಉಪರಾಜ್ಯಪಾಲರ ನಿವಾಸಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಹಿಂದೆ ಎಪ್ರಿಲ್ ೮ ರಂದು ಲಕ್ಷ್ಮೀ ನಾರಾಯಣ ಮಂದಿರ, ಮೇ ೫ ರಂದು ವಾಸುಕಿ ಮಂದಿರ ಹಾಗೂ ಜುಲೈ ೧೧ ರಂದು ಹನುಮಾನ ಮಂದಿರಗಳಲ್ಲಿ ಧ್ವಂಸ ಕೃತ್ಯ ನಡೆಸಲಾಗಿತ್ತು. ಆಗಲೂ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಆರೋಪಿಯನ್ನು ಶೀಘ್ರವಾಗಿ ಬಂಧಿಸುವುದಾಗಿ ಆಶ್ವಾಸನೆ ನೀಡಿದ್ದರು.
ಸಂಪಾದಕೀಯ ನಿಲುವುಜಮ್ಮೂ-ಕಾಶ್ಮೀರದಲ್ಲಿ ಇಂದಿಗೂ ಜಿಹಾದಿ ಭಯೋತ್ಪಾದಕರು ಮತ್ತು ಮತಾಂಧರ ರಾಜ್ಯವಿದೆ, ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! ಕಾಶ್ಮೀರ ಸಮಸ್ಯೆಯು ಧಾರ್ಮಿಕವಾಗಿರುವುದರಿಂದ ಅದರ ಬುಡಕ್ಕೆ ಎಲ್ಲಿಯ ವರೆಗೆ ಪೆಟ್ಟು ಹಾಕಿ ಅದನ್ನು ಕಿತ್ತು ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಹೀಗೆಯೇ ಇರಲಿದೆ ! |