ಕರಾಚಿ (ಪಾಕಿಸ್ತಾನ)ದಲ್ಲಿ ಮುಸಲ್ಮಾನರಿಂದ ಅಪ್ರಾಪ್ತ ಯುವತಿಯ ಅಪಹರಣ, ಮತಾಂತರ ಹಾಗೂ ವಿವಾಹ

ಪಾಕಿಸ್ತಾನದಲ್ಲಿರುವ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಇತ್ತೀಚೆಗೆ ೧೬ ವರ್ಷದ ಓರ್ವ ಹಿಂದೂ ಹುಡುಗಿಯನ್ನು ಮುಸಲ್ಮಾನರು ಅಪಹರಿಸಿದ್ದಾರೆ. ಅನಂತರ ಬಲವಂತದಿಂದ ಆಕೆಯ ಮತಾಂತರ ಮಾಡಲಾಗಿ, ಓರ್ವ ಮುಸಲ್ಮಾನನೊಂದಿಗೆ ಆಕೆಯ ವಿವಾಹ ನಡೆಸಲಾಯಿತು. ಈ ಪ್ರಕರಣದಲ್ಲಿ ಹಿಂದೂಗಳು ಆಂದೋಲನ ಮಾಡುತ್ತ ಮಾಜಿ ರಾಷ್ಟ್ರಪತಿ ಆಸೀಫ ಅಲೀ ಝರದಾರಿಯವರಿಗೆ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಹುಡುಗಿಯನ್ನು ಹುಡುಕಲು ಸಹಾಯ ಮಾಡಬೇಕಾಗಿ ಮನವಿ ಮಾಡಿದರು.

(ಸೌಜನ್ಯ :India Today)

೧. ಈ ಹುಡುಗಿಯ ಹೆಸರು ಕರಿನಾ ಆಗಿದ್ದು ಪೊಲೀಸರು ಹೇಳುವಂತೆ, ಆಕೆಯು ಇಲ್ಲಿನ ಖಲೀಲ ರಹಮಾನ ಜೋನೊ ಎಂಬ ಮುಸಲ್ಮಾನ ಯುವಕನನ್ನು ಪ್ರೀತಿಸುತ್ತಿದ್ದಳು ಹಾಗೂ ಆಕೆಯು ಆತನೊಂದಿಗೆ ಓಡಿ ಹೋದಳು. ನಂತರ ಅವರು ಕರಾಚಿಯಲ್ಲಿನ ನ್ಯಾಯಾಲಯಕ್ಕೆ ಹೋಗಿ ವಿವಾಹಕ್ಕಾಗಿ ಅರ್ಜಿ ದಾಖಲಿಸಿದರು. ಈ ಪ್ರಕರಣದಲ್ಲಿ ಹುಡುಗಿಯ ತಂದೆಯ ದೂರಿನ ನಂತರ ಹುಡುಗನ ತಂದೆಯನ್ನು ಬಂಧಿಸಲಾಯಿತು, ಹಾಗೆಯೇ ಹುಡುಗಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು.

೨. ಹಿಂದೂ ಪಂಚಾಯತ್‌ನ ಉಪಾಧ್ಯಕ್ಷರಾದ ಲಾಜಪತ ರಾಯರವರು ಮಾತನಾಡುತ್ತ, ನಮ್ಮ ಒಂದು ಶಿಷ್ಟಮಂಡಳಿಯು ಪೊಲೀಸರನ್ನು ಭೇಟಿಯಾಗಲು ಹೋಗಿತ್ತು, ಆದರೆ ಅವರು ಬಲವಂತದ ಮತಾಂತರದ ಅಪರಾಧವನ್ನು ದಾಖಲಿಸಲು ನಿರಾಕರಿಸಿದರು’ ಎಂದು ಹೇಳಿದರು.