ಅಸ್ಲಂ ಖಾನ ಎಂಬವನು ಸಂಜಯ ಎಂಬ ಹೆಸರು ಹೇಳಿ ಹಿಂದೂ ಹುಡುಗಿಯ ಮೇಲೆ ಎರಡು ವರ್ಷ ಬಲತ್ಕಾರವೆಸಗಿದ

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನ ಇನ್ನೊಂದು ಘಟನೆ ಬೆಳಕಿಗೆ

ಫತೆಹಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಫತೆಹಪುರ ಜಿಲ್ಲೆಯಲ್ಲಿ ಲವ್ ಜಿಹಾದಿನ ಇನ್ನೊಂದು ಘಟನೆ ಈಗಷ್ಟೇ ಬೆಳಕಿಗೆ ಬಂದಿದೆ. ಇಲ್ಲಿಯ ಅಸ್ಲಂ ಖಾನ್ ಇವನು ಸಂಜಯ ಎಂದು ಹಿಂದೂ ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯ ಮೇಲೆ ೨ ವರ್ಷಗಳಿಂದ ಬಲಾತ್ಕಾರವೆಸಾಗಿದ್ದಾನೆ. ನಂತರ ಸತ್ಯ ಹೊರಬಿದ್ದಾಗ ಅವನು ಸಂತ್ರಸ್ತೆಯನ್ನು ಬಿಟ್ಟು ಓಡಿ ಹೋದನು. ಸಂತ್ರಸ್ತೆಯು ಮಧ್ಯ ಪ್ರದೇಶದ ಜಬಲ್ಪುರಿಯ ನಿವಾಸಿ. ಆಕೆ ಆರೋಪಿಯ ಮೇಲೆ ಕ್ರಮ ಕೈಗೊಳ್ಳುಲು ಒತ್ತಾಯಿಸಿದ್ದಾಳೆ, ಎಂಬ ವಾರ್ತೆ ನ್ಯೂಸ್ ೧೮ ನಲ್ಲಿ ಪ್ರಸಾರವಾಗಿದೆ.

ಆರೋಪಿ ಅಸ್ಲಂ ಖಾನ್ ಫತೆಹಪುರ ಜಿಲ್ಲೆಯ ಉಮರಾ ಬಾಗಲಪುರ ಗ್ರಾಮದ ನಿವಾಸಿ. ೨೦೨೦ ರಲ್ಲಿ ಅವನು ಮಧ್ಯಪ್ರದೇಶದ ಜಬಲ್ಪುರದಲ್ಲಿ ಕೆಲಸಕ್ಕೆ ಹೋಗಿದ್ದನು. ಅಲ್ಲಿ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಒಬ್ಬ ಹಿಂದೂ ಹುಡುಗಿಯ ಜೊತೆ ಪರಿಚಯವಾಯಿತು. ಅಸ್ಲಂ ತನ್ನ ಹೆಸರು ಸಂಜಯ ಎಂದು ಸುಳ್ಳು ಹೇಳಿ ಆಕೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ, ಜುಲೈ ೨೫, ೨೦೨೦ ರಂದು ಇಲ್ಲಿಯ ದುರ್ಗಾ ದೇವಸ್ಥಾನದಲ್ಲಿ ಆಕೆಯ ಜೊತೆ ವಿವಾಹ ಮಾಡಿಕೊಂಡನು. ಅವನು ಆಕೆಯ ಮೇಲೆ ಬಲತ್ಕಾರ ನಡೆಸಿದನು. ಜೂನ್ ೩೦, ೨೦೨೦ ರಂದು ಅವನು ಮುಸಲ್ಮಾನನೆಂದು ಆಕೆಗೆ ತಿಳಿಯಿತು, ನಂತರ ಅವನು ಆಕೆಯನ್ನು ಬಿಟ್ಟು ಓಡಿ ಹೋದನು, ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಪ್ರತಿದಿನ ಲವ್ ಜಿಹಾದ್ ನ ಅನೇಕ ಘಟನೆ ಘಟಿಸುತ್ತಿದ್ದರೂ ಸರಕಾರಿ ವ್ಯವಸ್ಥೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಗಮನಿಸಿ ! ಧರ್ಮದ ಮೇಲೆ ಈ ಆಘಾತದ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ.