ಚೀನಾದ ಒಪ್ಪೋ ಸಂಸ್ಥೆಯಿಂದ ೪,೩೮೯ ಕೋಟಿ ರೂಪಾಯಿ ತೆರಿಗೆ ವಂಚನೆ

ಹೊಸ ದೆಹಲಿ – ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರಐ) ಮೊಬೈಲ ಫೊನ ನಿರ್ಮಾಣ ಮಾಡುವ ಚೀನಾದ ಸಂಸ್ಥೆ `ಒಪ್ಪೋ’ ೪,೩೮೯ ಕೋಟಿ ರೂಪಾಯಿಗಳ ಕಸ್ಟಮ್ಸ ತೆರಿಗೆ ವಂಚಿಸಿದೆ ಎಂದು ಅರೋಪಿಸಿದೆ. ಈ ಪ್ರಕರಣದಲ್ಲಿ ಸಂಸ್ಥೆಗೆ ನೋಟಿಸ ಜಾರಿ ಮಾಡಲಾಗಿದೆ. ಈ ಹಿಂದೆ ಚೀನಾದ ಸಂಸ್ಥೆಗಳಾದ ಶಾವೊಮಿ, ವಿವೊ ಇವುಗಳ ಮೇಲೆ ಹಣಕಾಸಿನ ಅಕ್ರಮ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿತ್ತು.

ಡಿಆರಐ ಒಪ್ಪೋ ಕಚೇರಿಗಳು ಮತ್ತು ಕೆಲವು ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದೆ. ಈ ಸಂಸ್ಥೆಯು ಮೊಬೈಲ ಉತ್ಪಾದನೆಯ ಯೋಗ್ಯ ಮಾಹಿತಿಯನ್ನು ನೀಡಿರುವುದಿಲ್ಲ. ಈ ಪ್ರಕರಣದಲ್ಲಿ ಸಂಸ್ಥೆಯು ೨,೯೮೧ ಕೋಟಿ ರೂಪಾಯಿಗಳ ತೆರಿಗೆ ವಿನಾಯತಿ ಕೂಡಾ ಪಡೆದಿದೆ.

ಸಂಪಾದಕೀಯ ನಿಲುವು

* ಶಾವೊಮಿ, ವಿವೊ, ನಂತರ ಈಗ ಚೀನಾದ ಒಪ್ಪೋ ಸಂಸ್ಥೆಯಿಂದ ಈ ರೀತಿಯ ವಂಚನೆ ಮುಂಬರುತ್ತಿದೆ. ಇಂತಹ ಸಂಸ್ಥೆಗಳನ್ನು ಭಾರತದಿಂದ ಗಡಿಪಾರು ಮಾಡಬೇಕಾದ ಆವಶ್ಯಕತೆ ಇದೆಯೆಂಬುದು ಗಮನದಲ್ಲಿರಲಿ.