ಕಠುವಾ (ಜಮ್ಮು) ಇಲ್ಲಿಯ ಶಿವ ಮಂದಿರದಲ್ಲಿ ಹನುಮಾನ ಮೂರ್ತಿ ಧ್ವಂಸ

ಕಠವಾ (ಜಮ್ಮು) – ಇಲ್ಲಿಯ ಮಹಾನಪೂರ ತಾಲೂಕಿನ ಪಲಕ ಗ್ರಾಮದಲ್ಲಿ ದುಶ್ಕರ್ಮಿಗಳಿಂದ ಶಿವ ಮಂದಿರದಲ್ಲಿನ ಹನುಮಾನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ಈ ಘಟನೆ ತಿಳಿಯುತ್ತಲೇ ಹಿಂದುಗಳಿಂದ ರಸ್ತೆ ತಡೆ ಆಂದೋಲನ ನಡೆಸಲಾಯಿತು. ಆ ಸಮಯದಲ್ಲಿ ಪೊಲೀಸರು ‘ತಪ್ಪಿತಸ್ಥರನ್ನು ೨೪ ಗಂಟೆಯಲ್ಲಿ ಬಂಧಿಸಲಾಗುವುದೆಂದು’ ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇತರ ಧರ್ಮೀಯರ ಧಾರ್ಮಿಕ ಸ್ಥಳಗಳ ಮೇಲೆ ಎಂದಾದರೂ ಈ ರೀತಿ ಘಟನೆ ನಡೆಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !