ಒಬ್ಬಂಟಿ ಮುಸಲ್ಮಾನ ಮಹಿಳೆಯು ಅಪ್ರಾಪ್ತ ಮಕ್ಕಳ ಪಾಲಕಳಾಗಲು ಸಾಧ್ಯವಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಮ್‌ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡುವಾಗ ಒಬ್ಬಂಟಿ ಮುಸಲ್ಮಾನ ಮಹಿಳೆಯು ತನ್ನ ಅಪ್ರಾಪ್ತ ಮಕ್ಕಳ ಹಾಗೂ ಅವರ ಸಂಪತ್ತಿನ ಪಾಲಕಳಾಗಲು ಸಾಧ್ಯವಿಲ್ಲ; ಏಕೆಂದರೆ ಈ ಹಿಂದೆಯೇ ಇಂತಹ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪು ನೀಡಿದೆ, ಎಂದು ಹೇಳಿದೆ.

ಕುರಾನ ಹಾಗೂ ಹದೀಸ (ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಮಹಮ್ಮದ ಪೈಗಂಬರರು ಹೇಗೆ ವರ್ತಿಸಿದರು, ಹೇಗೆ ಮಾತನಾಡಿದರು ಇವುಗಳ ಸಂಗ್ರಹ) ಇವುಗಳಲ್ಲಿ ಮುಸಲ್ಮಾನ ಮಹಿಳೆಯರಿಗೆ ಮಕ್ಕಳ ಪಾಲಕರಾಗುವ ಅಧಿಕಾರದ ಮೇಲೆ ಯಾವುದೇ ನಿರ್ಬಂಧವಿಲ್ಲ; ಆದರೆ ನ್ಯಾಯಾಲಯವು ಹೇಳುವಂತೆ, ಸಂವಿಧಾನದ ಕಲಂ ೧೪೧ರ ಅನುಸಾರ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಪಾಲಿಸಲು ನಾವು ಬಾಧ್ಯರಾಗಿದ್ದೇವೆ.