ಕೇರಳದಲ್ಲಿ ಯೇಸು ಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಮೌಲ್ವಿಯ ವಿರುದ್ಧ ಅಪರಾಧ ಪ್ರಕರಣ ದಾಖಲು

(ಮೌಲ್ವಿ- ಇಸ್ಲಾಂ ಧರ್ಮಗುರು)

ಕೊಚ್ಚಿ (ಕೇರಳ) – ಕೇರಳದ ಮಲಪ್ಪುರಂ ಜಿಲ್ಲೆಯ ಕೊಡೊಟ್ಟಿ ನಿವಾಸಿ ಮೌಲ್ವಿ ವಾಸಿಂ ಅಲ-ಹಿಕಾಮಿ ಎಂಬಾತನ ವಿರುದ್ಧ ಕೊಚ್ಚಿ ಸೈಬರ ಪೊಲೀಸರು ಯೇಸುಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ಅನೂಪ ಅಂಟನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ‘ಮೌಲ್ವಿ ವಾಸಿಂ ಅಲ-ಹಿಕಾಮಿ ಯೇಸು ಕ್ರಿಸ್ತನ ಜನನದ ಬಗ್ಗೆ ಅವಮಾನಕಾರ ಹೇಳಿಕೆ ನೀಡಿದ್ದಾರೆ. ಅವನ ಮಾತುಗಳು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಅಂಟನಿ ಹೇಳಿದ್ದಾರೆ. ಇದಕ್ಕೂ ಮೊದಲು ಜನವರಿ ೨೦೨೨ರಲ್ಲಿ ವಾಸಿಂ ಅಲ-ಹಿಕಾಮಿ ವಿರುದ್ಧ ಇದೇ ರೀತಿಯ ಪ್ರಕರಣ ದಾಖಲಾಗಿತ್ತು.

ಸಂಪಾದಕೀಯ ನಿಲುವು

ಕಮ್ಯುನಿಸ್ಟ ರಾಜ್ಯದಲ್ಲಿ ಕ್ರೈಸ್ತರ ಅಥವಾ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಅವರು ಕೂಡಲೇ ಅದಕ್ಕೆ ಸ್ಪಂದಿಸುತ್ತಾರೆ, ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾದರೆ ಎಷ್ಟೇ ದೂರುಗಳು ನೋಂದಾಯಿಸಿದರೂ ನಿರ್ಲಕ್ಷಿಸುತ್ತಾರೆ, ನೆನಪಿನಲ್ಲಿಡಿ!