ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ, ಭಾರತೀಯ ಸಂವಿಧಾನದ ಹತ್ಯೆ ! – ಹಿಂದೂ ಯುವ ಮಂಚ್

ದುರ್ಗ (ಛತ್ತಿಸ್ ಗಢ) ಎಂಬಲ್ಲಿ ಹಿಂದುತ್ವನಿಷ್ಠರ ಆಂದೋಲನ

ದುರ್ಗ (ಛತ್ತಿಸ್ಗಢ) : ರಾಷ್ಟ್ರಪ್ರೇಮಿ ವಿಚಾರಸರಣಿ ಇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ ಇದು ಭಾರತೀಯ ಸಂವಿಧಾನದ ಕೊಲೆಯಾಗಿದೆ, ಎಂದು ಹಿಂದೂ ಯುವ ಮಂಚ ನ ಸ್ಥಾನೀಯ ಪ್ರಮುಖ ಶ್ರೀ. ಗೋವಿಂದರಾಜ ನಾಯ್ಡು ಇವರು ಪ್ರತಿಪಾದಿಸಿದರು.

ಉದಯಪುರದಲ್ಲಿ ಜೂನ್ ೨೮ ರಂದು ಜಿಹಾದಿಗಳು ಮಾಡಿದ ಕನ್ಹೈಯ್ಯಲಾಲ ಇವರ ಹತ್ಯೆಯ ವಿರುದ್ಧ ಇಲ್ಲಿ ಹಿಂದೂ ಯುವ ಮಂಚ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಪ್ರತಿಭಟನೆಯಲ್ಲಿ ನೂರಾರು ಹಿಂದೂಗಳು ಭಾಗವಿಹಿಸಿದ್ದರು. ಅದರ ನಂತರ ಹಿಂದುತ್ವನಿಷ್ಠರು ಸೇರಿ ರಾಷ್ಟ್ರಪತಿಯವರಿಗೆ (ಜಿಲ್ಲಾಧಿಕಾರಿಗಳ ಮೂಲಕ) ಕನ್ಹೈಯ್ಯಲಾಲ ಇವರ ಕೊಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ನಿವೇದನೆ ನೀಡಿದರು.

ಶ್ರೀ. ನಾಯ್ಡು ಮಾತು ಮುಂದುವರಿಸಿ, ಈ ಕೊಲೆಯ ಮೂಲಕ ಭಾರತದ ೧೦೦ ಕೋಟಿ ಹಿಂದೂಗಳನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಘಟನೆಗಳ ಮೂಲಕ ಭಾರತದ ತಾಲಿಬಾನಿಕರಣ ಮಾಡುವ ಪ್ರಯತ್ನ ತಡೆಯುವುದಕ್ಕಾಗಿ ಕಠಿಣ ಉಪಾಯಗಳು ಆವಶ್ಯಕವಾಗಿವೆ ಎಂದರು.