ಮೀರ ಸಾವನ್ನಪ್ಪಿದ್ದಾನೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು !
ನವದೆಹಲಿ – ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ವಿದೇಶಿ ಸರಕಾರಿ ಆಸ್ತಿಗೆ ಹಾನಿ ಮಾಡುವ ಸಂಚು, ಭಯೋತ್ಪಾದಕರಿಗೆ ನೆರವು, ಅಮೇರಿಕಾದ ನಾಗರಿಕನ ಹತ್ಯೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬಸ್ಪೋಟಿಸುವ ಆರೋಪದ ಮೇಲೆ ಅಮೇರಿಕಾವು ಮೀರನನ್ನು ‘ಪರಾರಿ ಭಯೋತ್ಪಾದಕ’ ಎಂದು ಘೋಷಿಸಿತ್ತು. ಮುಂಬಯಿ ಮೇಲಿನ ದಾಳಿಯಲ್ಲಿ ಮೃತಪಟ್ಟ ೧೬೬ ಜನರ ಪೈಕಿ ೬ ಮಂದಿ ಅಮೇರಿಕಾದ ನಾಗರಿಕರಿದ್ದರು. ಆತನಿಗೆ ಹಿಡಿದು ಕೊಟ್ಟವರಿಗೆ ಅಥವಾ ಮಾಹಿತಿ ಕೊಟ್ಟವರಿಗೆ ೫೦ ಲಕ್ಷ ಡಾಲರನ (೫೪ ಕೋಟಿ ೭೭ ಲಕ್ಷ ರೂಪಾಯಿಗಳ) ಬಹುಮಾನ ಘೋಷಿಸಿತ್ತು. ಪಾಕಿಸ್ತಾನವು ಯಾವಾಗಲೂ ಸಾಜಿದ ಮೀರ ತನ್ನ ದೇಶದಲ್ಲಿದ್ದುದನ್ನು ನಿರಾಕರಿಸುತ್ತಲೇ ಬಂದಿದೆ. ಅಷ್ಟೆ ಅಲ್ಲ, ಪಾಕಿಸ್ತಾನವು ಆತನು ಸಾವನ್ನಪ್ಪಿರುವ ಬಗ್ಗೆ ಹೇಳಿಕೊಂಡಿತ್ತು.
(ಸೌಜನ್ಯ : India Today)
೧. ಲಾಹೋರನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಮೀರಗೆ ೧೫ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮತ್ತು ೪ ಲಕ್ಷಕ್ಕೂ ಹೆಚ್ಚು ದಂಡವನ್ನೂ ವಿಧಿಸಿತ್ತು. ೪೫ ವರ್ಷದ ಸಾಜಿದ ಮೀರನನ್ನು ಏಪ್ರಿಲನಲ್ಲಿ ಬಂಧಿಸಲಾಗಿತ್ತು, ಅಂದಿನಿಂದ ಆತ ಲಾಹೋರನ ಕೊಟ ಲಖಪತ ಜೈಲಿನಲ್ಲಿ ಇರಿಸಲಾಗಿದೆ.
೨. ಪಾಕಿಸ್ತಾನದ ಪಂಜಾಬ ಪೊಲೀಸರ ಉಗ್ರ ನಿಗ್ರಹ ದಳವು ಮೀರಗೆ ವಿಧಿಸಿರುವ ಶಿಕ್ಷೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಶಿಕ್ಷೆ ಮತ್ತು ನ್ಯಾಯಾಲಯದ ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ತಿಳಿದಿರಲಿಲ್ಲ; ಏಕೆಂದರೆ ಅದು ಜೈಲಿನೊಳಗೆ ಮುಚ್ಚಿದ ಕೋಣೆಯಲ್ಲಿ ಮಾಡಲಾಗಿತ್ತು. ಅಲ್ಲಿ ಮಾಧ್ಯಮದವರಿಗೆ ಹೋಗಲು ಅನುಮತಿ ಇರಲಿಲ್ಲ.
೩. ಮೀರನು ೨೦೦೫ ರಲ್ಲಿ ನಕಲಿ ಪಾಸಪೋರ್ಟ ಮೇಲೆ ಮತ್ತು ನಕಲಿ ಹೆಸರಿನಲ್ಲಿ ಭಾರತಕ್ಕೆ ಬಂದಿದ್ದ.
ಸಂಪಾದಕೀಯ ನಿಲುವು* ಇಂತಹ ಸುಳ್ಳು ಹೇಳುವ ಪಾಕಿಸ್ತಾನದ ಮೇಲೆ ಭಾರತವು ಈಗಲಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೂಲಕ ಮುಂಬಯಿ ದಾಳಿಯ ಸೇಡು ತೀರಿಸಿಕೊಳ್ಳಬೇಕು ! |