ಸಂಜಯ ದತ್ತ ಹಣೆಯ ಮೇಲೆ ತಿಲಕ ಮತ್ತು ಜುಟ್ಟು ಬಿಟ್ಟಿರುವ ಖಳನಾಯಕನ ಪಾತ್ರದಲ್ಲಿ !

  • ‘ಶಮಶೇರಾ’ ಚಲನಚಿತ್ರದಲ್ಲಿ ಹಿಂದೂ ಧರ್ಮದ ಅವಮಾನ !

  • ಸಾಮಾಜಿಕ ಜಾಲತಾಣದಲ್ಲಿ ಚಲನಚಿತ್ರಕ್ಕೆ ವಿರೋಧ !

ಮುಂಬಯಿ – ‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ. ಈ ಪಾತ್ರದಲ್ಲಿ ಅವರನ್ನು ಓರ್ವ ಬ್ರಾಹ್ಮಣ ವ್ಯಕ್ತಿಯಂತೆ ತೋರಿಸಲಾಗಿದೆ. ಹಣೆಯ ಮೇಲೆ ಚಂದನದ ಬಟ್ಟು ಮತ್ತು ಜುಟ್ಟು ಬಿಟ್ಟಿರುವುದು ಮತ್ತು ಕೈ ಯಲ್ಲಿ ಚಾವಟಿ ಇರುವುದು ಕಾಣುತ್ತಿದೆ. ಈ ಸ್ವರೂಪದ ಚಲನಚಿತ್ರದ ನಿರ್ಮಾಪಕರಿಗೆ ಸಾಮಾಜಿಕ ಜಾಲತಾಣದಿಂದ ವಿರೋಧಿಸಲಾಗುತ್ತಿದೆ.

೧. ಟ್ವಿಟ್ಟರ್ ಮೂಲಕ ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಒಬ್ಬರು, ಸಂಜಯ ದತ್ತ ಒಬ್ಬ ಖಳನಾಯಕನ ಪಾತ್ರ ನಿರ್ವಹಿಸುತ್ತಿರುವುದು, ಇದು ಮತ್ತೆ ಹಿಂದಿ ಚಿತ್ರರಂಗದಲ್ಲಿ ‘ಹಿಂದೂ ದ್ವೇಷ ಮುಖ’ ಮತ್ತೊಮ್ಮೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

೨. ಇನ್ನೋಬ್ಬರು ಟ್ವೀಟ್‌ನಲ್ಲಿ, ಈ ಮೊದಲು ನಾನು ಹೇಳಿದ್ದೆ, ‘ಉದ್ದೇಶಪೂರ್ವಕ ಧೋರಣೆಗಳನ್ನು ನಿರ್ಧರಿಸಿ ತೆಗೆಯಲಾದ ಚಲನಚಿತ್ರಗಳಲ್ಲಿ ಯಾವಾಗಲೂ ತಿಲಕ ಹಚ್ಚಿರುವ ಖಳನಾಯಕ ಇರುತ್ತಾನೆ !’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಖಳನಾಯಕ ಬ್ರಾಹ್ಮಣ, ಸಾಧು, ಸಂತರು, ಅರ್ಚಕರ ಪಾತ್ರದಲ್ಲಿ ತೋರಿಸಿ ಹಿಂದಿ ಚಲನಚಿತ್ರ ಅನೇಕ ವರ್ಷದಿಂದ ಹಿಂದೂ ಧರ್ಮದ ಅಪಕೀರ್ತಿ ಮಾಡುತ್ತಾ ಬಂದಿದೆ. ಇನ್ನು ಶಾಶ್ವತವಾಗಿ ಇದರ ಮೇಲೆ ನಿಷೇಧ ಹೇರುವುದು ಆವಶ್ಯಕವಾಗಿದೆ. ಕೇಂದ್ರ ಪರಿಕ್ಷಣ ಮಂಡಳಿ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವಾಗ ಸರಕಾರ ಅದರ ಬಗ್ಗೆ ಇನ್ನು ಮುಂದೆ ಗಂಭೀರವಾಗಿ ಪರಿಗಣಿಸಿ ಇಂತಹ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡುವುದು ನಿಲ್ಲಿಸಬೇಕು, ಎಂದು ಹಿಂದೂಗಳ ಬೇಡಿಕೆಯಾಗಿದೆ !