ನಮಗೆ ಇನ್ನು ಆಫಗಾನಿಸ್ತಾನದಲ್ಲಿ ಇರಲು ಇಷ್ಟವಿಲ್ಲ !

ಆಫಗಾನಿಸ್ತಾನದ ಸಿಕ್ಖರ ದುಃಖ !

ಕಾಬೂಲ್ (ಆಫಗಾನಿಸ್ತಾನ) – ನಮಗೆ ಆಫಗಾನಿಸ್ತಾನದಲ್ಲಿ ಯಾವುದೇ ಭವಿಷ್ಯ ಇಲ್ಲ. ನಮ್ಮ ಎಲ್ಲಾ ಅಪೇಕ್ಷೆಗಳು ಮುಗಿದಿದೆ. ನಾವು ಇಲ್ಲಿ ಭಯದ ನೆರಳಿನಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈಗ ನಾವು ಇಲ್ಲಿ ವಾಸಿಸಲು ಇಚ್ಚಿಸುವುದಿಲ್ಲ, ಎಂಬ ಭಾವನೆಯನ್ನು ಆಫಗಾನಿಸ್ತಾನದಲ್ಲಿ ವಾಸಿಸುವ ಸಿಕ್ಖರು ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಮೊದಲೇ ಕಾಬೂಲ್‌ನಲ್ಲಿ ಒಂದು ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್‌ನಿಂದ ಭಯೋತ್ಪಾದಕ ದಾಳಿ ನಡೆದಿತ್ತು. ಇದರಲ್ಲಿ ಕೆಲವು ಸಿಕ್ಖರು ಗಾಯಗೊಂಡರು. ಅದರ ನಂತರ ಈಗ ಸಿಕ್ಖರಿಂದ ಈ ಮೇಲಿನ ಭಾವನೆ ವ್ಯಕ್ತವಾಗಿದೆ. ಕಳೆದ ವರ್ಷ ಆಫಗಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಬಂದ ನಂತರ ಅನೇಕ ಸಿಕ್ಖರು ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದರು. ಈ ಗುರುದ್ವಾರದ ಮತ್ತು ಪಕ್ಕದಲ್ಲಿ ಸಿಕ್ಖ ಕುಟುಂಬಗಳು ವಾಸವಾಗಿದ್ದಾರೆ. ಈಗ ಇದೆ ಗುರುದ್ವರ ಗುರಿಯಾಗಿಸಿರುವುದರಿಂದ ಅವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಸಂಪೂರ್ಣ ಆಫಗಾನಿಸ್ತಾನದಲ್ಲಿ ಕೇವಲ ೨೦ ಸಿಕ್ಖ ಕುಟುಂಬಗಳು ಅಂದರೆ ಸುಮಾರು ೧೫೦ ಸಿಕ್ಖರು ಉಳದಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನಪ್ರೇಮಿ ಖಲಿಸ್ತಾನವಾದಿಗಳು ಈಗ ಏಕೆ ಮಾತನಾಡುವುದಿಲ್ಲ ? ಭಾರತದಲ್ಲಿ ಅರಾಜಕತೆ ನಿರ್ಮಾಣ ಮಾಡುವವರು ಸಿಕ್ಖರು ಏಕೆ ಮಾತನಾಡುವುದಿಲ್ಲ ?