ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂ ಸಂಘಟನೆಗಳ ಮೂಲಕ ಮೆರವಣಿಗೆಯ ಮೂಲಕ ಒತ್ತಾಯ !

ನೂಪುರ ಶರ್ಮಾ ಇವರನ್ನು ಪುನಃ ಭಾಜಪ ಪಕ್ಷದಲ್ಲಿ ಸೇರಿಸಿಕೊಳ್ಳಬೇಕು !

ಅಜಮೇರ (ರಾಜಸ್ಥಾನ) – ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ. ಅವರನ್ನು ಭಾಜಪಾಗೆ ಮರಳಿ ತೆಗೆದುಕೊಳ್ಳಬೇಕು, ಅದಕ್ಕಾಗಿ ಅಜಮೇರ ಜಿಲ್ಲೆಯಲ್ಲಿಯ ಕಿಶನಗಡದಲ್ಲಿ ಹಿಂದುತ್ವನಿಷ್ಠ ಸಂಘಟನೆ ಮತ್ತು ಇತರ ಕೆಲವು ಸಂಘಟನೆಗಳ ವತಿಯಿಂದ ಮೆರವಣಿಗೆ ತೆಗೆಯಲಾಯಿತು.

ಇದರಲ್ಲಿ ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು. ಅವರ ಕೈಯಲ್ಲಿ ಭಾರತದ ರಾಷ್ಟ್ರ ಧ್ವಜವಿತ್ತು. ಈ ಮೆರವಣಿಗೆ ‘ಶಾಂತಿ ಮೋರ್ಚಾ’ ಎಂದು ಹೇಸರಿಸಲಾಯಿತು. ಇದಕ್ಕೂ ಮುನ್ನ ನೇಪಾಳದಲ್ಲಿ ಅದೇ ರೀತಿ ಬಿಹಾರದ ಅರಾ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ನೂಪುರ ಶರ್ಮಾ ಅವರನ್ನು ಬೆಂಬಲಿಸಿ ಮೆರವಣಿಗೆ ತೆಗೆಯಲಾಗಿತ್ತು. ಮೆರವಣಿಗೆಯ ಆಯೋಜಕರು, ನೂಪುರ ಶರ್ಮಾ ಅವರಿಗೆ ದೇಶ ವಿದೇಶಗಳಿಂದ ಬೆದರಿಕೆಗಳು ಬರುತ್ತಿವೆ. ನಮ್ಮ ಪ್ರಮುಖ ಬೇಡಿಕೆ ಎಂದರೆ ಅವರಿಗೆ ರಕ್ಷಣೆ ನೀಡಬೇಕು. ಒಂದು ವೇಳೆ ಶರ್ಮಾವರ ಮೇಲೆ ಆರೋಪ ಹೊರಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೇ ಈ ಪ್ರಕಾರದ ಬೆದರಿಕೆಗಳು ಏಕೆ ನೀಡಲಾಗುತ್ತಿವೆ ? ಶರ್ಮಾ ಅವರನ್ನು ಭಾಜಪಾದಲ್ಲಿ ಮತ್ತೆ ಸೇರಿಸಿಕೊಳ್ಳಬೇಕು: ಏಕೆಂದರೆ ಶರ್ಮಾ ಅವರು ತಪ್ಪಾಗಿ ಏನೂ ಹೇಳಲಿಲ್ಲ ಇದೂ ಸಹ ನಮ್ಮ ಆಗ್ರಹವಿದೆ ಎಂದು ಹೇಳಿದರು.