ಪಾವಾಗಡ (ಗುಜರಾತ) ಇಲ್ಲಿಯ ಶ್ರೀ ಕಾಳಿಕಾ ಮಾತಾ ದೇವಸ್ಥಾನದ ಉದ್ಘಾಟನೆ ಪ್ರಧಾನಿ ಮೋದಿಯವರ ಹಸ್ತದಿಂದ ೫೦೦ ವರ್ಷಗಳ ನಂತರ ದೇವಸ್ಥಾನದ ಮೇಲೆ ಧ್ವಜ ಹಾರಾಡಿತು


ಪಾವಾಗಡ (ಗುಜರಾತ) – ಪ್ರಧಾನಿ ನರೇಂದ್ರ ಮೋದಿಯವರು ಪಾವಾಗಡದ ಬೆಟ್ಟದ ಮೇಲಿನ ಪುನರ್ ನಿರ್ಮಾಣದ ಶ್ರೀ ಕಾಳಿಕಾ ಮಾತಾ ದೇವಸ್ಥಾನದ ಉದ್ಘಾಟನೆ ಮಾಡಿದರು. ಈ ದೇವಸ್ಥಾನದ ಶಿಖರದ ಮೇಲೆ ೫೦೦ ವರ್ಷಗಳ ನಂತರ ಧ್ವಜ ಹಾರಿಸಲಾಯಿತು. ಮುಸಲ್ಮಾನ ಆಕ್ರಮಣಕಾರಿಗಳಿಂದ ಇಲ್ಲಿಯ ದೇವಸ್ಥಾನದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿತ್ತು. ಅದನ್ನು ತೆರವುಗೊಳಿಸಿ ಮತ್ತೆ ದೇವಸ್ಥಾನ ಕಟ್ಟಲಾಯಿತು. ಈ ಸಮಯದಲ್ಲಿ ಪ್ರಧಾನಿ ಮೋದಿ ಹೇಳಿದರು ಏನೆಂದರೆ, ಇಂದು ಕೆಲವು ಶತಕಗಳ ನಂತರ ದೇವಸ್ಥಾನದ ಶಿಖರದ ಮೇಲೆ ಮತ್ತೆ ಧ್ವಜ ಹಾರಿಸಲಾಯಿತು. ಈ ಧ್ವಜ ಕೇವಲ ನಮ್ಮ ಶ್ರದ್ಧೆ ಮತ್ತು ಆಧ್ಯಾತ್ಮದ ಪ್ರತೀಕ ಅಷ್ಟೇ ಅಲ್ಲದೆ, ಇದು ಶತಕಗಳ ಯುಗ ಬದಲಾಯಿಸುತ್ತದೆ. ಆದರೆ ಶ್ರದ್ಧೆಯ ಶಿಖರ ಶಾಶ್ವತವಾಗಿರುತ್ತದೆ ಅದರ ಪ್ರತಿಕ ಇದು.